ದೊಡ್ಡವರಿಗೆ ಹೊಟ್ಟ ಉಬ್ಬರ,ಗ್ಯಾಸ್ಟ್ರಿಕ್ ಅಥವ ಅಸಿಡಿಟಿಯಾದ್ರೆ ಸಾಕಷ್ಟು ಮದ್ದುಗಳನ್ನು ಮಾಡ್ತೀವಿ..ಆದ್ರೆ ಮಕ್ಕಳಿಗೆ ಹೊಟ್ಟೆ ಉಬ್ಬರವಾದ್ರೆ ಅವ್ರಿಗೆ ಏನಾಗ್ತಾಯಿದೆ ಎಂಬುವುದು ತಿಳಿಯುವುದಿಲ್ಲಾ,ಬದಲಿಗೆ ಅವ್ರು ಹೊಟ್ಟೆ ನೋವು ಎಂದು ಹೇಳುತ್ತಾರೆ..ಹಾಗೂ ಊಟ ತಿಂಡಿಯನ್ನು ಸೇವಿಸುವುದಿಲ್ಲಾ,ಕೆಲವು ಮಕ್ಕಳು ವಾಂತಿಯನ್ನು ಮಾಡಿಕೊಳ್ತಾರೆ..ಪುಟಾಣಿಗಳ ಈ ಸಮಸ್ಯೆಗೆ ಯಾವ ಔಷದಿಯನ್ನು ನೀಡುವುದು ಎಂಬ ಕನ್‌ಫ್ಯೂಶನ್ ಕೂಡಾ ದೊಡ್ಡವರಿಗುತ್ತದೆ..ಇಂತಹ ಸಂದರ್ಭದಲ್ಲಿ ಮಕ್ಕಳ ಸಮಸ್ಯೆ ಅಂದ್ರೆ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಈ ಸರಳ ಮನೆಮದ್ದನ್ನು ಟ್ರೈ ಮಾಡಿ..
ಜೀರಿಗೆ
ಇಂಡಿಯನ್ ಮಸಾಲೆಗಳು ನಿಮ್ಮೆಲ್ಲರಿಗೂ ಗೊತ್ತೆಯಿದೆ ಸಾಕಷ್ಟು ಔಷದಿ ಗುಣಗಳನ್ನು ಹೊಂದಿರುತ್ತವೆ.ಅದರಲ್ಲಿ ಜೀರಿಗೆ ಕೂಡಾ ಒಂದು,ಮಕ್ಕಳು ಸೇವಿಸುವ ಆಹಾರದಲ್ಲಿ ಜೀರಿಗೆಯನ್ನು ಸೇರಿಸಿ..ಉದಾಹರಣೆಗೆ ಪೊಂಗಲ್,ದಾಲ್‌ಕಿಚಿಡಿ,ಇಂತಹ ಪದಾರ್ಥಗಳನ್ನು ಮಾಡುವಾಗೆ ಹೆಚ್ಚು ಜೀರಿಗೆಯನ್ನು ಬಳಸಿ ಮಕ್ಕಳಿಗೆ ತಿನ್ನುಸುವುದರಿಂದ ಹೊಟ್ಟೆ ಉಬ್ಬರ ತಕ್ಷಣಕ್ಕೆ ಕಡಿಮೆಯಾಗುತ್ತದೆ..
ಓಂಕಾಳು
ಇವು ಗ್ಯಾಸ್ಟ್ರಿಕ್,ಅಜಿರ್ಣದಂತಹ ಸಮಸ್ಯೆಗೆ ಉತ್ತಮ ಮದ್ದು.. ಅರ್ಧ ಟೇಬಲ್ ಸ್ಪೂನ್‌ನಷ್ಟು ಜೀರಿಗೆಯನ್ನು ನೀರಿನಲ್ಲಿ ಒಂದು ಗಂಟೆಗಳ ಕಾಲ ನೆನೆಸಿ ನಂತ್ರ ಮಕ್ಕಳಿಗೆ ಒಂದೆರಡು ಸ್ಪೂನ್ ಆ ನೀರನ್ನು ಕುಡಿಸುವುದರಿಂದ ಜೀರ್ಣಕ್ರಿಯೆ ಚನ್ನಾಗಿ ಆಗುತ್ತದೆ.. ಇಲ್ಲವಾದಲ್ಲಿ ಅಜ್ವಯ್ನ್ ನ ಚನ್ನಾಗಿ ನೀರಿನಲ್ಲಿ ಕುದಿಸಿ ಆ ನೀರು ಬೆಚ್ಚಗಾದಮೇಲೆ ಮಕ್ಕಳಿಗೆ ಕುಡಿಸಬಹುದು.
ಸೋಂಪು
ಹೆಚ್ಚಾಗಿ ಊಟದ ನಂತ್ರ ಈ ಸೋಂಪು ಕಾಳುಗಳನ್ನ ಸೇವಿಸುತ್ತಾರೆ ಕಾರಣ ತಿಂದ ಆಹಾರ ಡೈಜೆಸ್ಟ್ ಆಗ್ಲಿ ಅಂತ. ಮಕ್ಕಳು ಸೋಂಪನ್ನು ತಿನ್ನಿ ಅಂದ್ರೆ ಬೇಡ ಅಂತ ಹೇಳ್ತಾರೆ..ಹಾಗಾಗಿ ಇದನ್ನು ರೈಸ್ ಅಥವ ಪಲಾವ್ ಮಾಡಿದಗ ಬಳಸಿ ಮಕ್ಕಳಿಗೆ ತಿನ್ನಿಸಿ..
ಹಾಲು ಮತ್ತು ಅರಿಶಿನ
ಹೊಟ್ಟೆ ನೋವು ಅಥವ ಗ್ಯಾಸ್ಟ್ರಿಕ್ ಸಮಸ್ಯೆ ಆದಾಗ ಮಕ್ಕಳು ಊಟತಿಂಡಿ ಬೇಡವೆಂದು ಹೇಳ್ತಾರೆ.. ಇಂತಹ ಟೈಮ್‌ನಲ್ಲಿ ಒಂದು ಲೋಟ ಹಾಲಿಗೆ ಚಿಟಿಕೆ ಅರಿಶಿನ ಬೆರಸಿ ಕುಡಿಸಿ..ತಕ್ಷಣಕ್ಕೆ ಸಮಸ್ಯೆ ಪರಿಹಾರವಾಗುತ್ತದೆ..ಅರಿಶಿನ ಸರ್ವ ರೋಗಕ್ಕೆ ಮದ್ದು..