ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು 42ನೇ ಎಸಿಎಂಎಂ ಕೋರ್ಟ್ 6 ದಿನ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿದೆ. ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 6 ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಮಾಡಿದೆ. ಒಟ್ಟು 6 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಎರಡು ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಬಳಿಕ ತಮ್ಮ ತೀರ್ಮಾನವನ್ನು ಪ್ರಕಟ ಮಾಡಿದರು. ಪ್ರಜ್ವಲ್ ಪರ ವಾದ ಮಾಡಿದ ವಕೀಲರು 1 ದಿನ ಮಾತ್ರ ಎಸ್ಐಟಿ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ಜೂನ್ 6 ರವರೆಗೆ ಕಸ್ಟಡಿಗೆ ನೀಡಿದೆ. ಎಸ್ಐಟಿ ಪರವಾಗಿ ವಾದ ಮಂಡನೆ ಮಾಡಿದ ಎಸ್ಎಸ್ಪಿ ಅಶೋಕ್ ನಾಯಕ್, ಇವನು ಒಬ್ಬ ವಿಕೃತ ಕಾಮಿ ಎನ್ನಿಸುತ್ತಿದೆ. ಇವರು ತುಂಬಾ ಅಪಾಯಕಾರಿ ಇದ್ದಾನೆ. ಸಂತ್ರಸ್ತ ಮಹಿಳೆ ಹೇಳಿಕೆ ಪ್ರಕಾರ ಅತ್ಯಾಚಾರ ಮಾಡಿದ್ದಾನೆ. ಈ ಪ್ರಕರಣದಲ್ಲಿ 100 ಕ್ಕೂ ಹೆಚ್ಚು ಸಂತ್ರಸ್ತಯರು ಇದ್ದಾರೆ. ಈ ಬಗ್ಗೆಮೀಡಿಯಾದಲ್ಲಿ ಸುದ್ದಿ ಅಗಬಾರದು ಅಂತ ತಡಯಾಜ್ಞೆ ತಂದಿದ್ದಾರೆ ಎಂದು ವಾದಿಸಿದರು. ಪ್ರಜ್ವಲ್ ಪರ ವಕೀಲ ಅರುಣ್ ವಾದ ಮಂಡಿಸಿ, ಆರೋಪಿ ಬಗ್ಗೆ ಸಾಕ್ಷಿ ಇಲ್ಲ. ವಿಡಿಯೋ ಮಾಡಿದ್ದಾನೆ ಎನ್ನಲಾದ ಡಿವೈಸ್ ಇಲ್ಲ. ಆರೋಪಿ ಎಸ್ಐಟಿ ಮುಂದೆ ಶರಣಾಗಿದ್ದಾನೆ. 14 ದಿನ ಕಸ್ಟಡಿಗೆ ಕೇಳುವುದು ನ್ಯಾಯ ಬದ್ದ ಅಲ್ಲ. ಕಸ್ಟಡಿಗೆ ಕೊಡಿ ಬೇಡಿ ಅನ್ನಲ್ಲ. ಕೊಟ್ಟರೆ ಒಂದು ದಿನ ಮಾತ್ರ ಕೊಡಿ ಅಂತ ಪ್ರಜ್ವಲ್ ಪರ ವಕೀಲರು ವಾದ ಮಂಡನೆ ಮಾಡಿದ್ದರು.
ಏಕವಚನದಲ್ಲಿ ಮಾತಾಡಿದ್ದ ಹಳ್ಳಿಹಕ್ಕಿಗೆ ಸಚಿವ ಭೈರತಿ ಸುರೇಶ್ ಕೌಂಟರ್
ಸಿಎಂ ಕುರ್ಚಿಗಾಗಿ ಮುಡಾ ಹಗರಣ ಹೊರಬಂದಿದೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ. ಕುರಿತು ಮಾತನಾಡಿರುವ ಸಚಿವ...
Read more