ಮಂಡ್ಯದಲ್ಲಿ (Mandya) ಕಾಂಗ್ರೆಸ್ (congress) ಭಾರೀ ಮುಖಭಂಗ ಅನುಭವಿಸಿದ ಹಿನ್ನಲೆ, ಚಲುವರಾಯಸ್ವಾಮಿ (Cheluvarayaswamy) ಸಚಿವ ಸ್ಥಾನಕ್ಕೆ ರಾಜೀನಾಮೇ ಕೊಡ್ತಾರಾ ಎಂಬ ಪ್ರಶ್ನೆ ಚರ್ಚೆ ಮಂಡ್ಯದಲ್ಲಿ ಶುರುವಾಗಿದೆ. ಅಷ್ಟೇ ಅಲ್ಲ ಈ ಹಿಂದೆ ಚಲುವರಾಯಸ್ವಾಮಿ ಪ್ರಚಾರದ ವೇಳೆ ನೀಡಿದ್ದ ಹೇಳಿಕೆಯೂ ವೈರಲ್ (viral) ಆಗುತ್ತಿದೆ.

ಚಲುವರಾಯಸ್ವಾಮಿ ಚುನಾವಣಾ ಪ್ರಚಾರದ ವೇಳೆ ಸ್ಟಾರ್ ಚಂದ್ರು (Star chandru) ಸೋತರೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಚುನಾವಣೆ ಸೋತರೇ ನನಗೆ ಕೆಲಸ ಮಾಡೋದಕ್ಕೆ ಮನಸ್ಸು ಬರಲ್ಲ .ಟೇಬಲ್ ಕುಟ್ಟೋಕು ಆಗಲ್ಲ, ಕ್ಯಾಬಿನೇಟ್ ನಲ್ಲಿ ತಲೆ ಎತ್ತಿ ಮಾತನಾಡೋಕೆ ಆಗಲ್ಲ. ರಾಜಕೀಯ ನಿವೃತ್ತಿಯನ್ನೂ ಘೋಷಣೆ ಮಾಡಿ, ನೆಮ್ಮದಿಯಾಗಿ ಇರ್ತೀನಿ ಎಂದು ಹೇಳಿದ್ರು.
ಇದೀಗ ಮಂಡ್ಯದಲ್ಲಿ ಹೆಚ್‌ಡಿಕೆ (HDK) ಭರ್ಜರಿಯಾಗಿ ಗೆಲುವು ಸಾಧಿಸಿದ ಬೆನ್ನಲ್ಲೇ ಸಚಿವ ಚಲುವರಾಯಸ್ವಾಮಿಯ ಭಾಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.











