ಹೆಣ್ಣು ಮಕ್ಕಳಿಗೆ ಮುಖದ ಮೇಲೆ ಇರುವಂತಹ ಅನಗತ್ಯ ಕೂದಲು ಅಂದವನ್ನು ಹಾಳು ಮಾಡುತ್ತದೆ. ಈ ಅನಗತ್ಯ ಕೂದಲನ್ನ ಹೋಗಲಾಡಿಸುವುದೇ ಒಂದು ಟಾಸ್ಕ್ ಇದ್ದಂತೆ. ಕೆಲವರು ಸಲೂನ್ ಗೆ ಹೋಗಿ ಥ್ರೆಡ್ಡಿಂಗ್ ಮಾಡಿಸುತ್ತಾರೆ. ಇನ್ನು ಕೆಲವರು ವ್ಯಾಕ್ಸಿಂಗ್ ಮೂಲಕ ರಿಮೂವ್ ಮಾಡ್ಸಿತಾರೆ. ಹಾಗೂ ಕೆಲವರು ಫೇಸ್ ರೇಜರ್ ನ ಬಳಸುತ್ತಾರೆ.ಇದೆಲ್ಲ ತ್ವಜೆಯನ್ನು ಹಾಳು ಮಾಡುತ್ತೆದೇ ತಕ್ಷಣಕ್ಕೆ ಇವುಗಳಿಂದ ಮುಖದ ಕೂದಲು ನಿವಾರಣೆಯಾಗುವುದರ ಜೊತೆಗೆ ಮುಖದಲ್ಲಿ ಸುಕ್ಕು ಬೇಗನೆ ಹೆಚ್ಚಾಗುತ್ತದೆ.ಹಾಗಿದ್ರೆ ಒಂದಿಷ್ಟು ನ್ಯಾಚುರಲ್ ರೆಮಿಡಿಯಿಂದ ಮುಖದ ಕೂದಲನ್ನ ನಿವಾರಣೆ ಮಾಡುವುದು ಹೇಗೆ ಅನ್ನುವುದರ ಮಾಹಿತಿ ಹೀಗಿದೆ.

ಕೊಬ್ಬರಿ ಎಣ್ಣೆ ಮತ್ತು ಅರಿಶಿಣ
ಒಂದು ಟೇಬಲ್ ಸ್ಪೂನ್ ಅಷ್ಟು ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಚಿಟಿಕೆ ಅರಿಶಿಣದ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ,ನಂತರ ನಿಧಾನವಾಗಿ ಉಜ್ಜಿ ,ಉಗುರು ಬೆಚ್ಚ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದಲ್ಲಿ ಇರುವಂತಹ ಅನಗತ್ಯ ಕೂದಲು ನಿವಾರಣೆ ಆಗುತ್ತದೆ ಹಾಗೂ ಮುಖದ ಅಂದವು ಹೆಚ್ಚಾಗುತ್ತದೆ.

ಎಗ್ ವೈಟ್
ಒಂದು ಬೌಲ್ ಗೆ ಮೊಟ್ಟೆಯ ಬಿಳಿಯ ಭಾಗವನ್ನು ಹಾಕಿ ಅದಕ್ಕೆ ಅರ್ಧ ಚಮಚದಷ್ಟು ಸಕ್ಕರೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಆ ಪೇಸ್ಟ್ ಅನ್ನ ಮುಖಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ಮುಖವನ್ನು ವಾಶ್ ಮಾಡುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ ಹಾಗೂ ಬೇಡದ ಕೂದಲು ಹೋಗುತ್ತದೆ.

ಹಾಲಿನ ಕೆನೆ
ಒಂದು ಟೇಬಲ್ ಸ್ಪೂನ್ ನಷ್ಟು ಕಡಲೆಹಿಟ್ಟಿಗೆ ಚಿಟಿಕೆಯಷ್ಟು ಅರಿಶಿಣ ಮತ್ತು ಹಾಲಿನ ಕೆನೆಯನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಬೇಡವಾದ ಕೂದ್ಲು ನಿವಾರಣೆ ಆಗುತ್ತದೆ ಹಾಗೂ ಕೂದಲಿನ ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ಹಚ್ಚಿ ಇದರಿಂದ ಕೂದಲು ಬೆಳೆಯುವುದು ಕೂಡ ಕಡಿಮೆ ಆಗುತ್ತದೆ ಇದನ್ನ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿದರೆ ತಕ್ಷಣದ ಪರಿಹಾರ ಸಿಗುತ್ತದೆ.
