• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಗುವಾಗ ಎಲ್ಲಾ ನೆಂಟರು ! ಅಳುವಾಗ ಯಾರೂ ಇಲ್ಲ ! ಸದ್ಯ ನಟ ದರ್ಶನ್ ಪರಿಸ್ಥಿತಿ ಇದು ! 

ಪ್ರತಿಧ್ವನಿ by ಪ್ರತಿಧ್ವನಿ
June 17, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ಸಿನಿಮಾ
0
ನಗುವಾಗ ಎಲ್ಲಾ ನೆಂಟರು ! ಅಳುವಾಗ ಯಾರೂ ಇಲ್ಲ ! ಸದ್ಯ ನಟ ದರ್ಶನ್ ಪರಿಸ್ಥಿತಿ ಇದು ! 
Share on WhatsAppShare on FacebookShare on Telegram

ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳು, ರಾಜಕೀಯದ ನೂರಾರು ನಾಯಕರು, ಸಾಲು ಸಾಲು ಉದ್ಯಮಿಗಳು, ಎಲ್ಲರ ಪರಿಚಯ,ಆಪ್ತತೆ, ಒಡನಾಟ ಇದ್ದರೂ ಕೂಡ ನಟ ದರ್ಶನ್ ಈಗ ಏಕಾಂಗಿ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ದರ್ಶನ್ ಬಂಧನವಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದರ್ಶನ್ ಸುತ್ತ ಸದಾ ಗಿಜಿಗುಡುತ್ತಿದ್ದ ಹಿತೈಷಿಗಳ ಗುಂಪು ಇದೀಗ ನಾಪತ್ತೆಯಾಗಿದೆ. ಒಂದೆಡೆ ಸಿನಿಮಾ ರಂಗದ ಸ್ನೇಹಿತರು ಮತ್ತು ಹಿಂಬಾಲಕರು, ಮತ್ತೊಂದೆಡೆ ರಾಜಕಾರಣಿಗಳ ಪಡೆ. ಆದ್ರೆ ಈಗ ಬಂಧಿತ ದರ್ಶನ್ ನೋಡಲು ಯಾರು ಕೂಡ ಇದುವರೆಗೂ ಪೊಲೀಸ್ ಸ್ಟೇಷನ್ ಕಡೆ ತಲೆ ಹಾಕಿಲ್ಲ ಅನ್ನೋದೆ ವಿಪರಿಯಾಸ.

ADVERTISEMENT

ನಟ ,ಬಂಧಿತ ದರ್ಶನ್ ಗೆಳೆಯರ ಬಳಗ ಭಾರಿ ದೊಡ್ಡದು. ಸದಾ ಅವರೊಟ್ಟಿಗೆ ಗೆಳೆಯರ ಗುಂಪು ಇದ್ದೇ ಇರುತ್ತಿತ್ತು. ವೇದಿಕೆಗಳಲ್ಲಿ ದರ್ಶನ್ ರನ್ನ ಹಾಡಿ ಹೊಗಳುತ್ತಿದ್ದರು. ಮಾತು ಮಾತಿಗೂ ದರ್ಶನ್ ಗೆ ಜೈಕಾರ ಹಾಕುತ್ತಿದ್ದರು.ಆದ್ರೆ ಈಗ ಆ ಪೈಕಿ ಯಾರೊಬ್ಬರೂ ಕೂಡು ಪೊಲೀಸ್ ಠಾಣೆ ಕಡೆ ಸುಳಿವು ಇಲ್ಲ. ತಮ್ಮ ತಮ್ಮ ಸಿನಿಮಾಗಳ ಪ್ರಮೋಷನ್ ಗೆ , ಅವಕಾಶಗಳಿಗೆ ದರ್ಶನ್ ಸುತ್ತ ಸುತ್ತುತ್ತಿದ್ದ ಅವಕಾಶವಾದಿಗಳ ಗುಂಪು ಈಗ ಮಂಗ ಮಾಯವಾಗಿದೆ. ಎಲ್ಲಿ ದರ್ಶನ್ ಜೊತೆ ಗುರುತಿಸಿಕೊಂಡ್ರೆ ತಮಗೆ ಸಂಕಷ್ಟ ಎಂಬ ಯೋಚೆನೆಯಲ್ಲಿದರೋ ಏನೋ ಗೊತ್ತಿಲ್ಲ. 

ದರ್ಶನ್ ನನ್ನ ಮಗ ಅಂದವರೆಷ್ಟೋ, ದಚ್ಚು ನನ್ನ ಅಣ್ಣ ಎಂದವರೆಷ್ಟೋ. ಆದ್ರೆ ಈಗ ಸ್ನೇಹಿತರಿರಲಿ, ಕನಿಷ್ಠ ಪಕ್ಷ ದರ್ಶನ್ ರ ಪತ್ನಿ ವಿಜಯಲಕ್ಷ್ಮಿ ಕೂಡ ಇದುವರೆಗೂ ಠಾಣೆ ಕಡೆ ಬರಲಿಲ್ಲ. ಅವರು ಏನಾದ್ರೂ ಮಾಡಿಕೊಳ್ಳಲಿ, ನಾನು ಆ ವಿಚಾರಕ್ಕೆ ಹೋಗುವುದಿಲ್ಲ ಎಂದು ಹೇಳಿ, ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್ ರನ್ನ ಅನ್ ಫಾಲೋ ಮಾಡಿ ಪರೋಕ್ಷ ಸಂದೇಶ ಕೊಟ್ಟು ಅಂತರ ಕಾಯ್ದುಕೊಂಡರು. ಈ ಮುಂಚೆ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲು ಸೇರಿದ್ದಾಗಲೂ, ಅದನ್ನು ಕ್ಷಮಿಸಿ ಮತ್ತೆ ಜೊತೆಗೆ ಜೀವನ ಸಾಗಿಸೋ ಮನಸ್ಸು ಮಾಡಿದ್ದರು. ಆದ್ರೆ ಈ ಬಾರಿ ಮತ್ತೆ ದರ್ಶನ್ ವರ್ತನೆಯನ್ನು ಸಹಿಸಿಕೊಳ್ಳುವಷ್ಟು ತಾಳ್ಮೆ ವಿಜಯಲಕ್ಷ್ಮಿ ಬಳಿ ಇಲ್ಲ.

ಇನ್ನ ದರ್ಶನ್ ರ ಒಡ ಹುಟ್ಟಿದ ತಮ್ಮ ದಿನಕರ್ ತೂಗುದೀಪ್, ಮತ್ತು ಹೆತ್ತ ತಾಯಿ ಮೀನ ತೂಗುದೀಪ ಹಾಗೂ ದರ್ಶನ್ ಸಹೋದರಿ ಯಾರು ಕೂಡು ಇದುವರೆಗೂ ದರ್ಶನ್ ಯೋಗಕ್ಷೇಮ ಕೂಡ ವಿಚಾರಿಸಿಲ್ಲ. ತಮ್ಮ ಸಂಪೂರ್ಣ ಕುಟುಂಬದ ಜೊತೆಗೆ ದರ್ಶನ್ ಸಂಬಂಧ ಕಡಿದುಕೊಂಡಿದ್ದಾರಾ ಎಂಬ ಪ್ರಶ್ನೆಗೆ ಈ ಬೆಳವಣಿಗೆಗೆ ಕಾರಣವಾಗಿದೆ. ಮನೆ ಮಗ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿದ್ದರೂ ಯಾರೊಬ್ಬರೂ ಮುಖ ನೋಡಲು ಸಹಾ ಬರಲಿಲ್ಲವೆಂದರೆ , ಇವರ ನಡುವೆ ಸಂಬಂಧ ಎಷ್ಟು ಹಾಳಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

ಮೂಲಗಳ ಮಾಹಿತಿಯ ಪ್ರಕಾರ ದರ್ಶನ್ ತಾಯಿ ಬಹಳ ಕಾಲದಿಂದಲೇ ಅವರಿಂದ ದೂರ ಉಳಿದಿದ್ದಾರಂತೆ. ಇನ್ನು ದರ್ಶನ್ ಮತ್ತು ದಿನಕರ್ ಗೂ ಮನಸ್ತಾಪವಿದೆ, ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಹೊಡೆದಾಟ ನಡೆದಿದೆ ಎಂದು ಕೂಡ ಹೇಳಲಾಗ್ತಿದೆ. ಹೀಗಾಗಿ ಯಾರೊಬ್ಬರೂ ದರ್ಶನ್ ನೋಡಲು ಬರಲಿಲ್ಲ ಎಂಬುದು ಅಸಲಿ ವಿಚಾರ.

ಇನ್ನು ರಾಜಕಾರಿಣಿಗಳ ವಿಚಾರ ಹೇಳೋದೆ ಬೇಡ. ಹಳೇ ಮೈಸೂರು ಭಾಗದ ಯಾವುದೇ ಕ್ಷೇತ್ರವಿರಲಿ, ಪ್ರಚಾರಕ್ಕೆ ಅಂದ್ರೆ ಮೊದಲು ಕರೆ ಬರುತ್ತಿದ್ದದ್ದು ನಟ ದರ್ಶನ್ ಗೆ . ದರ್ಶನ್ ಹೋದಲ್ಲಿ ಬಂದಲ್ಲಿ ಜನ ಸರಾಗವೇ ಸೇರುತ್ತಿತ್ತು. ಈಗ ಅಂಥ ರಾಜಕಾರಿಣಿಗಳ ಪೈಕಿ ಕೆಲವರು ಸರ್ಕಾರದಲ್ಲಿ ಸಚಿವರಾಗಿದ್ದಾರೆ, ಹಲವು ಶಾಸಕರಿದ್ದಾರೆ,ನಟ ದರ್ಶನ್ ಗೆ ಹೈ ಇನ್ಫ್ಲುಯೆನ್ಸ್ ಇದೆ. ಆದ್ರೆ ಈಗ ಅದ್ಯಾವುದೂ ಪ್ರಯೋಜನಕ್ಕೆ ಬರುತ್ತಿಲ್ಲ. ತಮ್ಮಿಂದ ಲಾಭ ಪಡೆದ ಯಾವೊಬ್ಬ ರಾಜಕಾರಿಣಿಯೂ ಈಗ ದರ್ಶನ್ ಗಾಗಿ ಸಹಾಯ ಹಸ್ತ ಚಾಚಿಲ್ಲ. ಕಾರಣ ತಮ್ಮ ರಾಜಕೀಯ ಇಮೇಜ್ ಡ್ಯಾಮೇಜ್ ಆದ್ರೆ ಎಂಬ ಭಯ.

ಹೀಗೆ ತಮಗೆ ಕಷ್ಟ ಅಂದಾಗ ಯಾರೊಬ್ಬರು ಬರದೆ ಇರುವುದು ದರ್ಶನ್ ಗೆ ಅಪಾರ ನೋವು ತರಿಸಿದೆಯಂತೆ. ಕೊನೆಯ ಪಕ್ಷ ಸಾಂತ್ವನ ಹೇಳುವುದಕ್ಕಾದರು ಯಾರಾದರೂ ಬರಬಹುದಿತ್ತು. ತಮ್ಮಿಂದ ಅನುಕೂಲ ಪಡೆದುಕೊಂಡವರು, ಸಹಾಯ ಪಡೆದಿದ್ದವರು, ಸದಾ ಜೊತೆಗಿರುತ್ತಿದ್ದವರು, ಸ್ನೇಹಿತರು , ಸಂಬಂಧಿಕರು ಯಾರೊಬ್ಬರೂ ತಮಗಾಗಿ ಮಿಡಿಯದೇ ಇದ್ದಿದ್ದು ದರ್ಶನ್ ಮನಸ್ಸನ್ನ ಕದಡಿದೆ.

ಏನೋ ತಪ್ಪು ಆಗಿದ್ದು ಆಗಿದೆ , ಆದ್ರೆ ಜೊತೆಗೆ ನಾವು ಇದ್ದೇವೆ ಅಂತ ಕನಿಷ್ಠ ಧೈರ್ಯ ಹೇಳಲು ಕೂಡ ಯಾವೊಬ್ಬ ಆಪ್ತರು ಬಂದಿಲ್ಲ. ಹಾಗೇನಾದ್ರು ಬಂದ್ರೆ ಆಪ್ತರಿಗು ಸಂಕಷ್ಟ ಬರಬಹುದು ಎಂಬ ಭಯ ದರ್ಶನ್ ಆಪ್ತರನ್ನ ಕಾಡುತ್ತಿದ್ಯಾ ? ಇಲ್ಲ ಎಲ್ಲಾ ಒಳಗಿಂದ ಒಳಗೇನೆ ಪೋನ್ ಮೂಲಕ ಹಾಗು ಪ್ರಭಾವ ಬೀರುತ್ತಿದ್ದಾರಾ..? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. 

ಆದ್ರೆ, ನೀನೆ ಇಂದ್ರ – ನೀನೆ ಚಂದ್ರ ಅಂದವರು ಯಾರೂ ಇಂದು ಸನಿಹಕ್ಕೂ ಸುಳಿಯಲಿಲ್ಲ. ಕನಿಷ್ಠ ಸಾಂತ್ವನವನ್ನೂ ಹೇಳಲಿಲ್ಲ. ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ನಟ ದರ್ಶನ್ ಇಂದು, ಸ್ನೇಹಿತರು, ಸಂಬಂಧಿಕರು ಇಲ್ಲದೆ ಏಕಾಂಗಿಯಾಗಿ ಕಂಬಿ ಹಿಂದೆ ಇದ್ದಾರೆ. 

Tags: ನಟ ದರ್ಶನ್ನಟ ದರ್ಶನ್ ಅರೆಸ್ಟ್ನಟ ದರ್ಶನ್ ಬಂಧನಪವಿತ್ರ ಗೌಡರೇಣುಕಾ ಸ್ವಾಮಿರೇಣುಕಾ ಸ್ವಾಮಿ ಕೊಲೆರೇಣುಕಾ ಸ್ವಾಮಿ ಮರ್ಡರ್
Previous Post

ರೇಣುಕಾಸ್ವಾಮಿ ಮೊಬೈಲ್ ಗಾಗಿ ಮತ್ತೊಮ್ಮೆ ರಾಜಕಾಲುವೆಯಲ್ಲಿ ಹುಡುಕಾಟ; ಆರೋಪಿಯಿಂದ ಸ್ಥಳ ಮಹಜರು

Next Post

ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ ಡಾ. ಮಂಜುನಾಥ್

Related Posts

ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ? ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದೇನು?
Top Story

ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ? ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದೇನು?

by ಪ್ರತಿಧ್ವನಿ
August 18, 2026
0

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಜೈಲಿಗೆ ಭೇಟಿ ನೀಡಿ ಮಹಿಳಾ ಬ್ಯಾರಕ್‌ಗಳು, ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು, ಆಹಾರದ ಗುಣಮಟ್ಟ ಹಾಗೂ ಮಕ್ಕಳ ಪರಿಸ್ಥಿತಿಯನ್ನು ಪರಿಶೀಲಿಸಿದರು....

Read moreDetails
ನಿರೂಪಣಾ ಪಯಣಕ್ಕೆ ಅನುಪಮಾ ಗೌಡ ವಿದಾಯ;ಕಾರಣವೇನು?

ನಿರೂಪಣಾ ಪಯಣಕ್ಕೆ ಅನುಪಮಾ ಗೌಡ ವಿದಾಯ;ಕಾರಣವೇನು?

August 18, 2026
ಬಿಎಂಟಿಸಿ ಚಾಲನಾ ಸಿಬ್ಬಂದಿಗೆ ವಿಶೇಷ ಸುರಕ್ಷಾ ಚಾಲನಾ ತರಬೇತಿ ಆರಂಭ

ಬಿಎಂಟಿಸಿ ಚಾಲನಾ ಸಿಬ್ಬಂದಿಗೆ ವಿಶೇಷ ಸುರಕ್ಷಾ ಚಾಲನಾ ತರಬೇತಿ ಆರಂಭ

August 18, 2026
ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣಕ್ಕೆ ಹೊಸ ತಿರುವು? ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣಕ್ಕೆ ಹೊಸ ತಿರುವು? ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

August 18, 2026
ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ

August 18, 2026
Next Post
ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ ಡಾ. ಮಂಜುನಾಥ್

ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ ಡಾ. ಮಂಜುನಾಥ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada