ಚಾಲನೆ ವೇಳೆ ಹೆಲೈಟ್ (Helmet) ಧರಿಸಿಲ್ಲ ಅಂತ ಕಾರು ಮಾಲಿಕರೊಬ್ಬರ ಮೊಬೈಲ್‌ಗೆ 1,000 ರೂಪಾಯಿ ದಂಡದ ಇ ಚಲನ್ (Echelan) ಬಂದಿರುವ ವಿಚಿತ್ರ ಘಟನೆ ಉತ್ತರದ ಪ್ರದೇಶದ (uttar pradesh) ಝಾನ್ಸಿಯಲ್ಲಿ ನಡೆದಿದೆ. ಬಹದ್ದೂರ್ ಸಿಂಗ್ (bahaddur singh) ಪರಿಹಾರ್ ಎಂಬ ವ್ಯಕ್ತಿ ಮೊಬೈಲ್‌ಗೆ ತಾವು ಚಾಲನೆ ವೇಳೆ ಹೆಲೈಟ್ ಧರಿಸಿಲ್ಲ ಎಂಬುದಾಗಿ 1,000 ರುಪಾಯಿಯ ಈ ಚಲನ್ ಬಂದಿದೆ.

ಇದನ್ನ ಗಮನಿಸಿದ ಬಹದ್ದೂರ್ ಸಿಂಗ್ ಪರಿಹಾರ್, ಟ್ರಾಫಿಕ್ ಪೊಲೀಸರ (Traffic police) ಬಳಿ ತೆರಳಿ ನನ್ನ ಬಳಿ ಇರೋದು ಕಾರು, ಕಾರು ಚಲಾಸಿವಾಗ ಹೆಲೈಟ್ ಧರಿಸಬೇಕಾ ? ಈ ಚಲನ್ ನನಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಚುನಾವಣೆ ಆದ ಮೇಲೆ ಬರುವಂತೆ ಹೇಳಿ ಚುನಾವಣಾ ಅಧಿಕಾರಿಗಳು ಕಳುಹಿಸಿದ್ದಾರೆ. ಇದ್ರಿಂದಾಗಿ ಚುನಾವಣೆ ಮುಗಿವವರೆಗೂ ಕಾರು ಚಾಲನೆ ವೇಳೆ ಹೆಲೈಟ್ ಧರಿಸೋದಾಗಿ ಬಹದ್ದೂರ್ ಸಿಂಗ್ ಶಪಥ ಮಾಡಿದ್ದಾರೆ. ಸದ್ಯ ಬಹದ್ದೂರ್ ಸಿಂಗ್ ಕಾರು ಚಾಲನೆ ವೇಳೆಯೂ ಹೆಸ್ಕೆಟ್ ಧರಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ.






