ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಕ್ರೇಜ್ ಪ್ರತಿಯೊಬ್ಬರಲ್ಲೂ ಹೆಚ್ಚಾಗಿದೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕ ಅವರವರೆಗೂ ಮೊಬೈಲನ್ನು ಬಳಕೆ ಮಾಡ್ತಾರೆ..ಅದರಲ್ಲೂ ಕೂಡ ಸೋಶಿಯಲ್ ಮೀಡಿಯಾ ಕ್ರೇಜ್ ಹೆಚ್ಚಾಗಿದೆ. ಯಾರ ಸಹಾಯವಿಲ್ಲದೆ ಮಕ್ಕಳು ತಮ್ಮಷ್ಟಕ್ಕೆ ಫೋನನ್ನು ತೆಗೆದುಕೊಂಡು ವಿಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ದಾರೆ..

ಮೊಬೈಲ್ ಎಡಿಕ್ಷನ್ ಎಷ್ಟಾಗಿದೆ ಅಂದ್ರೆ ಊಟ ತಿಂಡಿಯ ಸಮಯದಲ್ಲೂ ಮಕ್ಕಳು ಮೊಬೈಲ್ ಬಿಟ್ಟು ಅಲ್ಲಾಡುವುದಿಲ್ಲ. ಬಗೆ ಬಗೆಯ ಆನ್ಲೈನ್ ಗೇಮ್ ಗಳು ಮಕ್ಕಳನ್ನ ಆಕರ್ಷಿಸುತ್ತಿದೆ. ಮೊಬೈಲ್ ಬಳಕೆಯಿಂದ ಮಕ್ಕಳು ಇಲ್ಲಸಲ್ಲದ ಚಟಗಳಿಗೆ ಮೊರೆ ಹೋಗ್ತಿದ್ದಾರೆ. ತನ್ನ ವಯಸ್ಸಿಗೆ ಮೀರಿದ, ಬೇಡದ ವಿಚಾರಗಳನ್ನ ಮಕ್ಕಳಿಗೆ ಈ ಫೋನ್ ನಿಂದ ಗೊತ್ತಾಗುವಂತಾಗಿದೆ.

ಇಷ್ಟು ಮಾತ್ರವಲ್ಲದೇ ಮಕ್ಕಳು ಅತಿಯಾದ ಮೊಬೈಲ್ ನೋಡುವುದರಿಂದ ಸಣ್ಣ ವಯಸ್ಸಿನಲ್ಲಿಯೇ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ ಇಸ್ ಸ್ಮಾರ್ಟ್ ಫೋನ್ ಯುಗದಿಂದ ಮಕ್ಕಳು ಮೆಂಟಲಿ ಹಾಗೂ ಫಿಸಿಕಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.. ಈ ವಿಚಾರ ಹೆತ್ತವರಿಗೆ ಚಿಂತೆಗೀಡಾಗುವಂತೆ ಮಾಡಿದೆ..ಮಕ್ಕಳ ಈ ಮೊಬೈಲ್ ಎಡಿಕ್ಷನ್ ಅನ್ನ ಬಿಡಿಸಲು ಇಲ್ಲಿದೆ ಕೆಲವೊಂದು ಸಿಂಪಲ್ ಟಿಪ್ಸ್.

ಮಕ್ಕಳಿಗೆ ಇತರೆ ಮಕ್ಕಳೊಂದಿಗೆ ಆಡಲು ಬಿಡಿ
ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಯರು ಮಕ್ಕಳನ್ನ ಹೊರಗಡೆ ಆಡಲು ಬಿಡುವುದಿಲ್ಲ ಕಾರಣ ಎಲ್ಲಿ ಬೀಳ್ತಾರೋ ಎಲ್ಲಿ ಏಟು ಮಾಡಿಕೊಳ್ಳುತ್ತಾರೆ ಅನ್ನೋ ಭಯದಿಂದ. ಹಾಗಾಗಿ ಮಕ್ಕಳು ಮನೆಯೊಳಗೆ ಇದ್ದು ಟಿವಿ ಹಾಗೂ ಫೋನ್ಗೆ ಎಡಿಕ್ಷನ್ ಹೆಚ್ಚಾಗಿದೆ. ಆದರೆ ಪ್ರತಿದಿನ ಮಕ್ಕಳು ಇತರೆ ಮಕ್ಕಳ ಜೊತೆ ಆಟವಾಡಿದರೆ ಫಿಸಿಕಲಿ ಇಂಪ್ರೂವ್ಮೆಂಟ್ಸ್ ಹೆಚ್ಚಿರುತ್ತೆ. ಮಾತನಾಡುವುದನ್ನು ಕಲಿತರೆ, ಚುರುಕಾಗಿರುತ್ತಾರೆ ಹಾಗೂ ಮೆಂಟಲಿ ಹೆಲ್ದಿ ಆಗಿರುತ್ತಾರೆ.. ಫೋನ್ ಮರೆತು ಹೋಗುತ್ತದೆ.

ಊಟ ತಿಂಡಿಯ ಸಮಯದಲ್ಲಿ ಮೊಬೈಲ್ ನೀಡಬೇಡಿ:
ಮಕ್ಕಳಿಗೆ ಫೋನ್ ನೀಡದಿದ್ದರೆ ಊಟ ಮಾಡೋದೇ ಇಲ್ಲ ಅಂತ ಹಠ ಹಿಡಿದರೆ, ಇಂತಹ ಸಂದರ್ಭದಲ್ಲಿ ತಂದೆ ತಾಯಿಯರು ಮಗು ಊಟ ಮಾಡಿದ್ರೆ ಸಾಕು, ಮೊಬೈಲ್ ಕೊಡೋಣ ಅಂತ ಕೊಡ್ತಾರೆ.. ಆದ್ರೆ ಮಗುವಿಗೆ ಫೋನನ್ನು ಕೊಟ್ಟು ಊಟ ಮಾಡಿಸುವುದರಿಂದ ಏನು ಸೇವಿಸುತ್ತಿದ್ದೇವೆ ಅನ್ನುವ ಅರಿವು ಇರುವುದಿಲ್ಲ ಕಾನ್ಸನ್ಟ್ರೇಶನ್ ಎಲ್ಲ ಮೊಬೈಲ್ ಮೇಲೆ ಇರುತ್ತದೆ. ಹೀಗೆ ಒಂದೆರಡು ದಿನ ಫೋನನ್ನು ಕೊಟ್ಟರೆ ಪ್ರತಿದಿನ ಊಟ ತಿಂಡಿ ಮಾಡುವಾಗ ಮೊಬೈಲನ್ನು ನೀಡಿ ಎಂದು ಮಕ್ಕಳು ಹಠ ಹಿಡಿಯುವುದು ಸಾಮಾನ್ಯ ಮುಂದಿನ ದಿನಗಳಲ್ಲಿ ಇದು ಅಭ್ಯಾಸವು ಆಗುತ್ತದೆ.

ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯಿರಿ:
ತಂದೆ ತಾಯಿಯರು ತಮ್ಮ ಕೆಲಸ ಮನೆ ಕೆಲಸ ಎಂದು ತುಂಬಾನೇ ಬಿಸಿ ಇರುತ್ತಾರೆ ಇಂಥ ಸಂದರ್ಭದಲ್ಲಿ ಮನೆಯಲ್ಲಿ ಮಕ್ಕಳು ಒಬ್ಬಂಟಿಯಾಗಿರುವುದರಿಂದ ಹಟವನ್ನ ಮಾಡುವಂತದ್ದು ಹೆಚ್ಚಾಗುತ್ತದೆ. ಆಗ ಮಕ್ಕಳನ್ನು ಸುಮ್ಮನಿಸಲು ಕೈಗೆ ಫೋನನ್ನು ಕೊಡ್ತಾರೆ.. ಇದು ಪೋಷಕರು ಮಾಡುವ ಮೊದಲ ತಪ್ಪು.. ಬದಲಿಗೆ ನಿಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಒಂದಿಷ್ಟು ಕಾಲ ಸಮಯವನ್ನು ಮಕ್ಕಳಿಗೆ ಮೀಸಲಿಟ್ಟು ಅವರ ಜೊತೆ ಕಾಲ ಕಳೆದರೆ ಮೊಬೈಲ್ ಅಡಿಕ್ಷನ್ ಅನ್ನುವಂಥದ್ದು ಕಡಿಮೆಯಾಗುತ್ತದೆ.

ದೊಡ್ಡವರು ಫೋನ್ ಬಳಸುವುದನ್ನು ಕಡಿಮೆ ಮಾಡಿ:
ಸ್ಮಾರ್ಟ್ ಫೋನ್ ಯುಗದಲ್ಲಿರುವ ನಾವು,ಹೆಚ್ಚು ಮೊಬೈಲ್ ಅನ್ನು ಬಳಕೆ ಮಾಡ್ತೀವಿ. ಮಕ್ಕಳಿಗೆ ಬುದ್ಧಿ ಹೇಳುವ ಬದಲು ದೊಡ್ಡವರೇ ಪ್ರತಿ ಒಂದು ಸಂದರ್ಭದಲ್ಲಿ ಫೋನ್ ಬಳಕೆ ಮಾಡುತ್ತಿದ್ದಾರೆ. ಊಟ ಮಾಡುವಾಗ,ವಾಶ್ರೂಮ್ ಯೂಸ್ ಮಾಡುವಾಗ, ಕೆಲಸ ಮಾಡುವಾಗ ಹೀಗೆ ಹೇಳ್ತಾ ಹೋದ್ರೆ ತುಂಬಾ ಇವೆ. ಇದನ್ನ ನೋಡುವ ಮಕ್ಕಳು ತಾವು ಫೋನ್ ಬಳಸಬೇಕು ಎಂದು ಹಠ ಮಾಡುವುದು ತಪ್ಪಲ್ಲ. ಹಾಗಾಗಿ ತಂದೆ ತಾಯಿಯರು ಫೋನ ಅವಾಯ್ಡ್ ಮಾಡಬೇಕು ವಿಶೇಷವಾಗಿ ಮಕ್ಕಳ ಮುಂದೆ ಫೋನನ್ನು ಹೆಚ್ಚು ಬಳಸಬಾರದು.

ಒಟ್ಟಿನಲ್ಲಿ ಈ ಮೊಬೈಲ್ ಬಳಸುವುದರಿಂದ ಮಕ್ಕಳು ಸಾಕಷ್ಟು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಹಾಗಾಗಿ ಮಕ್ಕಳಿಂದ ಸ್ಮಾರ್ಟ್ಫೋನ್ ದೂರವಿಡಿ.