ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋ ಪರಿಶೀಲನೆ ನಡೆಸಿ ಸುಮೊಟೋ ಕೇಸ್ ದಾಖಲಿಸಿ ಆರೋಪಿ ಬಂಧನ.
ಉದಯನ್ (30) ಬಂಧಿತ ಆರೋಪಿ, ಹೆಬ್ಬಾಳ , ಯಲಹಂಕ ಮುಖ್ಯರಸ್ತೆಯಲ್ಲಿ ನಡೆದಿದ್ದ ರೋಡ್ ರೇಜ್, ಮುಖ್ಯ ರಸ್ತೆಯಲ್ಲಿ ರಾಂಗ್ ಪಾರ್ಕಿಂಗ್ ಮಾಡಿದಲ್ಲದೆ ಹಿಮ್ಮುಖ ಚಾಲನೆ ಮಾಡಿದ್ದ, ನಂತರ ದ್ವಿಚಕ್ರವಾಹನ ಸವಾರನ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ನಡೆಸಿದ್ದ ಆರೋಪಿ ಕಾರು ಚಾಲಕನ ದುರ್ವತನೆಗೆ ವ್ಯಾಪಕ ಟೀಕೆಗೊಳಗಾಗಿತ್ತು.
ಸಂಚಾರ ನಿಯಮ ಉಲ್ಲಂಘಿಸಿದಲ್ಲದೆ ಹಲ್ಲೆ ನಡೆಸಿದ್ದ ಉದಯನ್, ಈ ಹಿನ್ನೆಲೆ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು
ಕಾರು ನಂಬರ್ ಆಧರಿಸಿ ಆರೋಪಿಯನ್ನ ಬಂಧಿಸಿದ ಪೊಲೀಸರು, ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.