ಬೇಸಿಗೆ, ಮಳೆಗಾಲ ಅಥವಾ ಚಳಿಗಾಲ ಹೀಗೆ ಯಾವುದೇ ಸೀಸನ್ ಗಳು ಬಂದರೂ ನಾವು ನಮ್ಮ ತ್ವಚೆಯನ್ನು ಸೀಸನ್ಗೆ ತಕ್ಕ ಹಾಗೆ ಕಾಳಜಿಯನ್ನ ವಹಿಸಬೇಕು .ಇಲ್ಲವಾದಲ್ಲಿ ಕೈಯಾರೆ ನಮ್ಮ ತ್ವಚೆಯನ್ನ ಹಾಗೂ ಅಂದವನ್ನು ಹಾಳು ಮಾಡಿಕೊಳ್ಳುತ್ತೇವೆ. ಸದ್ಯಕೆ ಬೇಸಿಗೆಗಾಲದಲ್ಲಿ ಬಿಸಿಲಿನ ಶಾಖ ಹೆಚ್ಚಿರುತ್ತದೆ ಈ ಸಮಯದಲ್ಲಿ ನಾವು ಚಳಿಗಾಲದಲ್ಲಿ ಬಳಸುವಂತಹ ಕ್ರೀಮ್ ಗಳನ್ನ ಅಥವಾ ಪ್ರಾಡಕ್ಟ್ ಗಳನ್ನು ಬಳಸುವುದರಿಂದ ತ್ವಜೆಗೆ ತೊಂದರೆ ಆಗುವುದು ಸಹಜ.. ಹಾಗಾಗಿ ಬೇಸಿಗೆಯಲ್ಲಿ ನಾವು ಯಾವ ರೀತಿಯ ಪ್ರಾಡಕ್ಟ್ ಗಳನ್ನ ಬಳಸಬಾರದು, ನಮ್ಮ ತ್ವಚೆಯನ್ನ ಹೇಗೆ ಕಾಪಾಡಿಕೊಳ್ಳಬಹುದು ಅನ್ನುವುದರ ಮಾಹಿತಿ ಹೀಗಿದೆ..

ಆಲ್ಕೋಹಾಲ್ ಆಧಾರಿತ ಟೋನರ್
ಇವುಗಳನ್ನು ನಮ್ಮ ತ್ವಜೆಗೆ ಬಳಸುವುದರಿಂದ ತಕ್ಷಣಕ್ಕೆ ಸಂಸಿಟಿವ್ ಹಾಗೂ ಫ್ರೆಶ್ನೆಸ್ ನೀಡುತ್ತದೆ.ಆದರೆ ನಮ್ಮ ಸ್ಕಿನ್ ನ ನ್ಯಾಚುರಲ್ ಆಯಿಲನ್ನ ಶಮನಗೊಳಿಸುತ್ತದೆ. ಹಾಗೂ ಸೂರ್ಯನ ಕಿರಣಗಳಿಗೆ ನಮ್ಮ ತ್ವಜೆ ಹಾನಿಯಾಗಿ ಹೆಚ್ಚು ದುರ್ಬಲವಾಗುತ್ತದೆ. ಹಾಗಾಗಿ ಸಮ್ಮರ್ ನಲ್ಲಿ ಆಲ್ಕೋಹಾಲ್ ಫ್ರೀ ಟೋನರ್ ಗಳನ್ನ ಬಳಸುವುದರಿಂದ ನಮ್ಮ ತ್ವಚೆಯನ್ನ ಹೈಡ್ರೇಟ್ ಮಾಡುತ್ತದೆ, ಕಾರಣ ಇದರಲ್ಲಿ ಹೈಲರೊನಿಕ್ ಆಸಿಡ್ ಇರೋದ್ರಿಂದ ನಮ್ಮ ಸ್ಕಿನ್ ಫ್ರೆಷ್ ಆಗುತ್ತದೆ ಹಾಗೂ ಉತ್ತಮವಾಗಿರುತ್ತದೆ.
ಹೆಚ್ಚು ಫೌಂಡೇಶನ್
ನಮ್ಮ ಮುಖಕ್ಕೆ ಅತಿಯಾಗಿ ಫೌಂಡೇಶನ್ ನ ಬಳಸುವುದರಿಂದ ಬೇಸಿಗೆಯಲ್ಲಿ ಬಿಸಿ ತಾಪಮಾನ ಹೆಚ್ಚಿರುವುದರಿಂದ ಹಾಗಾಗಿ ಚರ್ಮಕ್ಕೆ ಸಫೋಕೇಶನ್ ಶುರುವಾಗುತ್ತದೆ. ಇದರಿಂದ ಮುಚ್ಚಿರುವಂತ ಪೋರ್ಸ್ ಆಗಿರಬಹುದು ಮತ್ತು ಇದರಿಂದಾಗಿ ಒಡೆಯುವಿಕೆ ಕೂಡ ಜಾಸ್ತಿ ಆಗುತ್ತೆ.ಹಾಗಾಗಿ ಲೈಟ್ ವೆಯಿಟ್ ಮತ್ತು ಮೊಯಿಶ್ಚರೈಸರ್ ಹಾಗೂ ಫೌಂಡೇಶನ್ ಗಳನ್ನು ಬಳಸುವುದರಿಂದ ನಮ್ಮ ತುಜೆಯನ್ನು ನಾವು ಕಾಪಾಡಿಕೊಳ್ಳಬಹುದು.

ಆಯಿಲಿ ಮಾಯ್ಶ್ಚರೈಸರ್
ಅತಿಯಾಗಿ ಚಿತ್ತಿರುವ ಮಾಯಿಶ್ಚರೈಸರ್ ಅನ್ನ ಬಳಸುವುದರಿಂದ ಬೇಸಿಗೆ ತಿಂಗಳಲ್ಲಿ ಚರ್ಮದ ಮೇಲೆ ಸಹೊಕೇಶನ್ ಶುರುವಾಗುತ್ತದೆ. ಬದಲಿಗೆ ಎಣ್ಣೆ ಮುಕ್ತ ಮಾಯಿಶ್ಚರೈಸರ್ ಗಳನ್ನ ಬಳಸುವುದರಿಂದ ಫೋರ್ಸ್ ಗಳು ಮುಚ್ಚಿ ಹೋಗದಂತೆ ಹಾಗೂ ಚರ್ಮವನ್ನು ಹೆಚ್ಚು ಜಿಡ್ಡಿದೆಲ್ಲದಂತೆ ಕಾಪಾಡುತ್ತದೆ.. ಅತಿ ಹೆಚ್ಚು ಜಿದ್ದು ಮುಖದಲ್ಲಿದ್ದರೆ ಪಿಂಪಲ್ಸ್ ಹೆಚ್ಚಾಗುವುದಕ್ಕೆ ಇದು ಕೂಡ ಪ್ರಮುಖ ಕಾರಣವಾಗಿದೆ.

ಪರಿಮಳಯುಕ್ತ ಉತ್ಪನ್ನಗಳು
ಪರ್ಫ್ಯೂಮ್ಡ್ ಲೋಶನ್ ಆಗಿರಬಹುದು, ಸೆಂಟೆಡ್ ಸಿರಂಗಳು ಅಥವಾ ಸೆಂಟೆಡ್ ಕ್ರೀಮ್ಗಳನ್ನ ನಾವು ಸಮ್ಮರ್ ನಲ್ಲಿ ಹೆಚ್ಚು ಬಳಸುವುದರಿಂದ ಸನ್ ಲೈಟ್ ಗೆ ನಮ್ಮ ಸ್ಕಿನ್ ತುಂಬಾನೇ ಸೆನ್ಸಿಟಿವ್ ಇರುವುದರಿಂದ ಇರಿಟೇಶನ್ ಶುರುವಾಗುತ್ತೆ ಹಾಗೂ ಸ್ಕಿನ್ ಡ್ಯಾಮೇಜ್ ಆಗುತ್ತದೆ. ಇದರ ಬದಲಿಗೆ ಫ್ರಾಗ್ನಾನ್ಸ್ ಫ್ರೀ ಹಾಗೂ ಲೈಟ್ ಸೆಂಟೆಡ್ ಕ್ರೀಮ್ ಗಳನ್ನ ಬಳಸುವಂಥದ್ದು ಉತ್ತಮ.
