ರಾಜ್ಯದಲ್ಲಿ ಡೆಂಘೀ (Dengue) ಪ್ರಕರಣ ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆ, ಇದೀಗ ಈ ಪ್ರಕರಣ ಹೈಕೋರ್ಟ್ (High court) ಮೆಟ್ಟಿಲೇರಿದೆ. ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಹೆಚ್ಚಳಕ್ಕೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ (PIL) ದಾಖಲು ಮಾಡಿಕೊಂಡಿದೆ.ಈ ವೇಳೆ ಸದ್ಯ ಡೆಂಘೀ ಬಗ್ಗೆ ರಾಜ್ಯ ಸರ್ಕಾರ ಹೈಕೋರ್ಟ್ ಗೆ ವರದಿ ಸಲ್ಲಿಕೆ ಮಾಡಿದೆ. ಕಳೆದ ವಿಚಾರಣೆ ವೇಳೆ ಈ ಬಗ್ಗೆ ನ್ಯಾಯಾಲಯ ಸರ್ಕಾರಕ್ಕೆ ತುರ್ತು ನೊಟೀಸ್ ನೀಡಿತ್ತು.
ರಾಜ್ಯದಲ್ಲಿ ಡೆಂಘೀ ಪರಿಸ್ಥಿತಿ ಹೇಗಿದೆ & ಇದರ ತಡೆಗೆ ತೆಗೆದುಕೊಳ್ತಿರುವ ಕ್ರಮಗಳ ಬಗ್ಗೆ ವರದಿ ನೀಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಪ್ರಕರಣಕ್ಕೆ ಅಮೈಕಾಸ್ ಕ್ಯೂರಿ ನೇಮಿಸಿ ಆದೇಶ ಹೊರಡಿಸಿದೆ.

ಹಿರಿಯ ವಕೀಲ ಕೆ.ಎನ್.ಫಣೀಂದ್ರರನ್ನ ಅಮೈಕಾಸ್ ಕ್ಯೂರಿಯಾಗಿ ನೇಮಕ ಮಾಡಲಾಗಿದ್ದು,ವಿಚಾರಣೆ ಮುಂದಿನ ಮಂಗಳವಾರಕ್ಕೆ ಹೈಕೋರ್ಟ್ ಮುಂದೂಡಿಕೆ ಮಾಡಿದೆ.













