• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ನಶೆ ನಟಿ ಹೇಮಾಗೆ ಜೈಲು.. ಕಣ್ಣೀರು ಹಾಕುತ್ತಲೇ ಜೈಲಿಗೆ ಎಂಟ್ರಿ..

ಪ್ರತಿಧ್ವನಿ by ಪ್ರತಿಧ್ವನಿ
June 4, 2024
in ಇತರೆ / Others, ದೇಶ, ಸಿನಿಮಾ
0
ಸಿಸಿಬಿ ವಿಚಾರಣೆಗೆ ಹಾಜರಾದ ನಟಿ ಹೇಮಾ!
Share on WhatsAppShare on FacebookShare on Telegram

ಬೆಂಗಳೂರಲ್ಲಿ ಇತ್ತೀಚಿಗೆ ಭಾರೀ ಸದ್ದು ಮಾಡಿದ್ದು ರೇವ್‌ ಪಾರ್ಟಿ. ಸನ್‌ ಸೆಟ್‌ ಟು ಸನ್‌ ರೈಸ್‌‌ ಅನ್ನೋ ನೈಟ್‌ ಪಾರ್ಟಿಯಲ್ಲಿ ತೆಲುಗು ಸ್ಟಾರ್ಸ್‌‌ ಭಾಗಿಯಾಗಿದ್ರು. ಅದ್ರಲ್ಲಿ ನಟಿ ಹೇಮಾ ಕೂಡ ಇದ್ರು. ಪಾರ್ಟಿಯಲ್ಲಿ ಸಿಕ್ಕಿಬಿದ್ದಾಗಲೂ ನಾನು ಹೈದ್ರಾಬಾದ್‌ನಲ್ಲೇ ಇದ್ದೀನಿ ಎಂದು ವಿಡಿಯೋ ಮಾಡಿ ಡ್ರಾಮಾ ಮಾಡಿದ್ದ ನಟಿ ಅರೆಸ್ಟ್‌ ಆದಾಗಲೂ ಅದೇ ರೀತಿಯ ಡ್ರಾಮಾ ಮಾಡಿದ್ದಾರೆ. ಇದ್ರ ನಡುವೆ ಜಡ್ಜ್‌ ಎದುರು ಹಾಜರು ಮಾಡಲಾಗಿದ್ದು, ಜೂನ್‌ 14ರ ತನಕ ಜೈಲಿಗೆ ಕಳುಹಿಸಲಾಗಿದೆ.

ADVERTISEMENT

ಮೇ 19ರ ರಾತ್ರಿ ಸಿಸಿಬಿ ಪೊಲೀಸ್ರಿಗೆ ಸಿಕ್ಕಿಬಿದಿದ್ದ ನಟಿ ಹೇಮಾ, ನಾನು ಹೈದ್ರಾಬಾದ್‌ನಲ್ಲೇ ಇದ್ದೀನಿ. ಬೆಂಗಳೂರಿನ ರೇವ್‌ ಪಾರ್ಟಿಗೆ ಹೋಗೇ ಇಲ್ಲ ಅಂತಾ ಕಥೆ ಕಟ್ಟಿದ್ರು. ಆ ಬಳಿಕ ಪೊಲೀಸ್ರು ರಿಲೀಸ್‌ ಮಾಡಿದ ಫೋಟೋದಲ್ಲಿ ಸೆರೆಯಾಗಿದ್ದ ಕಕ್ಕಾಬಿಕ್ಕಿ ಆಗಿದ್ದರು. ಇದೀಗ ಸಿಸಿಬಿ ಪೊಲೀಸ್ರು ನಟಿ ಹೇಮಾಳನ್ನು ಬಂಧನ ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ವೇಳೆ ನಾನು ತಪ್ಪೇ ಮಾಡಿಲ್ಲ, ನೀವು ತೋರಿಸುತ್ತಿರುವುದೆಲ್ಲಾ ಸುಳ್ಳು. ನಾನು ಈಗ ರಕ್ತ, ಕೂದಲು, ಉಗುರು, ಯೂರಿನ್‌ ಟೆಸ್ಟ್‌ಗೆ ಕೊಟ್ಟಿದ್ದೇನೆ ಎಂದು ರಂಪಾಟ ಮಾಡಿದ್ದಾಳೆ.

ಎಲೆಕ್ಟ್ರಾನಿಕ್‌ ಸಿಟಿಯ ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿಯಲ್ಲಿ ನಟಿ ಹೇಮಾ ಡ್ರಗ್‌‌ ಸೇವನೆ ಮಾಡಿದ್ರು ಅನ್ನೋದ್ರ ಜೊತೆಗೆ ಡ್ರಗ್ಸ್‌ ಕಾರ್ಯಕ್ರಮ ಆಯೋಜಕರು ಆಗಿದ್ದರು ಅನ್ನೋದು ಗೊತ್ತಾಗಿದೆ. ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಹೇಮಾಳಿಗೆ ಮೆಡಿಕಲ್ ಚೆಕಪ್ ಮಾಡಿಸಿದ ಬಳಿಕ ಜಡ್ಜ್‌ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರ ಎದುರು ಹಾಜರು ಮಾಡಲಾಯ್ತು. ಆ ಬಳಿಕ ನ್ಯಾಯಾಧೀಶರು ಜೂನ್‌ 14ರ ತನಕ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಮಾಡಿದ್ದಾರೆ.

ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಎರಡು ನೋಟಿಸ್ ನೀಡಿತ್ತು.. ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಒಂದು ವಾರ ಸಮಯಾಕಾಶ ನೀಡುವಂತೆ ನಟಿ ಹೇಮಾ ಸಿಸಿಬಿ ಪೊಲೀಸರಲ್ಲಿ ಮನವಿ ಮಾಡಿದ್ದರು. ಆ ಬಳಿಕ ಜೂನ್‌ 1ರಂದು ಹಾಜರಾಗುವಂತೆ 2ನೇ ಬಾರಿ ನೋಟಿಸ್ ಜಾರಿ ಮಾಡಿದ್ದರು. ಆದರೆ ಜೂನ್‌ ರಂದು ವಿಚಾರಣೆಗೆ ಹಾಜರಾದ ನಟಿ ಹೇಮಾ ಬುರ್ಖಾ ಧರಿಸಿ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಹಾಜರಾಗಿದ್ರು ಅನ್ನೋದು ವಿಶೇಷ. ಈ ವೇಳೆ ಬಂಧನ ಮಾಡಲಾಗಿದೆ.

ಹುಟ್ಟುಹಬ್ಬ ಸೋಗಿನಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಡ್ರಗ್ಸ್ ಬಳಕೆ ಮಾಹಿತಿ ಹಿನ್ನೆಲೆ ದಾಳಿ ನಡೆಸಿದ್ದ ಸಿಸಿಬಿ ಟೀಂ 6 ಮಂದಿಯನ್ನ ಬಂಧಿಸಿದ್ದರು. ಪಾರ್ಟಿಯಲ್ಲಿ ಭಾಗಿಯಾಗಿದ್ದ 86 ಮಂದಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಅನ್ನೋದು ರಕ್ತ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ನಟಿ ಹೇಮಾ ಕೂಡ ಡ್ರಗ್ಸ್ ಸೇವನೆ ಮಾಡಿರುವುದು ಕಂಡು ಬಂದಿತ್ತು. ಜೊತೆಗೆ ಬಂಧಿತ ವಾಸು, ಅರುಣ್, ಸಿದ್ದಿಕ್, ರಣದೀರ್ ಹಾಗೂ ರಾಜ್ ಭಾವ ಅವರ ವಿಚಾರಣೆ ವೇಳೆ ಹೇಮಾ ಕೂಡ ರೇವ್ ಪಾರ್ಟಿ ಆಯೋಜಕರು ಅನ್ನೋದು ಬಯಲಾದ ಬೆನ್ನಲ್ಲೇ ಬಂಧನ ಮಾಡಲಾಗಿದೆ.

ಜಡ್ಜ್‌ ಎದುರು ಹಾಜರು ಮಾಡಿದ ವೇಳೆ ಕಣ್ಣೀರು ಹಾಕಿರುವ ತೆಲುಗು ನಟಿ ಹೇಮಾ, ನಾನು ಡ್ರಗ್ಸ್‌ ಸೇವನೆ ಮಾಡಿಲ್ಲ. ನಾನು ಬರ್ತ್‌‌ ಡೇ ಪಾರ್ಟಿಗೆ ಬಂದಿದ್ದು ನಿಜ. ಆದರೆ ಡ್ರಗ್ಸ್‌ ಸೇವನೆ ಮಾಡಿಲ್ಲ. ಕೇಕ್‌ ಕತ್ತರಿಸಿದ ಬಳಿಕ ನಾನು ಹೈದ್ರಾಬಾದ್‌ಗೆ ಹೊರಟು ಹೋಗಿದ್ದೆ ಎಂದಿದ್ದಾರೆ. ಆದರೆ ಕೋರ್ಟ್‌ನಲ್ಲಿ ಅದು ಸಾಬೀತಾಗಬೇಕಿದೆ. ಸಾಬೀತು ಆಗುವ ತನಕ ಕೋರ್ಟ್‌, ಜೈಲು ಅನ್ನೋದು ಮಾಮೂಲು ಎನ್ನಬಹುದು.

ಕೃಷ್ಣಮಣಿ

Tags: Drugs caseHemajail
Previous Post

ಸ್ಟ್ರಾಂಗ್ ರೂಂ ಕೀ ಮನೆಯಲ್ಲಿಯೇ ಬಿಟ್ಟು ಬಂದ ಅಧಿಕಾರಿ

Next Post

ಆರಂಭಿಕ ಮುನ್ನಡೆ; ಭರ್ಜರಿ ತಯಾರಿ ನಡೆಸಿದ ಬಿಜೆಪಿ

Related Posts

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..
Top Story

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

by ಪ್ರತಿಧ್ವನಿ
April 16, 2026
0

ನವದೆಹಲಿ :  ಕೇಂದ್ರ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ವಿಪಕ್ಷಗಳ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಚಿವ ಅರ್ಜುನ್‌...

Read moreDetails
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
Next Post
ಆರಂಭಿಕ ಮುನ್ನಡೆ; ಭರ್ಜರಿ ತಯಾರಿ ನಡೆಸಿದ ಬಿಜೆಪಿ

ಆರಂಭಿಕ ಮುನ್ನಡೆ; ಭರ್ಜರಿ ತಯಾರಿ ನಡೆಸಿದ ಬಿಜೆಪಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada