ಪ್ರಧಾನಿ ನರೇಂದ್ರ ಮೋದಿ (Narendra modi) (Himachal pradesh) ಚುನಾವಣಾ ಪ್ರಚಾರದ ಪ್ರವಾಸದಲ್ಲಿದ್ದಾರೆ. ಈ ವೇಳೆ ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಿಗೆ ನಮೋ (NAMO) ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ತಮ್ಮ ಕ್ಯಾಮೆರಾದಲ್ಲಿ (Camera) ಹಿಮಾಚಲ ಪ್ರದೇಶದ ಸೌಂದರ್ಯವನ್ನು ಸೆರೆಹಿಡಿದಿದ್ದಾರೆ.

ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರೇ ಸೋಷಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶ ಬಹಳ ರಮಣೀಯವಾಗಿದೆ. ಬಿರುಸಿನ ಚುನಾವಣಾ ಪ್ರಚಾರದ ಮಧ್ಯೆ ಸುಂದರವಾದ ನೈಸರ್ಗಿಕ ಪರಿಸರದ ಕೆಲವು ನೋಟಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು ಎಂದು ನಮೋ ಹರ್ಷ ವ್ಯಕ್ತಪಡಿಸಿದ್ದಾರೆ.

ಹಿಮಾಚಲದಲ್ಲಿರುವ ನಾನು ಇಲ್ಲಿಗೆ ಈ ಹಿಂದೆ ಬಂದಾಗಿನ ಭೇಟಿಗಳ ನೆನಪುಗಳನ್ನು ಈಗ ಮೆಲುಕು ಹಾಕುತ್ತಿದ್ದೇನೆ. ಈ ರಾಜ್ಯದೊಂದಿಗೆ ನನ್ನ ಬಾಂಧವ್ಯ ತುಂಬಾ ಗಟ್ಟಿಯಾಗಿದೆ ಎಂದು ಮೋದಿ ಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.