ಬೆಂಗಳೂರು:ಚಾರಣಕ್ಕೆಂದು ಉತ್ತರಾಖಂಡ (Uttarakhand)ಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟ ಅನುಭವಿಸಿದ್ದ ಕನ್ನಡಿಗರು ಮರಳಿ ರಾಜ್ಯಕ್ಕೆ ಬಂದಿದ್ದಾರೆ.
ರಾಜ್ಯದ 21 ಜನರು ಮರಳಿ ತವರು ನೆಲಕ್ಕೆ ಬಂದಿದ್ದಾರೆ. ಚಾರಣದ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ಚಾರಣಿಗರು ಸೇರಿದಂತೆ 9 ಜನ ಸಾವನ್ನಪ್ಪಿದ್ದರು. ಕನ್ನಡಿಗರು ತೊಂದರೆಗೆ ಸಿಲುಕುತ್ತಿದ್ದಂತೆ ಸರ್ಕಾರ ಮಧ್ಯೆ ಪ್ರವೇಶಿಸಿ, ರಕ್ಷಿಸುವ ಕಾರ್ಯ ಮಾಡಿತ್ತು.
ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರುವ ಬಗ್ಗೆ ಉತ್ತರಾಖಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಜೊತೆ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda)ಅವರು ಮಾತುಕತೆ ನಡೆಸಿದ್ದರು. ಸದ್ಯ ಕೃಷ್ಣಬೈರೇಗೌಡ ಅವರು ಡೆಹ್ರಾಡೂನ್ ನಲ್ಲಿ ರಕ್ಷಿಸಿದ ಕನ್ನಡಿಗ ಚಾರಣಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿದ್ದಾರೆ. ಸಚಿವ ಕೃಷ್ಣಬೈರೆಗೌಡ ಜೊತೆ ಇಂಡಿಗೋ ವಿಮಾನದಲ್ಲಿ 13 ಜನ ಕನ್ನಡಿಗರು ಆಗಮಿಸಿದ್ದಾರೆ.