ಹೆಚ್ಚು ಜನ ಮಹಿಳೆಯರಿಗೆ ತಾವು ಎಷ್ಟೇ ಸುಂದರವಾಗಿದ್ದರೂ ಇನ್ನೂ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಹಾಗಾಗಿ ಮಹಿಳೆಯರು ತಮ್ಮ ದೇಹದ ಮೇಲೆ ಸಾಕಷ್ಟು ಕಾಳಜಿಯನ್ನ ವಹಿಸುತ್ತಾರೆ. ಅದಕ್ಕಾಗಿ ಹಲವಾರು ರೀತಿಯಲ್ಲಿ ಪ್ರಯತ್ನವನ್ನು ಮಾಡ್ತಾರೆ .ಕೆಲವರು ಮುಖಕ್ಕೆ ಫೇಸ್ ಪ್ಯಾಕ್ ಬಳಸುವಂಥದ್ದು ಐಬ್ರೋಸ್ ಮಾಡಿಸುವಂತದ್ದು ಹೇರ್ ಸ್ಟೈಲ್ ಚೇಂಜ್ ಇದೆಲ್ಲದರ ಜೊತೆಗೆ ಪ್ರತಿಯೊಬ್ಬರೂ ವ್ಯಾಕ್ಸಿಂಗ್ ಕೂಡ ಮಾಡಿಸಿಕೊಳ್ಳುತ್ತಾರೆ.
![](https://pratidhvani.com/wp-content/uploads/2024/05/IMG_7587-1.jpeg)
ಈ ವ್ಯಾಕ್ಸಿಂಗ್ ಮಾಡಿಸುವುದರಿಂದ ನಮ್ಮ ದೇಹದಲ್ಲಿ ಇರುವಂತ ರೋಮಗಳನ್ನ ತೆಗೆಯುವುದಕ್ಕೆ ಸಹಕಾರಿ.ಕೆಲವೊಬ್ಬರು ಫುಲ್ ಆರ್ಮ್ ,ಫುಲ್ ಲೆಗ್ ವ್ಯಾಕ್ಸ್ ಮಾಡಿಸ್ತಾರೆ. ಅವರು ಸ್ಲೀವ್ಲೆಸ್ ಬಟ್ಟೆ ಹಾಕಿದಾಗ ಕೈಗಳು ಸುಂದರವಾಗಿ ಕಾಣ್ಬೇಕು ಅನ್ನೋ ರೀತಿಯಲ್ಲಿ ವ್ಯಾಕ್ಸಿಂಗ್ ಅನ್ನು ಮಾಡುತ್ತಾರೆ.ವ್ಯಾಕ್ಸ್ ಆದ ಮೇಲೆ ಒಂದಿಷ್ಟು ಕಾಳಜಿಯನ್ನ ವಹಿಸಬೇಕು ಇಲ್ಲವಾದರೆ ನಮ್ಮ ಸ್ಕಿನ್ ಗೆ ಗೊತ್ತಿಲ್ಲದ ರೀತಿಯಲ್ಲಿ ತೊಂದರೆ ಆಗ್ತಾ ಹೋಗುತ್ತೆ.ಯಾವ ರೀತಿಯ ಕಾಳಜಿ ಅನ್ನೋದರ ಮಾಹಿತಿ ಹೀಗಿದೆ.
ಬಿಸಿನೀರು ಸ್ನಾನ
ವ್ಯಾಕ್ಸಿಂಗ್ ಮಾಡಿಸಿದ ಬಳಿಕ ನಾವು ಬಿಸಿನೀರಿನಿಂದ ಸ್ನಾನವನ್ನು ಮಾಡಬಾರದು,ಬದಲಿಗೆ ಬೆಚ್ಚಗಿನ ನೀರು ಅಥವಾ ತಣ್ಣೀರನ್ನು ಬಳಸುವುದು ಉತ್ತಮ.ಬಿಸಿನೀರನ್ನು ಬಳಸುವುದರಿಂದ ವ್ಯಾಕ್ಸಿಂಗ್ ಮಾಡಿದ ಜಾಗದಲ್ಲಿ ಉರಿ ಸ್ಟಾರ್ಟ್ ಆಗುತ್ತದೆ.ಕೆಲವೊಬ್ಬರಿಗೆ ಕೆಂಪು ಗುಳ್ಳೆ ಆಗುವಂತ ಚಾನ್ಸಸ್ ಕೂಡ ಹೆಚ್ಚಿರುತ್ತದೆ.
![](https://pratidhvani.com/wp-content/uploads/2024/05/IMG_7586.jpeg)
ಸೋಪ್ ಅಥವಾ ಬಾಡಿ ವಾಶ್
ವ್ಯಾಕ್ಸಿಂಗ್ ನಂತರ ಸೋಪ್ ಅಥವಾ ಬಾಡಿ ವಾಷನ್ನ ಬಳಸಬಾರದು. ಈ ರೀತಿಯ ಪರಿಮಳಯುಕ್ತ ಸಾಬೂನುಗಳು ನಿಮ್ಮ ಚರ್ಮದ ಮೇಲೆ ಹಾನಿಯನ್ನು ಉಂಟುಮಾಡುತ್ತದೆ. ಕೆಲವರಿಗೆ ತುರಿಕೆ ಶುರುವಾಗುತ್ತದೆ ಹಾಗೂ ಕೆಂಪು ಗುಳ್ಳೆಗಳು ಹೆಚ್ಚಾಗುತ್ತದೆ. ಇದರ ಜೊತೆಗೆ ನಮ್ಮ ತ್ವಜೆ ಸುಕ್ಕುಗಟ್ಟಲು ಶುರುವಾಗುತ್ತದೆ. ಹೀಗಾಗಿ ವ್ಯಾಕ್ಸಿಂಗ್ ಮಾಡಿಸಿದ 24 ಗಂಟೆಗಳ ಬಳಿಕ ನೀವು ಬಳಸಬಹುದು.
![](https://pratidhvani.com/wp-content/uploads/2024/05/IMG_7584-1.jpeg)
ಬಿಸಿಲಿನಿಂದ ದೂರವಿರಿ
ವ್ಯಾಕ್ಸಿಂಗ್ ಮಾಡಿದ ನಂತರ ನಮ್ಮ ಚರ್ಮ ತುಂಬಾನೇ ಮೃದುವಾಗಿರುತ್ತದೆ. ಇಂಥಹ ಸಂದರ್ಭದಲ್ಲಿ ನಮ್ಮ ದೇಹವನ್ನು ಬಿಸಿಲಿಗೆ ಒಡ್ಡಿದಾಗ ಚರ್ಮ ಕಪ್ಪಾಗುತ್ತದೆ. ಜೊತೆಗೆ ಗುಳ್ಳೆಗಳು ಹೆಚ್ಚಾಗಿ ಚರ್ಮ ಅಲರ್ಜಿ ಆಗುವಂತ ಚಾನ್ಸಸ್ ತುಂಬಾನೇ ಇರುತ್ತದೆ.