• Home
  • About Us
  • ಕರ್ನಾಟಕ
Thursday, November 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೊಡಗಿಗೂ ಕಾಲಿಟ್ಟ ವೇಶ್ಯಾವಾಟಿಕೆ ದಂಧೆಯ ವಂಚಕ ಜಾಲ: ಹುಡುಗಿ ಕೊಡಿಸುವ ಆಮಿಷವೊಡ್ಡಿ ಮೋಸ

ಪ್ರತಿಧ್ವನಿ by ಪ್ರತಿಧ್ವನಿ
July 9, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
ಕೊಡಗಿಗೂ ಕಾಲಿಟ್ಟ ವೇಶ್ಯಾವಾಟಿಕೆ ದಂಧೆಯ ವಂಚಕ ಜಾಲ: ಹುಡುಗಿ ಕೊಡಿಸುವ ಆಮಿಷವೊಡ್ಡಿ ಮೋಸ
Share on WhatsAppShare on FacebookShare on Telegram

ಕೋವರ್‌ ಕೊಲ್ಲಿ ಇಂದ್ರೇಶ್‌

ADVERTISEMENT

ಮಡಿಕೇರಿ ; ನಗರ ಪ್ರದೆಶದಲ್ಲಿ ವ್ಯಾಪಕವಾಗಿರುವ ಆನ್‌ಲೈನ್‌ ವಂಚಕರು ಈಗ ವೇಶ್ಯೆಯರನ್ನು ಒದಗಿಸುವ ಆಮಿಷವೊಡ್ಡಿ ಹಣ ಸಾರ್ವಜನಿಕರನ್ನು ವಂಚಿಸುತಿದ್ದಾರೆ. ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿ ನಿವಾಸಿ ಮಂಜು ಎಂಬುವವರು ದಿನಾಂಕ: 29-06-2024 ರಂದು ಮೊಬೈಲ್ ನಲ್ಲಿರುವ Locanto App ನಲ್ಲಿ Kushalnagar Top Model Sexy Aunties Service Available Kushalnagar – ಎಂಬ ಜಾಹೀರಾತಿನ ಸೈಟ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಒಬ್ಬ ವ್ಯಕ್ತಿ ಮಾತನಾಡಿ ನಾನು ಕುಶಾಲನಗರದ ಕಾಳೇಘಾಟ್ ಲಾಡ್ಜ್ ಮೇನೇಜರ್ ಎಂಬುದಾಗಿ ಪರಿಚಯಿಸಿಕೊಂಡು ಲಾಡ್ಜ್‌ನಲ್ಲಿ ಯುವತಿಯರಿಂದ ಸೆಕ್ಸ್/ಮಸಾಜ್ ಮಾಡಿಸಲಾಗುವುದು ಹಾಗೂ ಆನ್‌ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಯುವತಿಯರ ಸೇವೆಗೆ ಏರ್ಪಾಡು ಮಾಡಲಾಗುವುದು ಎಂದು ತಿಳಿಸಿದ.
ದೂರುದಾರರ Whatsapp ಗೆ ಕೆಲವು ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿ ಕೊಟ್ಟು ತಮ್ಮ ಸೇವೆಗೆ ಒಂದು ಗಂಟೆಗೆ ರೂ. 1500/- ಮತ್ತು ಒಂದು ರಾತ್ರಿಗೆ ರೂ. 4000/- ಗಳ ಹಣ ನೀಡಬೇಕಾಗುವುದು ಎಂದು ಹೇಳಿದ.


ದೂರುದಾರರೂ ಗೂಗಲ್ ಪೇ ಮುಖಾಂತರ ರೂ. 1500/- ಹಣವನ್ನು ಕಳುಹಿಸಿದ್ದು, ಅದೇ ವ್ಯಕ್ತಿ ಕರೆ ಮಾಡಿ ಕಾಳೇಘಾಟ್ ಲಾಡ್ಜ್ ಬಳಿ ಬಂದು ಲೋಕೇಷನ್ ಕಳುಹಿಸುವಂತೆ ಮತ್ತು ಯಾವ ಬಣ್ಣದ ಬಟ್ಟೆ ಹಾಕಿದ್ದೀರಾ ಎಂದು ತಿಳಿಸುವಂತೆ ಹೇಳಿದ.
ಆ ವ್ಯಕ್ತಿಯು ಹೇಳಿರುವಂತೆ ಕಾಳೇಘಾಟ್ ಲಾಡ್ಜ್‌ನ ಬಳಿ ಹೋಗಿ ಕರೆ ಮಾಡಿದಾಗ ಪುನಃ ಆನ್‌ಲೈನ್‌ನಲ್ಲಿ ಹಣ ಹಾಕಬೇಕು ಎಂದು ಹೇಳಿದ್ದರಿಂದ ಅನುಮಾನ ಬಂದು ಕಾಳೇಘಾಟ್ ಲಾಡ್ಜ್ ಗೆ ತೆರಳಿ ರಿಸೆಪ್‌ಶನ್‌ನಲ್ಲಿ ಈ ಮೇಲಿನ ವಿಚಾರ ಹೇಳಿದಾಗ ಆ ತರಹದ ಯಾವುದೇ ರೀತಿಯ ಅವ್ಯವಹಾರ ಇರುವುದಿಲ್ಲ ಹಾಗೂ ಇದೇ ವಿಚಾರ ಹೇಳಿಕೊಂಡು 3-4 ಜನ ಬಂದಿದ್ದರು ನಿಮಗೆ ಯಾರೋ ಮೋಸ ಮಾಡಿದ್ದಾರೆ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಅಲ್ಲಿ ತಿಳಿಸಿರುತ್ತಾರೆ.
ಅದರಂತೆ ಅಪರಿಚಿತ ವ್ಯಕ್ತಿಗಳು ಕಾಳೇಘಾಟ್ ಹೋಟೇಲ್ ಮತ್ತು ಲಾಡ್ಜ್ ಮೇನೇಜರ್ ಎಂದು ಹೆಸರು ಹೇಳಿಕೊಂಡು ಲಾಡ್ಜ್‌ನಲ್ಲಿ ಹೆಂಗಸರಿಂದ ಸೆಕ್ಸ್ ಮಸಾಜ್ ಮಾಡಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚನೆ ಮಾಡಿರುವವರನ್ನು ಪತ್ತೆಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದಿನಾಂಕ: 29-06-2024 ರಂದು ದೂರು ನೀಡಿದ್ದರು.


ಈ ಕುರಿತು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ 66(ಸಿ), 66 (ಡಿ) ಐಟಿ ಆಕ್ಟ್ & 419, 420, 468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೋಲೀಸರು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ & ಸಾಕ್ಷಾಧರಗಳನ್ನು ಕಲೆಹಾಕಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 06-07-2024 ರಂದು ಹಾಸನ ಜಿಲ್ಲೆ ಮೂಲದ 08 ಜನ ಆರೋಪಿಗಳನ್ನು ಬೆಂಗಳೂರುನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಆರೋಪಿಗಳನ್ನು ಮಂಜನಾಥ, 29 ವರ್ಷ, ಸುಳ್ಳಕ್ಕಿ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ,ಸಂದೀಪ್ ಕುಮಾರ್.ಸಿ.ಎಸ್, 25 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ.,ರಾಕೇಶ್.ಸಿ.ಬಿ, 24 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ, ಜಯಲಕ್ಷ್ಮೀ.ಕೆ, 29 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ., ಸಹನ.ಎಸ್, 19 ವರ್ಷ, ರಾಮನಗರ ಗ್ರಾಮ ಬೇಲೂರು ತಾ||, ಹಾಸನ ಜಿಲ್ಲೆ, ಪಲ್ಲವಿ, 30 ವರ್ಷ, ರಾಮನಗರ ಗ್ರಾಮ, ಬೇಲೂರು ತಾ||, ಹಾಸನ, ಅಭಿಷೇಕ್, 24 ವರ್ಷ, ಇರಗಲ್ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ, ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕಿ ಯೊಬ್ಬಳ ಹೆಡೆಮುರಿ ಕಟ್ಟಿದ್ದಾರೆ.


ಆರೋಪಿಗಳು ಒಟ್ಟಾಗಿ ಆನ್‌ಲೈನ್‌ ಜಾಲತಾಣಗಳ ಮೂಲಕ ಯುವತಿಯರನ್ನು ಒದಗಿಸುವುದಾಗಿ ಆಮಿಷವೊಡ್ಡುತಿದ್ದರು. ರಾಜ್ಯದ ಯಾವುದೇ ಊರಿನಲ್ಲೂ ಇವರು ಯುವತಿಯರು ಸಿಗುತ್ತಾರೆ ಎಂದು ಜಾಹೀರಾತು ಪ್ರಕಟಿಸುತಿದ್ದರು. ಈ ದಂಧೆಯ ಮೂಲಕವೇ ಇವರು ಲಕ್ಷಾಂತರ ರೂಪಾಯಿ ಗಳಿಸಿದ್ದು ಮೋಜಿನ ಜೀವನ ನಡೆಸುತಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ.


ಗ್ರಾಹಕರನ್ನು ಹೋಟೆಲ್‌ ವರೆಗೆ ಬರಲು ಹೇಳಿ ಅಲ್ಲಿಯೂ ಪುನಃ ಹಣ ಹಾಕಿಸಿಕೊಳ್ಳುತಿದ್ದರು. ನಂತರ ಇವತ್ತು ಸೇವೆ ರದ್ದಾಗಿದೆ ಎಂದು ಸುಳ್ಳು ನೆಪ ಒಡ್ಡುತಿದ್ದರು. ಹಣ ಕಳೆದುಕೊಂಡವರು 2-5 ಸಾವಿರ ಆಗಿರುವುದರಿಂದ ಪೋಲೀಸರಿಗೆ ದೂರು ನೀಡಲು ಮುಜುಗರವಾಗಿ ದೂರು ನೀಡುತ್ತಿರಲಿಲ್ಲ ಇದೇ ಇವರಿಗೆ ವರದಾನ ಆಗಿತ್ತು.


ಆರೋಪಿಗಳಿಂದ ಕೃತ್ಯಕ್ಕೆ ಬಳಸಿಕೊಳ್ಳಲಾಗುತಿದ್ದ ಎರಡು ಕಾರು, 17 ಮೊಬೈಲ್‌ , ಒಂದು ಲ್ಯಾಪ್‌ ಟಾಪ್‌ , 25 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಆರೋಪಿಗಳು ಕರೆ ಮಾಡಿದ ವ್ಯಕ್ತಿಗಳ ಊರಿನಲ್ಲಿರುವ ಲಾಡ್ಜ್‌ನ ಹೆಸರು ಹೇಳಿಕೊಂಡು ಹಲವು ಜನರಿಗೆ ವಂಚಿಸಿ ರೂ. 3 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಹಾಲಿ ಕಾನೂನಿನ ಪ್ರಕಾರ ವೇಶ್ಯಾವೃತ್ತಿ ನಡೆಸಲು ಸುಪ್ರೀಂ ಕೋರ್ಟು ಅನುಮತಿ ನೀಡಿದ್ದರೂ ಅವರನ್ನು ಬಳಸಿಕೊಂಡು ಮೂರನೇ ವ್ಯಕ್ತಿಗಳು ವೇಶ್ವಾವಾಟಿಕೆ ನಡೆಸಲು ಅವಕಾಶ ಇಲ್ಲ. ಮತ್ತು ವೇಶ್ಯಾ ವೃತ್ತಿಯನ್ನೂ ವೃತ್ತಿ ಎಂದು ಕೋರ್ಟು ಪರಿಗಣಿಸಿರುವುದರಿಂದ ಆಕೆಯ ಗ್ರಾಹಕರ ಮೇಲೆ ಕ್ರಮ ಕೈಗೊಳ್ಳಲೂ ಅವಕಾಶ ಇರುವುದಿಲ್ಲ. ಆದರೆ ವೇಶ್ಯೆಯು ತನ್ನದೇ ಸ್ಥಳದಲ್ಲಿ ಸೇವೆ ಒದಗಿಸುವ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯಬಹುದಾಗಿದೆ.
ಅಂತರ್ಜಾಲದಲ್ಲಿ ಮಹಿಳೆಯರಿಂದ ಸೆಕ್ಸ್/ಮಸಾಜ್ /ವೇಶ್ಯಾವಾಟಿಕೆ ಸೇವೆಗ…

Tags: BJPCongress Party
Previous Post

ಎಕ್ಸ್‌ ನಲ್ಲಿ ಮಹುವಾ ಮೊಯಿತ್ರಾ ಅಸಭ್ಯ ಕಮೆಂಟ್‌ ; ಎಕ್ಸ್‌ ಗೆ ಮಾಹಿತಿ ಕೇಳಿದ ಪೋಲೀಸರು

Next Post

ಶಿವಣ್ಣನ ಬರ್ತಡೇಗೆ ಭೈರತಿ ರಣಗಲ್ ಚಿತ್ರದ ಟೀಸರ್..

Related Posts

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
Top Story

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

by ಪ್ರತಿಧ್ವನಿ
November 20, 2025
0

ಮೇಷ ರಾಶಿಯ ಈ ದಿನದ ಭವಿಷ್ಯ ಮೇಷ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಯಿದೆ. ಬಹು ದಿನಗಳಿಂದ ಕಾದಿದ್ದ ಬಡ್ತಿ ನಿಮ್ಮದಾಗುವ ಸಮಯ ಬಂದಿದೆ. ವ್ಯವಹಾರದಲ್ಲಿ ಉತ್ತಮ...

Read moreDetails
ಮರೆವುದೆಂತು ಆ ಗಟ್ಟಿ ಜನಪರ ದನಿಯನು

ಮರೆವುದೆಂತು ಆ ಗಟ್ಟಿ ಜನಪರ ದನಿಯನು

November 20, 2025

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

November 19, 2025

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

November 19, 2025
Next Post
ಶಿವಣ್ಣನ ಬರ್ತಡೇಗೆ ಭೈರತಿ ರಣಗಲ್ ಚಿತ್ರದ ಟೀಸರ್..

ಶಿವಣ್ಣನ ಬರ್ತಡೇಗೆ ಭೈರತಿ ರಣಗಲ್ ಚಿತ್ರದ ಟೀಸರ್..

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
Top Story

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

by ಪ್ರತಿಧ್ವನಿ
November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು
Top Story

ಮರೆವುದೆಂತು ಆ ಗಟ್ಟಿ ಜನಪರ ದನಿಯನು

by ನಾ ದಿವಾಕರ
November 20, 2025
Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
Top Story

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

by ಪ್ರತಿಧ್ವನಿ
November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ
Top Story

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು

ಮರೆವುದೆಂತು ಆ ಗಟ್ಟಿ ಜನಪರ ದನಿಯನು

November 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada