ಮೈಸೂರು: ವಿದ್ಯುತ್ ತಂತಿ ತಗುಲಿದ ಪರಿಣಾಮ ದಸರಾ (Mysuru Dussehra)ದಲ್ಲಿ ಭಾಗವಹಿಸುತ್ತಿದ್ದ ಆನೆ ಅಶ್ವತ್ಥಾಮ (38) (Ashwatthama Elephant) ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಭೀಮನಕಟ್ಟೆ ಹತ್ತಿರ ಹಾಕಲಾಗಿದ್ದ ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿದ ಪರಿಣಾಮ ಅಶ್ವತ್ಥಾಮ ಆನೆ ಸಾವನ್ನಪ್ಪಿದೆ. ಅಶ್ವತ್ಥಾಮ ಎರಡು ಬಾರಿಯಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿತ್ತು.
ಶಾಂತ ಹಾಗೂ ಗಾಂಭೀರ್ಯಕ್ಕೆ ಈ ಆನೆ ಹೆಸರುವಾಸಿಯಾಗಿತ್ತು. 2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಆನೆ ಪತ್ತೆಯಾಗಿತ್ತು.