ಪ್ರಪಂಚದಾದ್ಯಂತ ವರ್ಷದಿಂದ ವರ್ಷಕ್ಕೆ ಅಗ್ನಿ ಅವಘಡಗಳ (Fire accidents) ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಬೆಂಕಿ ನಂದಿಸಲು ಜಗತ್ತಿನ ಹಲವೆಡೆ ಈಗಾಗಲೇ ರೋಬೋಟ್‌ಗಳನ್ನ (Robots) ಬಳಸಿಕೊಳ್ಳಲಾಗ್ತಿದೆ. ಈ ಪ್ರಯೋಗದಲ್ಲಿ ಮಾನವ ಯಶಸ್ಸು ಕಂಡಿದ್ದು ಈಗಾಗಲೇ ಹಲವು ಕಾರ್ಯಾಚರಣೆಯಲ್ಲಿ ಫಲಕಂಡಿದ್ದಾರೆ.
ಅಗ್ನಿ ಅವಘಡದ ಸಂದರ್ಭದಲ್ಲಿ ಕಿರಿದಾದ ರಸ್ತೆಗಳು, ಗೋಡೌನ್ ಬೇಸ್‌ಮೆಂಟ್, ಬಹುಮಹಡಿಗಳು ಸೇರಿದಂತೆ ಕೆಲವು ಸ್ಥಳಗಳಲ್ಲಿ ಬೆಂಕಿ ನಂದಿಸಲು ಕಷ್ಟವಾಗುತ್ತದೆ. ಆದ್ದರಿಂದ ಅಗ್ನಿ ಶಾಮಕ ದಳದ ಜೊತೆ ರೋಬೋಟ್‌ಗಳು ಕೂಡ ಸೇರ್ಪಡೆಯಾಗಲಿದ್ದು, ಬೆಂಕಿ ನಂದಿಸಲು ಕಷ್ಟವಾಗುವ ಟೈಂನಲ್ಲಿ ತಮ್ಮ ಕೆಲಸ ಆರಂಭಿಸಲಿವೆ.
ದೆಹಲಿ (Delhi), ಮುಂಬೈ (Mumbai), ಹರಿಯಾಣ (Harlyana) ಸೇರಿದಂತೆ ಕೆಲ ರಾಜ್ಯಗಳಲ್ಲಿ ಈಗಾಗಲೇ ಈ ರೋಬೋಟ್‌ಗಳು ಎಂಟ್ರಿ ಕೊಟ್ಟಿವೆ. ಇನ್ನೂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ₹1 ಕೋಟಿ ವೆಚ್ಚದಲ್ಲಿ 10 ರೊಬೋಟ್‌ಗಳ ಖರೀದಿಗೆ ಅಗ್ನಿಶಾಮಕ ದಳ ತಯಾರಿ ನಡೆಸಿದೆ. ಈ ರೋಬೋಗಳು ಯಾವರೀತಿ ಕೆಲಸ ನಿರ್ವಹಿಸಲಿವೆ ಎಂಬುದು ಕುತೂಹಲ ಮೂಡಿಸಿದೆ.