ವಂದೇ ಭಾರತ್ (Vande Bharat) ಸೇರಿದಂತೆ ಎಲ್ಲಾ ರೈಲುಗಳ (All Trains) ಟಿಕೆಟ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ (Railway Minister V Somanna) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡ, ಮಧ್ಯಮ ವರ್ಗದ ಜನ ವಂದೇ ಭಾರತ್ ರೈಲಿನಲ್ಲಿ ಓಡಾಡುವಂತೆ ಟಿಕೆಟ್ ದರ ಪರಿಷ್ಕರಣೆ ಮಾಡುತ್ತೇವೆ. ರೈಲು ಟಿಕೆಟ್ ದರ ಪರಿಷ್ಕರಣೆ ಸಂಬಂಧ ನಿನ್ನೆ ಪ್ರಧಾನಿ ನರೇಂದ್ರ ಮೋದಿ(Narendra Modi) ಜೊತೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.
ಬೆಂಗಳೂರು ಜನ ಪ್ರತಿನಿಧಿಗಳು ಹಾಗೂ ರಾಜ್ಯ ರೈಲ್ವೆ ಇಲಾಖೆಯ ಮುಖ್ಯಸ್ಥರ ಜೊತೆಗೆ ಸಭೆ ಮಾಡಿದ್ದೇನೆ. ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್(Ashwini Vaishnav) ಅವರ ಅನುಭವ ಇನ್ನಷ್ಟು ಹುಮ್ಮಸ್ಸು ಕೊಡುತ್ತಿದೆ. ರೈಲ್ವೆ ಇಲಾಖೆಯ ಕಾರ್ಯವೈಖರಿ ಒಂದು ರೀತಿಯ ಮಿಲಿಟರಿ ಇದ್ದಂತೆ. ದೇಶದಲ್ಲಿ ಮೊದಲು ಮಿಲಿಟರಿ ಪಡೆ ಆದರೆ, ಎರಡನೇ ಹಂತದಲ್ಲಿ ರೈಲ್ವೆ ಇಲಾಖೆ ಇದೆ. ಅದೇ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ.
ಬಾಕಿ ಹಣದ ಬಗ್ಗೆ ಈಗ ಏನೂ ಮಾತಾಡಲ್ಲ, ರಾಜ್ಯದ ಬಾಕಿ ಹಣ ಬರಬೇಕಿದೆ. ರಾಜ್ಯ, ಕೇಂದ್ರಸರ್ಕಾರಗಳು ಒಗ್ಗಟ್ಟಿನಲ್ಲಿ, ಸಹಕಾರದಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. ರೈಲ್ವೆ ಅಂಡರ್ಪಾಸ್(Railway Underpass), ಮೇಲ್ಸೇತುವೆ ಕಾಮಗಾರಿಗೆ ಹಣ ಕೊಡಬೇಕು. ಕೇಂದ್ರ ಸರ್ಕಾರ(Central Govt), ರಾಜ್ಯ ಸರ್ಕಾರ ಸಮಪಾಲು ಹಣ ನೀಡಬೇಕಾಗುತ್ತದೆ. ಬೆಂಗಳೂರು ಕಂಟೋನ್ಮೆಂಟ್ ಸ್ಟೇಷನ್(Contonment Railway Station) ಯೋಜನಾ ಮೊತ್ತ 485 ಕೋಟಿ ರೂ. ಯಶವಂತಪುರ ನಿಲ್ದಾಣದ(Yeshwanthpur Railway Station) ಯೋಜನಾ ಮೊತ್ತ 387 ಕೋಟಿ ರೂ ಎಂದರು.
ಯಶವಂತಪುರ-ಚನ್ನಸಂದ್ರ (Yeshwanthpur-Channasandra) ನಡುವೆ 25 ಕಿ.ಮೀ ಮತ್ತು ಬೈಯ್ಯಪ್ಪನಹಳ್ಳಿ-ಹೊಸೂರು(Byappanahalli-Hosur) ನಡುವೆ 48 ಕಿ.ಮೀ. ಹಳಿ ಡಬ್ಲಿಂಗ್ ಯೋಜನೆಗೆ 814 ಕೋಟಿ ರೂಪಾಯಿ ವೆಚ್ಚವಾಗಲಿದೆ. ರೈಲ್ವೆ ಓವರ್ ಬ್ರಿಡ್ಜ್(Railway Over Bridge), ಅಂಡರ್ಪಾಸ್ನಲ್ಲಿ ತೊಂದರೆ ಆಗಲು ಬಿಡಲ್ಲ. ಕರ್ನಾಟಕದಲ್ಲಿ ವಿಭಿನ್ನ ರೀತಿಯಲ್ಲಿ ರೈಲ್ವೆ ವಿಭಾಗ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ವಿಭಿನ್ನ ರೀತಿಯಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಹೊಂದಲಿದೆ. ಹಿಂದೆ ರೈಲ್ವೆ ಅಂಡರ್ ಪಾಸ್ ಮತ್ತು ಮೇಲ್ಸೇತುವೆಗಳಿಗೆ ಕೇಂದ್ರ ಮತ್ತು ರಾಜ್ಯ ಸಹಯೋಗ ಇರುತ್ತಿತ್ತು. ಇದು ಎಷ್ಟರ ಮಟ್ಟಿಗೆ ಕಾರ್ಯೋನ್ಮುಖ ಆಗುತ್ತಿತ್ತೋ ಗೊತ್ತಿಲ್ಲ. ರೈಲುಗಳು ಬಂದಾಗ ಜನ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿದ್ದವು ಎಂದು ಹೇಳಿದ್ದಾರೆ.