ಕಾಪಿರೈಟ್ (Copyright) ಉಲ್ಲಂಘನೆ ಮಾಡಿದ ಆರೋಪದಡಿ ನಟ ರಕ್ಷಿತ್ ಶೆಟ್ಟಿ (Rakshith shetty) ವಿರುದ್ಧ ಬೆಂಗಳೂರಿನ (bangalore) ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಎರಡು ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡ್ಕೊಂಡಿರೋ ಆರೋಪದಡಿ ಎಫ್ ಐಆರ್ ದಾಖಲಾಗಿದೆ.
ನವೀನ್ ಕುಮಾರ್ (Naveen ku,ar) ಎಂಬುವವರು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ನವೀನ್ ಕುಮಾರ್ ಎಂಆರ್‌ಟಿ ಮ್ಯೂಸಿಕ್‌ನ (MRT music) ಪಾಲುದಾರಿಕೆ ಹೊಂದಿದ್ದಾರೆ. ನ್ಯಾಯ ಎಲ್ಲಿದೆ ಹಾಗೂ ಗಾಳಿಮಾತು ಚಿತ್ರದ ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ (Bachelor party) ಯಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಪರವ್ವಾ ಸ್ಟುಡಿಯೋಸ್ (Paramvah Studios) ಹಾಗೂ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿದ್ದು, ಈ ಸಂಬಂಧ ನಟ ರಕ್ಷಿತ್ ಶೆಟ್ಟಿಗೆ ಯಶವಂತಪುರ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಇದುವರೆಗೂ ರಕ್ಷಿತ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಹುಶಃ ಶೆಟ್ಟರು ಕೋರ್ಟ್ ಮೆಟ್ಟಿಲೇರುವ ಸಾದ್ಯತೆಯಿದೆ.