• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಡಪಾಯಿ ಕೊಲೆ ಬಗ್ಗೆ ಯಾರೊಬ್ಬರೂ ಬಾಯ್ಬಿಡ್ತಿಲ್ಲ ಯಾಕೆ..?

ಪ್ರತಿಧ್ವನಿ by ಪ್ರತಿಧ್ವನಿ
June 13, 2024
in ಕರ್ನಾಟಕ
0
30 ಲಕ್ಷ ಹಣ ನೀಡಿದ್ದು ಕನ್ಫರ್ಮ್ !ಕೊಲೆ ಕೇಸ್ ನಲ್ಲಿ ದರ್ಶನ್ ವಿರುದ್ದ ಸಿಕ್ಕ ಬಿಗ್ಗೆಸ್ಟ್ ಎವಿಡೆನ್ಸ್ !
Share on WhatsAppShare on FacebookShare on Telegram

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದಿದೆ. ಕೊಲೆ ಆಗಿರುವ ವ್ಯಕ್ತಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ. ಭಜರಂಗದಳದಲ್ಲಿ ರೇಣುಕಾಸ್ವಾಮಿ ಜಿಲ್ಲಾ ಸಂರಕ್ಷಕ್​ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾನೆ. ಆದರೂ ಲಿಂಗಾಯತ ಸಮುದಾಯ ನಾಯಕರು ಆತನ ಸಾವನ್ನು ಖಂಡಿಸುವ ಕೆಲಸ ಮಾಡುತ್ತಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹ ಮಾಡುತ್ತಿಲ್ಲ. ಕೊಲೆ ಆರೋಪ ಹೊತ್ತಿರುವುದು ಓರ್ವ ಸ್ಟಾರ್​ ನಟ ಅನ್ನೋ ಕಾರಣಕ್ಕೆ ಎಲ್ಲರ ಬಾಯಿಯೂ ಬಂದ್​ ಆಗಿದೆ. ಚುನಾವಣೆ ಸಮಯದಲ್ಲಿ ಪ್ರಚಾರ ಪಡೆಯುವ ಹುಚ್ಚತನ ಎಲ್ಲರನ್ನೂ ಬಾಯಿ ಮುಚ್ಚಿಸಿದೆ.

ADVERTISEMENT

ರೇಣುಕಾಸ್ವಾಮಿ ತಪ್ಪು ಮಾಡಿದ್ದಾನೋ ಇಲ್ಲವೋ ಅನ್ನೋದು ಇಲ್ಲಿ ಅನಗತ್ಯ ಚರ್ಚೆ. ಆತ ಮೆಸೇಜ್​ ಮಾಡಿ ವಿಕೃತಿಯನ್ನೇ ಮೆರೆದಿರಬಹುದು. ಆದರೆ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು. ಪೊಲೀಸ್​ ಠಾಣೆಗೆ ಹೋಗಿ ದೂರು ಕೊಡಬೇಕಿತ್ತು. ಸೈಬರ್​​ ಕ್ರೈಂ ಕ್ರಮತೆಗೆದುಕೊಳ್ಳುತ್ತಿತ್ತು. ಆದರೆ ಚಿತ್ರದುರ್ಗದಿಂದ ಕುತಂತ್ರದಿಂದ ಕರೆಸಿ, ಹಲ್ಲೆ ಮಾಡಿ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದು ಎಷ್ಟು ಸರಿ..? ಓರ್ವ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಬೇಕಿದ್ದ ಸಿನಿಮಾ ನಟ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪಲ್ಲವೇ..? ಯಾರೊಬ್ಬ ನಾಯಕರು ಪ್ರಶ್ನೆ ಮಾಡುವುದು ಬೇಡ. ಕನಿಷ್ಟ ಪಕ್ಷ ಖಂಡನೆಯನ್ನೂ ಮಾಡುತ್ತಿಲ್ಲ. ಇದು ಸರೀನಾ..? ಅನ್ನೋ ಪ್ರಶ್ನೆ ಸಮುದಾಯದಲ್ಲೇ ಕೇಳಿಬರುತ್ತಿದೆ.

ಚಿತ್ರದುರ್ಗದಲ್ಲಿ ಲಿಂಗಾಯತ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಕೇವಲ ಜಿಲ್ಲಾ ಮಟ್ಟದ ನಾಯಕರು ಮಾತ್ರ ಭಾಗಿಯಾಗಿದ್ದಾರೆ. ಅದೂ ಕೂಡ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಯಾಕೆ ಸಮಾಜಘಾತುಕ ಶಕ್ತಿಯಾಗಿ ಬದಲಾಗುವ ಸಮಯದಲ್ಲಿ ಸಮಾಜ ಖಮಡಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮಾಜಘಾತುಕ ಶಕ್ತಿಯನ್ನು ಪ್ರೋತ್ಸಾಹಿಸಿದಂತೆ ಆಗುವುದಿಲ್ಲವೇ..? ಇದೇ ಕೊಲೆಯನ್ನು ಬೇರೊಂದು ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯೇನಾದರೂ ಮಾಡಿದ್ದರೆ ಹೋರಾಟ ಇರುತ್ತಿರಲಿಲ್ಲವೇ..? ಆ ಮನೆಗೆ ಅದೆಷ್ಟು ಜನರು ಹೋಗಿ ಬರುತ್ತಿದ್ದರು..? ಸಾವಿನ ಮನೆಯಲ್ಲಿ ರಾಜಕೀಯ ನಡೆಯುತ್ತಿರಲಿಲ್ಲವೇ..?

ಚಿಲನಚಿತ್ರ ನಟ ಎಂದರೆ ಆತ ಸಮಾಜಕ್ಕೆ ಮಾದರಿ ಆಗಬೇಕೇ ಹೊರತು ತನ್ನ ದುಷ್ಚಟಗಳಿಂದ, ದುರಾಭ್ಯಾಸಗಳಿಂದ, ಕಾನೂನು ಬಾಹಿರ ಕೆಲಸಗಳಿಂದ ಸಮಾಜಕಕ್ಕೆ ಮಾರಕ ಆಗಬಾರದು. ಈ ಒಂದು ಕೇಸ್​ನಲ್ಲಿ ನಟ ದರ್ಶನ್​​ ಪಾರಾಗಿ ಬಂದರೆ ಇದು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆತ ಅಪರಾಧಿಯಲ್ಲ, ಕೇವಲ ಆರೋಪಿ ಅನ್ನೋದನ್ನು ಒಪ್ಪಿಕೊಳ್ಳೋಣ. ಆದರೆ ಆತನ ವಿರುದ್ಧ ಸಾಕ್ಷ್ಯಗಳು ಇರುವ ಕಾರಣಕ್ಕೇ ಪೊಲೀಸರು ಬಂಧನ ಮಾಡಿದ್ದಾರೆ ಎಂದ ಮೇಲಿ ಕನಿಷ್ಟ ಪಕ್ಷ ಕೃತ್ಯವನ್ನು ಖಂಡಿಸುವ ಕೆಲಸವಾದರೂ ಆಗಬೇಕು ಅಲ್ಲವೇ..? ಮೌನಕ್ಕೆ ಶರಣಾದರೆ ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು..? ರಾಜಕೀಯ ಲಾಭ ಆಗುವುದಿದ್ದರೆ ಮಾತ್ರ ಹೋರಾಟ ಎಂದೆ..? ಅವರೇ ಉತ್ತರಿಸಬೇಕಿದೆ.

ಕೃಷ್ಣಮಣಿ

Tags: DarshanmurderRenukaswamy
Previous Post

ಅದ್ದೂರಿಯಾಗಿ ನೆರವೇರಿತು ಅರ್ಜುನ್ ಸರ್ಜಾ ಪುತ್ರಿ ವಿವಾಹ ..

Next Post

ನಟ ದರ್ಶನ್‌ಗೆ ಜೀವಿತಾವಧಿ ಶಿಕ್ಷೆ ಆಗಲಿ ಎಂದ ಮಾಜಿ ಶಾಸಕ ಜಿ‌. ಹೆಚ್.ತಿಪ್ಪಾರೆಡ್ಡಿ

Related Posts

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..
Top Story

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

by ಪ್ರತಿಧ್ವನಿ
April 17, 2026
0

ಬೆಂಗಳೂರು : ಧಾರವಾಡದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನಿನ್ನೆಯಷ್ಟೇ ಶಾಸಕ ಸೇರಿದಂತೆ...

Read moreDetails
114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

April 16, 2026
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
Next Post

ನಟ ದರ್ಶನ್‌ಗೆ ಜೀವಿತಾವಧಿ ಶಿಕ್ಷೆ ಆಗಲಿ ಎಂದ ಮಾಜಿ ಶಾಸಕ ಜಿ‌. ಹೆಚ್.ತಿಪ್ಪಾರೆಡ್ಡಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada