
ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿಕೆ, ಸಮುದಾಯವಾರು, ಪ್ರಾದೇಶಿಕವಾರು ಎಲ್ಲರಿಗೂ ಪ್ರಾತಿನಿಧ್ಯ ಕೊಡುವ ಅವಕಾಶ ಇದೆ. ಕೊಡಲಿ, ಅದಕ್ಕೆಲ್ಲ ಪರಿಹಾರ ಸಿಗಬೇಕಂದ್ರೆ, ಯಾರೆಲ್ಲ ಬೇಡಿಕೆ ಇಟ್ಟಿದ್ದಾರೊ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಗೆದ್ದುಬರಲಿ.
ಇಷ್ಟು ದಿನ ಬಿಜೆಪಿಯವರು ಹೇಳ್ತಿದ್ರು,ಈಗ ಇವರು ಹೇಳ್ತಿದ್ದಾರೆ ಎಂದ ಸುರೇಶ್. ಡಿ ಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಸ್ವಾಮೀಜಿ ಒತ್ತಾಯ ವಿಚಾರಕ್ಕೆ ಮಾಜಿ ಸಂಸದ ಸುರೇಶ್ ಪ್ರತಿಕ್ರಿಯಿಸಿ ಸ್ವಾಮೀಜಿಗಳದ್ದು ವೈಯಕ್ತಿಕ ಅಭಿಪ್ರಾಯ, ಅವರ ಹೇಳಿಕೆ ಬಗ್ಗೆ ನಾನು ಮಾತನಾಡೊಲ್ಲ.

ಸ್ವಾಮೀಜಿಯವರು ಅವರ ಭಾವನೆ ಹೇಳಿಕೊಂಡಿದ್ದಾರೆ. ಬೇರೆಯವರು ಮಾತನಾಡಬಹುದು.. ಸ್ವಾಮೀಜಿಯವರು ಮಾತನಾಡಬಾರದಾ…? ಎಂದು ಸ್ವಾಮೀಜಿ ಹೇಳಿಕೆ ಪರ ಬ್ಯಾಟಿಂಗ್ ಮಾಡಿದ ಮಾಜಿ ಸಂಸದ ಡಿ ಕೆ ಸುರೇಶ್.





