ಬೆಂಗಳೂರು :- ಹಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸೆಗಿರುವ ಆರೋಪದಡಿಯಲ್ಲಿ ವಿದೇಶಕ್ಕೆ ತೆರಳಲಿರುವ ಸಂಸದ ಪ್ರಜ್ವಲ್ ರೇವಣ್ಣ, ಅಲ್ಲಿಯೇ ಕುಳಿತು ಕಾನೂನು ಸಮರ ಎದುರಿಸುವ ಸಾಧ್ಯತೆಯಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸದ್ಯ ಮೂಲಗಳ ಪ್ರಕಾರ, ಒಂದು ಕಡೆ ಸರ್ಕಾರ ಪ್ರಜ್ವಲ್ ರೇವಣ್ಣರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿ, ಅವರನ್ನು ಇಲ್ಲಿಗೆ ಕರೆತರಲು ಯತ್ನಿಸುತ್ತಿದ್ರೆ, ಇತ್ತ ವಿದೇಶದಲ್ಲೇ ಕುಳಿತು ಪ್ರಜ್ವಲ್ ಕಾನೂನು ಸಮರಕ್ಕೆ ಮುಂದಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
