• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೊಡ್ಡ ಗೌಡ್ರು ಹಾಗು ಕುಮಾರಸ್ವಾಮಿ ಪ್ರಧಾನಿ ಭೇಟಿಗೆ 2 ಕಾರಣ..?

ಪ್ರತಿಧ್ವನಿ by ಪ್ರತಿಧ್ವನಿ
July 26, 2024
in Top Story, ಕರ್ನಾಟಕ, ದೇಶ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
ದೊಡ್ಡ ಗೌಡ್ರು ಹಾಗು ಕುಮಾರಸ್ವಾಮಿ ಪ್ರಧಾನಿ ಭೇಟಿಗೆ 2 ಕಾರಣ..?
Share on WhatsAppShare on FacebookShare on Telegram

ಪ್ರಧಾನಿ ಹೆಚ್‌.ಡಿ ದೇವೇಗೌಡರು ಹಾಗು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇತ್ತೀಚಿಗೆ ಪ್ರಧಾನಿ ಮೋದಿ ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಿದ್ದ ವೇಳೆ ಸ್ವಾಮಿ ವಿವೇಕಾನಂದರ ಪ್ರತಿಮೆ ಎದುರು ಕುಳಿತು ಧ್ಯಾನ ಮಾಡಿದ್ದರು. ಅದನ್ನೇ ಹೋಲುವಂತೆ ಪೇಯಿಂಟಿಂಗ್ ನೀಡಿದ್ದಾರೆ ದೊಡ್ಡ ಗೌಡ್ರು. ಈ ಬಗ್ಗೆ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ Narendra Modi, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರನ್ನು ನಾನು ಭೇಟಿಯಾಗಿದ್ದೆ.

ADVERTISEMENT

ಲೋಕಕಲ್ಯಾಣ್‌ ಮಾರ್ಗದ ನಂಬರ್‌ 7ರಲ್ಲಿ ಭೇಟಿ ಮಾಡಿ ಚರ್ಚಿಸಿದೆ. ಅವರ ಜ್ಞಾನ, ಹಲವಾರು ಆಯಾಮದ ವಿಚಾರಗಳು ಆಳವಾದ ಮೌಲ್ಯವನ್ನು ಹೊಂದಿವೆ. ಪೇಯಿಂಟಿಂಗ್‌ ಕೊಟ್ಟಿದ್ದು, ನನ್ನನ್ನು ಹಿಂದಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಹೆಚ್‌.ಡಿ ದೇವೇಗೌಡರು ಹಾಗು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಪ್ರಧಾನಿಯನ್ನು ಭೇಟಿ ಮಾಡಿದ್ದಾದರೂ ಯಾಕೆ ಅನ್ನೋ ಅನುಮಾನವನ್ನು ಹುಟ್ಟು ಹಾಕಿದೆ. ರಾಜ್ಯದಲ್ಲಿ ಮುಡಾ ಸೈಟ್‌ ಹಾಗು ವಾಲ್ಮೀಕಿ ನಿಗಮದ ಹಗರಣಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದ್ದು, ಸರ್ಕಾರವನ್ನು ಕಟ್ಟಿ ಹಾಕಲು ವಿರೋಧ ಪಕ್ಷಗಳಾದ ಜೆಡಿಎಸ್‌ ಹಾಗು ಬಿಜೆಪಿ ಕಸರತ್ತು ನಡೆಸುತ್ತಿರುವಾಗ ಈ ಭೇಟಿ ಅನುಮಾನವನ್ನು ಗಟ್ಟಿಗೊಳಿಸುತ್ತಿದೆ. ಸಿದ್ದರಾಮಯ್ಯ ಅವರನ್ನು ಅಣಿಯಲು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದಾರಾ..? ಅನ್ನೋ ಚರ್ಚೆಗಳು ನಡೆಯುತ್ತಿವೆ.

ಜೆಡಿಎಸ್‌‌ ದಿಗ್ಗಜರಾದ ಹೆಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಸುಖಾ ಸುಮ್ಮನೆ ಭೇಟಿಯಾಗಿಲ್ಲ ಅನ್ನೋದು ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಇನ್ನೂ ಒಂದು ವಿಚಾರವೂ ಇರುವ ಸಾಧ್ಯತೆಯಿದೆ. ವಾಲ್ಮೀಕಿ ಹಗರಣ ಹಾಗು ಮುಡಾ ಹಗರಣದ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೂ ರಾಜ್ಯದಲ್ಲಿ ಕೇಂದ್ರ ಬಜೆಟ್‌ನಲ್ಲಿ ಏನೂ ಕೊಟ್ಟಿಲ್ಲ ಅನ್ನೋ ವಿಚಾರವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್‌ನ ಇಬ್ಬರು ಸಂಸದರು ಸೇರಿ ರಾಜ್ಯದಿಂದ 19 ಮಂದಿ ಎನ್‌ಡಿಎ ಸಂಸದರು ಇದ್ದಾರೆ. ಆದರೂ ರಾಜ್ಯದ ಪಾಲಿಗೆ ಹೇಳಿಕೊಳ್ಳುವಂತಹ ಒಂದೇ ಒಂದು ಯೋಜನೆ ಬಂದಿಲ್ಲ ಎನ್ನುವುದು ಕನ್ನಡಿಗರನ್ನು ಆಕ್ರೋಶಿತರನ್ನಾಗಿ ಮಾಡುತ್ತಿದೆ. ಆಂಧ್ರ ಹಾಗು ಬಿಹಾರದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ಕೊಟ್ಟಿರುವ ಜನರಿಗೆ ಬಂಪರ್‌ ಹೊಡೆದಿದ್ದು, ಕೇಂದ್ರ ಬಜೆಟ್‌ನ ಬಹುಪಾಲು ಕೇವಲ ಎರಡು ರಾಜ್ಯದ ಪಾಲಾಗಿದೆ. ಈ ವಿಚಾರವನ್ನೂ ಚರ್ಚೆ ನಡೆಸಿ ಕನ್ನಡಿಗರಿಗೆ ಸಮಾಧಾನ ತರದುವಂತಹ ಘೋಷಣೆಗೂ ಮನವಿ ಮಾಡಿರುವ ಸಾಧ್ಯತೆಗಳಿವೆ. ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರ ಬಜೆಟ್‌ ಬಳಸಿಕೊಂಡಿದೆ ಎನ್ನುವುದು ಕಾಂಗ್ರೆಸ್‌ ಹಾಗು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯ ನೇರ ಆರೋಪ. ಇದೇ ವಿಚಾರಕ್ಕೆ ಈಗಾಗಲೇ ನೀತಿ ಆಯೋಗದ ಸಭೆಯಲ್ಲಿ INDIA ಒಕ್ಕೂಟದ ಎಲ್ಲಾ ಪಕ್ಷಗಳು ಬಹಿಷ್ಕಾರ ಮಾಡಿವೆ. ಬಿಹಾರ ಹಾಗು ಆಂಧ್ರದ ಅಭಿವೃದ್ಧಿ ಆದರೆ ಇಡೀ ದೇಶದ ಅಭಿವೃದ್ಧಿ ಆಗುತ್ತದೆಯೇ ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ. ಇದೀಗ ಹೆಚ್‌.ಡಿ ದೇವೇಗೌಡರು ಹಾಗು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಪ್ರಧಾನಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ರಾಜಕೀಯ ಏನೇ ಇರಲಿ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ, ರಾಜ್ಯಕ್ಕೂ ಒಂದಿಷ್ಟು ಅನುದಾನ ಕೊಡಿಸಿದರೆ ಅನುಕೂಲ ಅಲ್ಲವೇ..?

ಕೃಷ್ಣಮಣಿ

Tags: BJPCongress PartyDelhiHD Deve GowdaLokSabhaparlimentParliment sessionಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇವತ್ತು ಕೊಲ್ಲೂರಿನಲ್ಲಿ ದರ್ಶನ್‌ ಬಿಡುಗಡೆಗಾಗಿ ವಿಶೇಷ ಹೋಮ..!

Next Post

ಹೆಚ್ಚಿದ ಭಯೋತ್ಪಾದಕ ಧಾಳಿ ; ಪಾಕಿಸ್ಥಾನದ ವಿರುದ್ದ ಸೇನಾ ಕಾರ್ಯಾಚರಣೆಗೆ ಶಿವಸೇನೆ ಆಗ್ರಹ

Related Posts

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

by ಪ್ರತಿಧ್ವನಿ
April 11, 2026
0

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence)...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post
ಹೆಚ್ಚಿದ ಭಯೋತ್ಪಾದಕ ಧಾಳಿ ; ಪಾಕಿಸ್ಥಾನದ ವಿರುದ್ದ ಸೇನಾ ಕಾರ್ಯಾಚರಣೆಗೆ ಶಿವಸೇನೆ ಆಗ್ರಹ

ಹೆಚ್ಚಿದ ಭಯೋತ್ಪಾದಕ ಧಾಳಿ ; ಪಾಕಿಸ್ಥಾನದ ವಿರುದ್ದ ಸೇನಾ ಕಾರ್ಯಾಚರಣೆಗೆ ಶಿವಸೇನೆ ಆಗ್ರಹ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada