ಮಗು ಹುಟ್ಟಿ ಒಂದಿಷ್ಟು ದಿನಗಳ ನಂತರ ಮಗುವಿಗೆ ಸ್ನಾನ ಮಾಡಿಸುವ ಮುನ್ನ ಇಡೀ ದೇಹಕ್ಕೆ ಎಣ್ಣೆಯನ್ನು ಹಚ್ಚಿ ಕೆಲ ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಹಾಗೆ ಬಿಟ್ಟು,ನಂತರ ಬಿಸಿ ನೀರಿನಲ್ಲಿ ಸ್ನಾನವನ್ನು ಮಾಡಿಸುತ್ತಾರೆ,ಇದು ದಶಕಗಳಿಂದಲೂ ಬಂದಿರುವ ಒಂದು ಸಾಂಪ್ರದಾಯಿಕ ಪದ್ಧತಿ.
ಹಿಂದೆಲ್ಲಾ ಇದನ್ನ ತಪ್ಪದೇ ಪ್ರತಿದಿನವೂ ಪಾಲಿಸ್ತಾ ಇದ್ದರು .ಆದರೆ ಇತ್ತೀಚಿನ ದಿನಗಳಲ್ಲಿ ಈ ಒಂದು ಅಭ್ಯಾಸವನ್ನು ಅಥವಾ ಪದ್ಧತಿಯನ್ನು ಜನ ಮರೆತಿದ್ದಾರೆ/ ಬಿಟ್ಟಿದ್ದಾರೆ. ಆದರೆ ಎಣ್ಣೆ ಹಚ್ಚುವ ಮುಖ್ಯ ಕಾರಣ, ಪದ್ಧತಿ ಮಾತ್ರ ಅಲ್ಲ ಇದರ ಹಿಂದೆ ಸಾಕಷ್ಟು ಸೈಂಟಿಫಿಕ್ ರೀಸನ್ಗಳು ಕೂಡ.ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದರಿಂದ ಮಕ್ಕಳಿಗೆ ಏನೆಲ್ಲ ಪ್ರಯೋಜನಗಳಿವೆ ಅನ್ನೋದು ಸಾಕಷ್ಟು ಜನಕ್ಕೆ ತಿಳಿದಿಲ್ಲ ಆ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಎಣ್ಣೆ ಹಚ್ಚಿ ಸ್ನಾನ ಮಾಡ್ಸುವುದರಿಂದ ಮಕ್ಕಳ ಕೈಕಾಲುಗಳಲ್ಲಿ ಅಥವಾ ದೇಹದಲ್ಲಿ ಫ್ಲೆಕ್ಸಿಬಲಿಟಿ ಹೆಚ್ಚಾಗುತ್ತದೆ ಹಾಗೂ ಮಕ್ಕಳ ಮಜಲ್ಸ್ ರಿಲಾಕ್ಸ್ ಆಗುತ್ತದೆ.
ಎಣ್ಣೆಯ ಸ್ನಾನದಿಂದಾಗಿ ಮಕ್ಕಳು ಚೆನ್ನಾಗಿ ನಿದ್ದೆ ಮಾಡುತ್ತವೆ ನಿದ್ರೆ ಸರಿಯಾದರೆ ರಗಳೆ ಕೂಡ ಕಡಿಮೆಯಾಗುತ್ತದೆ ನಿದ್ದೆ ಸರಿಯಾಗದಿದ್ದರೆ ಮಕ್ಕಳು ಅಳುವಂತದ್ದು ಕಿರಿಕಿರಿ ಮಾಡುವಂತದ್ದು ಹೆಚ್ಚಾಗುತ್ತದೆ.
ಆರೋಗ್ಯಕರವಾಗಿ ಉಸಿರಾಡುವುದಕ್ಕೆ ಸಹಾಯಕಾರಿ ಹಾಗೂ ಯಾವುದೇ ಒಂದು ದೇಹಕ್ಕೆ ಸಮಸ್ಯೆ ಆಗದಂತೆ ಎಣ್ಣೆಯ ಸ್ನಾನ ಕಾಪಾಡುತ್ತದೆ.
ಮಕ್ಕಳ ಜೀರ್ಣಕ್ರಿಯೆಗೆ ಉತ್ತಮ. ಕೆಲವು ತಾಯಂದಿರಿಗೆ ತಮ್ಮ ಮಕ್ಕಳಿಗೆ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ ಇದರಿಂದಾಗಿ ಮಲಬದ್ಧತೆ ಆಗುತ್ತದೆ ಎಂದು ಚಿಂತಿಸುತ್ತಾರೆ. ಹಾಗಾಗಿ ಎಣ್ಣೆ ಮಸಾಜ್ ಮಾಡುವುದರಿಂದ ಕಾನ್ಸ್ಟಿಪೇಶನ್ ಸಮಸ್ಯೆಯಿಂದ ದೂರ ಉಳಿಬಹುದು ಜೀರ್ಣಕ್ರಿಯೆ ಸುಲಭವಾಗುತ್ತದೆ.
ಮಕ್ಕಳ ತ್ವಚೆಗೆ ತುಂಬಾನೆ ಒಳ್ಳೆಯದು ಮಕ್ಕಳ ಚರ್ಮವನ್ನು ಎಣ್ಣೆ ಮಾಯಿಶ್ಚರೈಸ್ ಮಾಡುತ್ತದೆ. ಇದರಿಂದ ಕೈ ಕಾಲುಗಳು ಮೈ ಒಡೆಯುವಂತ ಸಮಸ್ಯೆ ಆಗುವುದಿಲ್ಲ.
ಕೊಬ್ಬರಿ ಎಣ್ಣೆ ,ಹರಳೆಣ್ಣೆ ಅಥವಾ ಎಳ್ಳೆಣ್ಣೆ, ಇದರಲ್ಲಿ ಯಾವ ಎಣ್ಣೆಯನ್ನಾದರೂ ನೀವು ಬಳಸಬಹುದು. ಹೆಚ್ಚಾಗಿ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಯನ್ನ ಮಿಶ್ರಣ ಮಾಡಿ ಒಂದು ಬಟ್ಟಲಲ್ಲಿ ಆ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ,ಬೆಚ್ಚಗಾದ ಮೇಲೆ ಮಕ್ಕಳಿಗೆ ಆ ಎಣ್ಣೆಯನ್ನು ಹಚ್ಚುತ್ತಾರೆ. ಈ ಎಣ್ಣೆಯಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಚರ್ಮದ ಕಾಂತಿಯು ಹೆಚ್ಚಿಸುತ್ತದೆ ,ಗಾಢವಾದ ನಿದ್ರೆಗೆ ಉತ್ತಮ.
ಮಗು ಹುಟ್ಟಿನಿಂದ ಕನಿಷ್ಠ ಒಂದು ವರ್ಷದವರೆಗೂ ಪ್ರತಿದಿನ ಎಣ್ಣೆ ಸ್ನಾನವನ್ನು ಮಾಡಿಸುವುದು ಉತ್ತಮ. ಆದರೆ ಮಕ್ಕಳಿಗೆ ಶೀತ ,ಕೆಮ್ಮು ,ಜ್ವರ ಅಥವಾ ಏನಾದರೂ ಆರೋಗ್ಯ ಸಮಸ್ಯೆ ಆದಾಗ ಈ ಎಣ್ಣೆ ಸ್ನಾನವನ್ನು ನೀವು ಸ್ಕಿಪ್ ಮಾಡಬಹುದು.