ರಾಜ್ಯ ಕಾಂಗ್ರೆಸ್ನಲ್ಲಿ (Congress) ಹೆಚ್ಚುವರಿ ಡಿಸಿಎಂ (Dcm) ಹುದ್ದೆ ಕೂಗು ಹೆಚ್ಚಾದ ಬೆನ್ನಲ್ಲೇ ಸಿಎಂ (Cm) ಬದಲಾವಣೆಯ ಕೂಗು ಮತ್ತೆ ಮುನ್ನಲೆಗೆ ಬಂದಂತಿದೆ. 4 ಡಿಸಿಎಂ ಬೇಕು ಎಂಬ ಕೂಗಿಗೆ ಕೌಂಟರ್ ಎಂಬಂತೆ ಇದೀಗ ಮತ್ತೊಂದು ಬಣದ ಶಾಸಕರು ಸಿಎಂ ಬದಲಾವಣೆ ಕೂಗೆಬ್ಬಿಸಿದ್ದಾರೆ.

ಡಿ.ಕೆ ಶಿವಕುಮಾರ್ರನ್ನ (Dk shivakumar) ಮೊದಲು ಮುಖ್ಯಮಂತ್ರಿ ಮಾಡಿ, ಆ ನಂತ್ರ ಬೇಕಾದ್ರೆ ಒಂದು ಡಜನ್ ಡಿಸಿಎಂಗಳನ್ನ ಮಾಡ್ಲಿ ಎಂದು ಶಾಸಕ ಶಿವಗಂಗಾ (Mla shiva ganga) ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರಸ್ ಪಕ್ಷದಲ್ಲಿ KPCC ಅಧ್ಯಕ್ಷರಾಗಿದ್ದವರನ್ನ CM ಮಾಡೋ ಪದ್ಧತಿ ಇದೆ. ಆ ಲೆಕ್ಕಾಚಾರದಲ್ಲಿ ಡಿಕೆಶಿ ಸಿಎಂ ಆಗಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದಲೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಲೇಯಿದೆ. ಲೋಕಸಭಾ ಚುನಾವಣೆಯ ನಂತರ ಬದಲಾವಣೆಗಳಾಗಬಹುದು ಎಂಬ ಚರ್ಚೆಗಳಿತ್ತಾದ್ರೂ ಇದೂವರೆಗೂ ಅಂಥದ್ದೇನು ಆಗಿಲ್ಲ. ಆದ್ರೆ ಇದೀಗ ಆ ಬೆಳವಣಿಗೆಗಳ ಮುನ್ಸೂಚನೆ ಎಂಬಂತೆ ಸಿಎಂ ಬದಲಾವಣೆ ಮತ್ತು 4 ಡಿಸಿಎಂ ಹುದ್ದೆಗಳ ಕೂಗು ಜೋರಾಗಿದೆ.