ಮಂಗಳೂರು: ಶುಕ್ರವಾರ ಸುರಿದ ಭಾರೀ ಮಳೆಗೆ ರಾಜಕಾಲುವೆಗೆ (Rajakaluve) ಆಟೋ (Auto) ಉರುಳಿ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಮಂಗಳೂರು (Mangaluru) ನಗರದ ಕೊಟ್ಟಾರ (Kottara) ಅಬ್ಬಕ್ಕ ಎಂಬಲ್ಲಿ ನಡೆದಿದೆ. ದೀಪಕ್ (40) ಸಾವನ್ನಪ್ಪಿದ ಚಾಲಕ.
ಭಾರೀ ಮಳೆಗೆ ಕೊಟ್ಟಾರದಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿತ್ತು. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ನೀರು ರಸ್ತೆಗೆ ಬಂದಿದೆ.
ರಸ್ತೆ ಹಾಗೂ ರಾಜಕಾಲುವೆಗೆ ಸಮಾನವಾಗಿ ನೀರು ಹರಿಯುತ್ತಿದ್ದಾಗ ಆಟೋ ರಾಜಕಾಲುವೆಗೆ ಉರುಳಿ ಬಿದ್ದಿದೆ. ಕಾಲುವೆಗೆ ತಡೆಗೋಡೆ ನಿರ್ಮಿಸದ ಕಾರಣ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.