2024ರ ಲೋಕಸಭಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಎನ್ ಡಿಎ ಬಹುಮತದ ಮ್ಯಾಜಿಕ್ ದಾಟಿದ್ದರೂ ಬಿಜೆಪಿ ಪಾಲಿಗೆ ತಲೆನೋವಾಗಿದೆ. ಈ ಬಾರಿ ಬಿಜೆಪಿ ಬಹುಮತಕ್ಕಿಂತ ಕಡಿಮೆ ಸೀಟು ಗೆದ್ದಿದ್ದು, ಬೆಂಬಿಲಿತ ಪಕ್ಷಗಳ ಸಹಾಯ ಪಡೆಯಲೇಬೇಕಿದೆ.
ಅಲ್ಲದೇ, ಕರ್ನಾಟಕದಲ್ಲಿ ಕೂಡ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗೆದ್ದಿದ್ದರೂ ಕಳೆದ ಬಾರಿಗಿಂತ ಕಡಿಮೆ ಗೆದ್ದಿದೆ. ಕರ್ನಾಟಕದಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಮೈತ್ರಿಯ ಭಾಗವಾಗಿರುವ ಜೆಡಿಎಸ್ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಕಳೆದ ಬಾರಿ ಒಂದೇ ಒಂದು ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 9 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ.
ಸದ್ಯ ಗೆದ್ದಿರುವ ಅಭ್ಯರ್ಥಿಗಳ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ…
1.ಚಿಕ್ಕೋಡಿ ಕಾಂಗ್ರೆಸ್ ಪ್ರಿಯಾಂಕ ಜಾರಕಿಹೊಳಿ ಗೆಲುವು
2.ಬೆಳಗಾವಿ ಬಿಜೆಪಿಯ ಜಗದೀಶ್ ಶೆಟ್ಟರ್ ಗೆಲುವು
3.ಬಾಗಲಕೋಟೆ ಬಿಜೆಪಿಯ ಪಿ.ಸಿ. ಗದ್ದಿಗೌಡರ ಗೆಲುವು
- ಕೋಲಾರ ಜೆಡಿಎಸ್ ನ ಮಲ್ಲೇಶ್ ಬಾಬು ಗೆಲುವು
5.ವಿಜಯಪುರ ಬಿಜೆಪಿಯ ರಮೇಶ್ ಜಿಗಜಿಣಗಿ ಗೆಲುವು
6.ಕಲಬುರಗಿ ಕಾಂಗ್ರೆಸ್ ನ ಡಾ. ರಾಧಾಕೃಷ್ಣ ದೊಡ್ಡಮನಿ ಗೆಲುವು
7.ರಾಯಚೂರು ಕಾಂಗ್ರೆಸ್ ನ ಕುಮಾರ್ ನಾಯಕ್ ಗೆಲುವು
8.ಬೀದರ್ ಕಾಂಗ್ರೆಸ್ ನ ಸಾಗರ್ ಖಂಡ್ರೆ ಗೆಲುವು
9.ಕೊಪ್ಪಳ ಕಾಂಗ್ರೆಸ್ ನ ರಾಜಶೇಖರ್ ಹಿಟ್ನಾಳ್ ಗೆಲುವು
10.ಬಳ್ಳಾರಿ ಕಾಂಗ್ರೆಸ್ ನ ಇ. ತುಕಾರಾಂ ಗೆಲುವು
11.ಹಾವೇರಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಗೆಲುವು
12.ಧಾರವಾಡ ಬಿಜೆಪಿಯ ಪ್ರಹ್ಲಾದ್ ಜೋಶಿ ಗೆಲುವು
13.ಉತ್ತರ ಕನ್ನಡ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು
14.ದಾವಣಗೆರೆ ಕಾಂಗ್ರೆಸ್ ನ ಪ್ರಭಾ ಮಲ್ಲಿಕಾರ್ಜುನ್ ಗೆಲುವು
15.ಶಿವಮೊಗ್ಗ ಬಿಜೆಪಿಯ ಬಿ.ವೈ. ರಾಘವೇಂದ್ರ ಗೆಲುವು
16.ಉಡುಪಿ ಚಿಕ್ಕಮಗಳೂರು ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಗೆಲುವು
17.ಹಾಸನ ಕಾಂಗ್ರೆಸ್ ಶ್ರೇಯಸ್ ಪಟೇಲ್ ಗೆಲುವು
18.ದಕ್ಷಿಣ ಕನ್ನಡ ಬಿಜೆಪಿ ಬ್ರಿಜೇಶ್ ಚೌಟ ಗೆಲುವು
19.ಚಿತ್ರದುರ್ಗ ಬಿಜೆಪಿಯ ಗೋವಿಂದ ಕಾರಜೋಳ ಗೆಲುವು
20.ತುಮಕೂರು ಬಿಜೆಪಿಯ ವಿ. ಸೋಮಣ್ಣ ಗೆಲುವು
21.ಮಂಡ್ಯ ಜೆಡಿಎಸ್ ಎಚ್. ಡಿ. ಕುಮಾರಸ್ವಾಮಿ ಗೆಲುವು
22.ಮೈಸೂರು- ಕೊಡಗು ಬಿಜೆಪಿಯ ಯದುವೀರ್ ಒಡೆಯರ್ ಗೆಲುವು
23.ಚಾಮರಾಜನಗರ ಕಾಂಗ್ರೆಸ್ ನ ಸುನೀಲ್ ಬೋಸ್ ಗೆಲುವು
24.ಬೆಂಗಳೂರು ಗ್ರಾ. ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ಗೆಲುವು
25.ಬೆಂಗಳೂರು ಉತ್ತರ ಬಿಜೆಪಿಯ ಶೋಭಾ ಕರಂದ್ಲಾಜೆ ಗೆಲುವು
26.ಬೆಂಗಳೂರು ಕೇಂದ್ರ ಬಿಜೆಪಿಯ ಪಿ.ಸಿ. ಮೋಹನ್ ಗೆಲುವು
27.ಬೆಂಗಳೂರು ದಕ್ಷಿಣ ಬಿಜೆಪಿಯ ತೇಜಸ್ವಿ ಸೂರ್ಯ ಗೆಲುವು
28.ಚಿಕ್ಕಬಳ್ಳಾಪುರ ಬಿಜೆಪಿಯ ಕೆ. ಸುಧಾಕರ್ ಗೆಲುವು