ಮಂಡ್ಯದಲ್ಲಿ (Mandya) ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ಕುಮಾರಸ್ವಾಮಿ (Kumaraswamy) ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗೆ ಮತ್ತಷ್ಟು ಪ್ರಾಮುಖ್ಯತೆ ಸಿಕ್ಕಿದೆ. ಚುನಾವಣೆಗೂ ಮುನ್ನವೇ ಕುಮಾರಸ್ವಾಮಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎಂದೇ ಮಂಡ್ಯದಲ್ಲಿ ಪ್ರಚಾರ ಮಾಡಲಾಗಿತ್ತು.

ನಿನ್ನೆ ದೆಹಲಿಯಲ್ಲಿ (Delhi) ನಡೆದ ಎನ್‌ಡಿಎ (NDA) ಸಭೆಗೆ ತೆರಳಿದ್ದ ಹೆಚ್ ಡಿ ಕುಮಾರಸ್ವಾಮಿ, ಸಭೆಗೆ ಭಾಗವಹಿಸುವ ಮುನ್ನ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತ, ಕೃಷಿ ಖಾತೆಯ ಇಂಗಿತ ವ್ಯಕ್ತಪಡಿಸಿದ್ದರು. ಒಂದುವೇಳೆ ಕೃಷಿ ಖಾತೆ ಕೊಟ್ಟರೆ ನಿಭಾಯಿಸಬಲ್ಲೆ ಎಂದು ಹೇಳಿದ್ದರು.
ಆದ್ರೆ ಸಭೆಯಲ್ಲಿ ಇದ್ಯಾವದ ಬಗ್ಗೆಯೂ ಚರ್ಚೆಯೇ ನಡೆಯಲಿಲ್ಲ, ಕುಮಾರಸ್ವಾಮಿಯವರೂ ಈ ಬಗ್ಗೆ ಏನೂ ಮಾತನಮಾಡಲಿಲ್ಲ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಮೊದಲು ಸರ್ಕಾರ ರಚನೆಯಾಗಿ, ನಂತರ ಉಳಿದ ವಿಚಾರಗಳ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದ್ದು, ಇದಕ್ಕೆ ಸಮ್ಮತಿಸಿ ಹೆಚ್‌ಡಿಕೆ ವಾಪಸ್ಸಾಗಿದ್ದಾರೆ ಎನ್ನಲಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.











