ಹೈದರಾಬಾದ್: ಗುಜರಾತ್ ಟೈಟಾನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ (GT vs SRH) ಮಧ್ಯೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಉಭಯ ತಂಡಗಳು ಒಂದೊಂದು ಅಂಕ ಪಡೆದಿವೆ.
ಇದರೊಂದಿಗೆ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವು ಪ್ಲೇ ಆಫ್ಗೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಈಗಾಗಲೇ ಪ್ಲೇ ಆಫ್ ಹಂತಕ್ಕೆ ಕೋಲ್ಕತ್ತಾ ನೈಟ್ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಪ್ರವೇಶ ಪಡೆದಿದ್ದವು. ಸನ್ ರೈಸರ್ಸ್ ಹೈದರಾಬಾದ್ 2024ರ ಆವೃತ್ತಿಯಲ್ಲಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟ 3ನೇ ತಂಡವಾಗಿದೆ. ಹೀಗಾಗಿ ಇನ್ನೊಂದೇ ತಂಡಕ್ಕೆ ಪ್ಲೇ ಆಪ್ ಪ್ರವೇಶಿಸುವ ಅವಕಾಶವಿದೆ.
ಮೇ 18ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ (CSK vs RCB) ಉತ್ತಮ ರನ್ ರೇಟ್ನೊಂದಿಗೆ ಗೆದ್ದರೆ ಪ್ಲೇ ಆಫ್ಗೆ (IPL Playoffs) ತೆರಳಬಹುವುದು. ಒಂದು ಮಳೆಯಾಗಿ ಆ ಪಂದ್ಯ ಕೂಡ ರದ್ದಾದರೆ ಚೆನ್ನೈ ಪ್ಲೇ ಆಫ್ ಪ್ರವೇಶಿಸಬಹುದು.
ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಮುಡಿಗೇರಿಸಿಕೊಂಡಿತ್ತು. 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಆದ್ರೆ 2024ರ ಆವೃತ್ತಿಯಲ್ಲಿ 12ರಲ್ಲಿ 5 ಪಂದ್ಯಗೆದ್ದು ಪ್ಲೇ ಆಫ್ ಕನಸು ಕಂಡಿದ್ದ ಗುಜರಾತ್ ತಂಡಕ್ಕೆ ಮಳೆ ತಣ್ಣೀರು ಎರಚಿತು. 12 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 13ನೇ ಪಂದ್ಯ ರದ್ದಾಗಿದ್ದರಿಂದ ಒಂದು ಅಂಕ ಪಡೆದು ಪ್ಲೇ ಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.