34 ದಿನಗಳ ಬಳಿಕ ವಾಪಸ್ ಆಗ್ತಿರೋ ಪ್ರಜ್ವಲ್ ರೇವಣ್ಣಗಾಗಿ (Prajwal revanna) ಎಸ್.ಐ.ಟಿ (SIT) ಅಧಿಕಾರಿಗಳು ಬಂಧಿಸೋದಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆಈ ಮಧ್ಯೆ ಪ್ರಜ್ವಲ್ ಬರ್ತಾರಾ?ಇಲ್ವಾ? ಎಂಬ ಅನುಮಾನವೂ ಮೂಡಿದೆ.
ಈಗಾಗಲೇ ನಿರೀಕ್ಷಣಾ ಜಾಮೀನಿಗೆ ಪ್ರಜ್ವಲ್ ರೇವಣ್ಣ ತಮ್ಮ ವಕೀಲರ ಪರವಾಗಿ ಅರ್ಜಿ ಸಲ್ಲಿಸಿದ್ದು,31 ಕ್ಕೆ ಅರ್ಜಿಯ ವಿಚಾರಣೆಯಿದ್ದು , ಇದಕ್ಕೂ ಮುನ್ನವೇ ಪ್ರಜ್ವಲ್ ಬರ್ತಾರಾ ಎಂಬ ಡೌಟ್ ಕೂಡ ಅಧಿಕಾರಿಗಳಿಗಿದೆ.
ಟಿಕೆಟ್ ಬುಕಿಂಗ್ (Ticket booking) ಅಧಿಕೃತವಾಗಿರುವ ಹಿನ್ನಲೆ ಹಾಗೂ ಸ್ವತಃ ಪ್ರಜ್ವಲ್ ರೇವಣ್ಣ ವಿಡಿಯೋ ಮೂಲಕವೂ ಸ್ಪಷ್ಟ ಪಡಿಸಿದ್ದರಿಂದ ಬಹುಶ ವಾಪಸ್ ಬರುಬಹುದೆಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳಿದ್ದಾರೆ.ಹೀಗಾಗಿ ಏರ್ ಪೋರ್ಟ್ ನಲ್ಲಿ (Airport) ಮಧ್ಯಾಹ್ನದ ಬಳಿಕ ಎಸ್ ಐ ಟಿ ಮೂರು ಟೀಂ ನಿಯೋಜನೆ ಮಾಡಲಾಗಿದೆ.