ಇಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಎಚ್ ಡಿ ರೇವಣ್ಣ (HD Revanna) ಜಾಮೀನು ಅರ್ಜಿ ವಿಚಾರಣೆ ನಡೆಸಲಾಯಿತು. ರೇವಣ್ಣ ನಾಲ್ಕು ದಿನದ ಎಸ್ಐಟಿ (SIT) ಕಸ್ಟಡಿಗೆ ಇಂದು ತೆರೆ ಬಿದ್ದಿದ್ದು ,ಹೀಗಾಗಿ ಕೋರ್ಟ್ ಮೇ 14 ರವರೆಗೆ ರೇವಣ್ಣರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇಡೀ ರಾಜ್ಯಕ್ಕೆ ತಿಳಿದಿರುವಂತೆ ಎಚ್ ಡಿ ರೇವಣ್ಣ ಅಪಾರ ದೈವಭಕ್ತರು. ಯಾವುದೇ ಕೆಲಸ ಕಾರ್ಯಗಳಿಗೂ ಲಗ್ನ ಮುಹೂರ್ತ, ಶಕುನ ನೋಡಿಯೇ ಕೆಲಸಗಳನ್ನ ಮುಂದುವರೆಸುತ್ತಾರೆ. ಎಸ್ಐಟಿಗೆ ಶರಣಾಗುವ ಸಂದರ್ಭದಲ್ಲೂ ಲಾಭ ಲಗ್ನದಲ್ಲಿಯೇ ಎಸ್ಐಟಿ ಅಧಿಕಾರಿಗಳು ತಮ್ಮನ್ನ ಬಂಧಿಸುವ ಹಾಗೆ ನೋಡಿಕೊಂಡಿದ್ದರು.
ಆದ್ರೆ ವಿಪರ್ಯಾಸ ಎಂಬಂತೆ ಅಮಾವಾಸ್ಯೆಯ ದಿನವೇ ಹೆಚ್ ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ ಎಷ್ಟೇ ಪೂಜೆ ಹೋಮ ಹವನಗಳನ್ನ ನೆರವೇರಿಸಿದ್ರು, ಲಗ್ನಗಳನ್ನ ಪಾಲಿಸಿದ್ರು ,ಅಮಾವಾಸ್ಯೆ ದಿನದಂದೇ ಜೈಲು ಸೇರೋದು ಮಾತ್ರ ರೇವಣ್ಣ ಪಾಲಿಗೆ ತಪ್ಪಲಿಲ್ಲ.