ವಾಲ್ಮೀಕಿ ನಿಗಮ ಹಗರಣ ಪ್ರಕರಣದ ತನಿಖೆಯಲ್ಲಿ ನಿಗಮದ ಮೇಲೆ ದಾಳಿ ನಡೆಸಿದ ಎಸ್ ಐಟಿ (SIT) ಸಂಪೂರ್ಣ ಪರಿಶೀಲನೆ ನಡೆಸಿದೆ. ಇಬ್ಬರು ಆರೋಪಿಗಳ ಜೊತೆಗೆ ತೆರಳಿ ಎಸ್.ಐ.ಟಿ ಅಧಿಕಾರಿಗಳು ನಿಗಮದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.
ವಾಲ್ಮೀಕಿ ನಿಗಮ ಮಂಡಳಿಯ ಅಕ್ರಮ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳನ್ನು ಕೋರ್ಟ್ ಆರು ದಿನ ಎಸ್ ಐಟಿ ಕಸ್ಟಡಿಗೆ ನೀಡಿತ್ತು. ಪದ್ಮನಾಭ್ (Padhmanab) ಮತ್ತು ಪರಶುರಾಮ್ (Parashuram) ಈ ಇಬ್ಬರನ್ನು ಕರೆತಂದು ಮಹಜರು ಪ್ರಕ್ರಿಯೆ ನಡೆಸಲಾಗಿದೆ.
ಇಂದು ವಸಂತನಗರದಲ್ಲಿರುವ (Vasanthanagar) ನಿಗಮ ಮಂಡಳಿಯಲ್ಲಿ ಮಹಜರು ನಡೆಸಿ, ಡಿಜಿಟಲ್ ಎವಿಡೆನ್ಸ್ ಗಾಗಿ (Digital evidence) ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ನಿನ್ನೆ ಪದ್ಮನಾಭ್ ಮತ್ತು ಪರಶುರಾಮ್ ಇಬ್ಬರನ್ನೂ ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತ್ತು.