ಮನೆಯಲ್ಲಿ ಮಕ್ಕಳಿದ್ದರೆ ಗೋಡೆಯ ಮೇಲೆ ಗೀಚುವುದು ಸಹಜ. ಪೆನ್ನು ಪೆನ್ಸಿಲ್ ಏನೇ ಕೊಟ್ರೂ ಅವರು ಪುಸ್ತಕ ಅಥವಾ ಪೇಪರ್ ಮೇಲೆ ಬರಿವ ಬದಲು ಗೋಡೆ ಮೇಲೆನೇ ಗಿಚ್ಚುತ್ತಾರೆ. ಅದು ಕೂಡ ಬಣ್ಣ ಬಣ್ಣದ ಕಲೆಗಳು ಗೋಡೆ ಮೇಲೆ ಇರುವುದನ್ನ ಹೆಚ್ಚಾಗಿ ನೋಡ್ತೀರ. ಮಕ್ಕಳಿಗೆ ನೀವು ಎಷ್ಟೇ ಬುದ್ದಿ ಹೇಳಿದರು ಗೋಡೆ ಮೇಲೆ ಬರಬಾರದು ಅಂದ್ರು ಅವರು ಪದೇಪದೇ ಆ ತಪ್ಪನ್ನು ಮಾಡುತ್ತಾನೆ ಇರುತ್ತಾರೆ. ಮಕ್ಕಳಿಗೆ ಹೊಡೆಯಲಾರದೆ ತಂದೆ ತಾಯಿಗಳು ಹೋಗಲಿ ಬಿಡು ಅಂತ ಸುಮ್ನಾಗ್ತಾರೆ.
ಆದ್ರೆ ಗೋಡೆ ಮೇಲೆ ಕಲೆಗಳಿದ್ದರೆ ನೋಡಲು ತುಂಬಾನೇ ಹಿಂಸೆ, ಗಲಿಜನಿಸುತ್ತದೆ. ಇಂಥ ಸಂದರ್ಭದಲ್ಲಿ ಇನ್ನೊಮ್ಮೆ ಪೇಯಿಂಟ್ ಮಾಡಿಸುವ ಯೋಚನೆ ತಂದೆ ತಾಯಿ ಎಲ್ಲಿರುತ್ತದೆ. ಆದರೆ ಅಲ್ಲಿಯತನಕ ಗೋಡೆಯ ಕಲೆಗಳನ್ನ ಹಾಗೆ ಬಿಡುವ ಬದಲು ಈ ಒಂದು ಸಿಂಪಲ್ ಹ್ಯಾಕ್ ಅನ್ನ ಟ್ರೈ ಮಾಡಿ ಗೋಡೆ ಮೇಲೆ ಮಕ್ಕಳು ಬರೆದಿರುವ ಕಲೆಗಳನ್ನ ತಕ್ಷಣವೇ ಹೋಗಲಾಡಿಸಿ.
ಟೂತ್ ಪೇಸ್ಟ್
ಬಿಳಿಯ ಬಣ್ಣದ ಟೂತ್ ಪೇಸ್ಟ್ ನ ಒಂದು ಬ್ರಷ್ ಗೆ ಹಾಕಿ ಗೋಡೆಗೆ ಸ್ವಲ್ಪ ನೀರನ್ನು ಹಾಕಿ ನಿಧಾನವಾಗಿ ಉಜ್ಜುವುದರಿಂದ ಗೋಡೆಯ ಮೇಲೆ ಇರುವಂತಹ ಬರಹಗಳನ್ನ ಹೋಗಿಸಬಹುದು. ಆದರೆ ಉಜ್ಜುವಾಗ ಹಾರ್ಡ್ ಆಗಿ ರಬ್ ಮಾಡಬಾರದು, ಬದಲಿಗೆ ನಿಧಾನವಾಗಿ ಮಾಡುವುದರಿಂದ ಕಲೆಗಳು ಹೋಗುತ್ತವೆ.
ಸ್ಯಾನಿಟೈಸರ್
ಹ್ಯಾಂಡ್ ಸ್ಯಾನಿಟೈಸರ್ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇರುತ್ತೆ ಒಂದು ಕರ್ಚಿಫ್ ಅಥವಾ ಟವಲ್ ಗೆ ಸ್ವಲ್ಪ ಸ್ಯಾನಿಟೈಸರ್ ಹಾಕಿ,ಕಲೆಗಳಾದ ಜಾಗದಲ್ಲಿ ಒರೆಸುವುದರಿಂದ ತಕ್ಷಣಕ್ಕೆ ಬರಹಗಳು ಅಥವಾ ಯಾವುದೇ ಬಣ್ಣದ ಕಲೆಗಳನ್ನ ಈಜಿಯಾಗಿ ಹೋಗಿಸಬಹುದು.
ಅಡುಗೆ ಸೋಡಾ
ಅಡುಗೆ ಸೋಡಾ ಇಂತಹ ಕಲೆಗಳನ್ನ ಬೇಗನೆ ಶಮನ ಮಾಡುತ್ತಿದೆ. ಅಡುಗೆ ಸೋಡಾ ಗೆ ಸ್ವಲ್ಪ ನಿಂಬೆರಸ ಹಾಗೂ ಟೂತ್ಪೇಸ್ಟ್ ಅನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕಲೆಗಳಾದ ಜಾಗದಲ್ಲಿ ಹಚ್ಚಿ ಒಂದೆರಡು ನಿಮಿಷ ಹಾಗೆ ಬಿಟ್ಟು ಒಂದು ಬ್ರಷ್ ಅಥವಾ ಬಟ್ಟೆಯಿಂದ ವಹಿಸುವುದರಿಂದ ಕಲೆಗಳು ಬೇಗನೆ ನಿವಾರಣೆ ಆಗುತ್ತದೆ