
ಸನ್ನಡತೆ ಅಧಾರದ ಮೇಲೆ ಬಿಡುಗಡೆಯಾದ ಒಬ್ಬೊಬ್ಬ ಶಿಕ್ಷಾ ಬಂಧಿಗಳದ್ದು(Prisoners) ಒಂದೊಂದು ಕಣ್ಣೀರ ಕಥೆಯಿದೆ. ಹೌದು, ಕಮಿಷನ್ ಕೊಡಲಿಲ್ಲ ಎಂದು ತಂದೆ ಕಪಾಳಕ್ಕೆ ಹೊಡೆದ ಎಂಜಿನಿಯರ್ ಮೇಲಿನ ಪ್ರತೀಕಾರ ತೀರಿಸಿಕೊಳ್ಳಲು ಕಾನೂನು ವ್ಯಾಸಂಗ ಮಾಡುತ್ತಿದ್ದ ಮಗ, ಎಂಜಿನಿಯರ್ ಕೈ ಕಡಿಯಲು ಸ್ಕೆಚ್ ಹಾಕಿದ್ದ. ಆದರೆ, ಕೈ ಕಡಿಯುವ ಬರದಲ್ಲಿ ತುರುವನೂರು ಸಿದ್ದಾರೂಡ ಎಂಜಿನಿಯರ್ ತಲೆಯನ್ನೇ ಕಡಿದಿದ್ದ. ಈ ಹಿನ್ನಲೆ 2003 ರಲ್ಲಿ ಜೈಲಿಗೆ ಬಂದ ಸಿದ್ದಾರೂಡ, ಬರೋಬ್ಬರಿ 21 ವರ್ಷ ಜೈಲುವಾಸದ ಬಳಿಕ ಬಿಡುಗಡೆ ಆಗಿದ್ದ.
ಪೆರೋಲ್ ಮೇಲೆ ಹೊರಬಂದು ‘ಪ್ರೀತಿ’
ಇನ್ನು 21 ವರ್ಷಗಳ ಜೈಲುವಾಸ ಅನುಭವಿಸಿ ಬಿಡುಗಡೆಯಾದ ಬಳಿಕ ಅರ್ಧಕ್ಕೆ ನಿಂತಿದ್ದ ಎಲ್ಎಲ್ ಬಿ ಪದವಿಯನ್ನು ಪೂರ್ಣ ಮಾಡಿದ. ಈ ನಡುವೆ ಪೆರೋಲ್ ಮೇಲೆ ಹೊರಗೆ ಬಂದಿದ್ದ ವೇಳೆ ಯುವತಿ ಜೊತೆ ಪ್ರೇಮ ಬೆಳೆದು, ಆಕೆಯನ್ನು ಮದುವೆಯಾಗಿ ಗುಂಟೂರಿಗೆ ಎಸ್ಕೇಪ್ ಆಗಿದ್ದ. ಮೊದಲೇ ಪೆರೋಲ್ ಮೇಲೆ ಹೊರ ಹೋದ ಸಜಾ ಬಂಧಿ ಪರಾರಿ ಎಂದು ಆಗ ಮತ್ತೊಂದು ಕೇಸ್ ದಾಖಲಾಗಿ, ಮತ್ತೆ ಹತ್ತಾರು ವರ್ಷ ಜೈಲುವಾಸ ಅನುಭವಿಸಿದ್ದ.

ಜೈಲುವಾಸದಲ್ಲಿಯೇ ‘ಕೊಲೆಗಾರನ ಪ್ರೇಮದ ಸಾಲುಗಳು’ ಕವನ ಸಂಕಲನ ರಚನೆ
ಹೌದು, ಜೈಲುವಾಸದಲ್ಲಿಯೇ ‘ಕೊಲೆಗಾರನ ಪ್ರೇಮದ ಸಾಲುಗಳು’ ಕವನ ಸಂಕಲನ ರಚನೆ ಮಾಡಿ, ತನ್ನ ಬದುಕಿನ ಪ್ರಮುಖ ಸಂಗತಿಗಳ ಜೊತೆ ಪ್ರೇಮದ ಬಗ್ಗೆ ಕವನ ಸಂಕಲನದಲ್ಲಿ ಉಲ್ಲೇಖ ಮಾಡಿದ್ದಾನೆ. ಯಾರೂ ಕೂಡ ಕೋಪದ ಕೈಗೆ ಬುದ್ಧಿ ಕೊಡಬೇಡಿ. ಬೇರೆ ಯಾರದೋ ಮುಲಾಜಿಗೆ ಅಪರಾಧ ಕೃತ್ಯವೆಸಗಿ ನಿಮ್ಮ ಬದುಕು ಹಾಳು ಮಾಡಿಕೊಳ್ಳಬೇಡಿ. ಮನುಷ್ಯ ಜನ್ಮ ಒಮ್ಮೆ ಮಾತ್ರ ಸಿಗಲಿದೆ. ಅದನ್ನು ಇತರರಿಗೆ ಒಳ್ಳೆಯದು ಮಾಡಲು, ತಾವು-ತಮ್ಮ ಕುಟುಂಬ ನೆಮ್ಮದಿಯಾಗಿ ಬದುಕಲು ಬಳಸಿ ಎಂದು ಮನವಿ ಮಾಡಿದ್ದ.
ತಂದೆ ಕೊಂದವರ ಮೇಲಿನ ಪ್ರತೀಕಾರಕ್ಕೆ ಬರಿದಾದ ಜೀವನ; 20 ವರ್ಷದ ಬಳಿಕ ಬಿಡುಗಡೆ
ಇದು ಮತ್ತೊಬ್ಬ ಕೈದಿಯ ಕಥೆ. ಹೌದು, 20 ವರ್ಷದ ಜೈಲುವಾಸದ ಬಳಿಕ ಸನ್ನಡತೆ ಆಧಾರದ ಮೇಲೆ ಇಂಡಿ ತಾಲ್ಲೂಕಿನ ಆನಂದ ಎಂಬಾತ ಬಿಡುಗಡೆಗೊಂಡಿದ್ದಾನೆ. ‘ತಂದೆ ಕೊಂದವರ ಮೇಲಿನ ಪ್ರತೀಕಾರ ತೀರಿಸಿಕೊಳ್ಳಲು ಹೋಗಿ ಸೇರಿದ್ದ. ಆನಂದ್ ತಂದೆ ಗ್ರಾಮ ಪಂಚಾಯತಿ ಅಧ್ಯಕ್ಷ. ಹೀಗಾಗಿ ಆತನ ಅಧ್ಯಕ್ಷತೆಯಲ್ಲಿ ಪಕ್ಕದ ಊರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗಿತ್ತು. ಅಷ್ಟಕ್ಕೆ ಕುಪಿತಗೊಂಡ ಅದೇ ಗ್ರಾಮದ ಕುಟುಂಬವೊಂದು ಆನಂದ್ ತಂದೆಯನ್ನು ಆತನ ಕಣ್ಣಮುಂದೆಯೇ ಬರ್ಬರ ಹತ್ಯೆ ಮಾಡಲಾಗಿತ್ತು.














