ಪ್ರಜ್ವಲ್ (Prajwal) ಆಗಮನದ ಸಾಧ್ಯತೆ ಹಿನ್ನಲೆಯಲ್ಲಿ SIT ಟೀಮ್ ಸಾಕಷ್ಟು ಮುನ್ನೆಚರಿಕಾ ಕ್ರಮ ಕೈಗೊಂಡಿದ್ದರೆ. ಏರ್ ಪೋರ್ಟ್ (Airport) ಅಧಿಕಾರಿಗಳ ಸಂಪರ್ಕದಲ್ಲಿದ್ದು, ಏರ್ ಪೊರ್ಟ್ ಹೊರಗೆ ಕೂಡ ನಿಗಾ ಇರಿಸಲಾಗಿದೆ ಹಾಗೂ ಪ್ರಜ್ವಲ್ ರನ್ನ ಬಂಧಿಸಿ ಕರೆತರಲು ಮೂರು ತಂಡಗಳು ಸಿದ್ದವಾಗಿದೆ.
ಒಂದ್ವೇಳೆ ಪ್ರಜ್ವಲ್ ರೇವಣ್ಣ (Prajwal revanna) ಬಂದಲ್ಲಿ ಏರ್ ಪೋರ್ಟ್ ಬಳಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೂಡ ಮುನ್ನೆಚ್ಚರಿಕೆ ವಹಿಸಲಾಗಿದ್ದು,ಈಗಾಗ್ಲೇ ಸ್ಥಳೀಯ ಪೊಲೀಸರ ಜೊತೆ ಸೂಕ್ತ ಬಂದೋಬಸ್ತ್ ಗೆ ಎಸ್ ಐಟಿ (SIT) ಸೂಚನೆ ಕೊಟ್ಟಿದೆ.
ಮೊದಲಿಗೆ ಏರ್ ಪೋರ್ಟ್ ಅಧಿಕಾರಿಗಳು ಪ್ರಜ್ವಲ್ ರನ್ನ ವಶಕ್ಕೆ ಪಡೆದು, ಬಳಿಕ ಎಸ್ ಐಟಿಗೆ ಮಾಹಿತಿ ನೀಡಲಿದ್ದಾರೆ. ಆ ಬಳಿಕ ಏರ್ಪೋರ್ಟ್ ಸಿಬ್ಬಂದಿ ಪ್ರಜ್ವಲ್ ರೇವಣ್ಣ ರನ್ನ SIT ಅಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದಾರೆ.