ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಪ್ರಕರಣದಲ್ಲಿ ಎಸ್ಐಟಿ ವಿಚಾರಣೆ ಶುರು ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹಾಗು ಮಗ ಪ್ರಜ್ವಲ್ ರೇವಣ್ಣಗೆ ನೋಟಿಸ್ ಜಾರಿ ಆಗಿದೆ. ಆದರೆ ವಿಚಾರಣೆಗೆ ಹಾಜರಾಗಲು ಪ್ರಜ್ವಲ್ ರೇವಣ್ಣ 7 ದಿನಗಳ ಕಾಲಾವಕಾಶ ಕೇಳಿದ್ದರು. ತಮ್ಮ ವಕೀಲರ ಮೂಲಕ ಪ್ರಜ್ವಲ್ ರೇವಣ್ಣ ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕಾರ ಮಾಡಲಾಗಿದೆ.

ಪ್ರಜ್ವಲ್ ರೇವಣ್ಣ ಮನವಿಯನ್ನು ತಿರಸ್ಕಾರ Reject ಮಾಡಿರೋ ಎಸ್ಐಟಿ ಟೀಂ, ಇದು ಗಂಭೀರವಾದ ಪ್ರಕರಣ, ಹೀಗಾಗಿ ಕಾಲಾವಕಾಶ ಕೋಡಲು ಸಾಧ್ಯವಿಲ್ಲ ಎಂದಿದೆ. 9 ದಿನಗಳ ಅವಧಿಯಲ್ಲಿ ಒಟ್ಟು ಮೂರು ನೊಟೀಸ್ ನೀಡಲು ತನಿಖಾಧಿಕಾರಿಗೆ ಅವಕಾಶ ಇದ್ದು, ಈಗಾಗಲೇ ನೊಟೀಸ್ ನೀಡಿ ಮೂರು ದಿನಗಳು ಆಗಿರುವ ಹಿನ್ನೆಲೆಯಲ್ಲಿ ಇಂದು ಎರಡನೇ ನೋಟಿಸ್ ನೀಡಲು ನಿರ್ಧಾರ ಮಾಡಲಾಗಿದೆ.
ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮೂ ದಿನಗಳು ಕಳೆದಿವೆ. ಆದರೆ ರೇವಣ್ಣ ಹಾಗು ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳು ಕಾಣ್ತಿಲ್ಲ. ಹೀಗಾಗಿ ಎರಡನೇ ನೊಟೀಸ್ ನೀಡಿ ವಿಚಾರಣೆಗೆ ಕರೆಯುವುದು, ಒಂದು ವೇಳೆ ಮೂರು ನೋಟಿಸ್ಗೂ ಬಾರದೆ ಇದ್ದರೆ ಅರೆಸ್ಟ್ ಮಾಡಿ ಕರೆತರುವುದಕ್ಕೂ ಚಿಂತನೆ ನಡೆದಿದೆ ಎನ್ನಲಾಗ್ತಿದೆ.

ಬುಧವಾರ ಹಾಸನದಿಂದ ಬೆಂಗಳೂರಿಗೆ ಬಂದಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಕುಟುಂಬದ ಸದಸ್ಯರ ಜೊತೆಗೂ ಮಾತುಕತೆ ಮಾಡಿದ್ದಾರೆ. ರೇವಣ್ಣ ವಿರುದ್ಧ ಮಹಿಳೆ ನೀಡಿರೋ ಲೈಂಗಿಕ ಕಿರುಕುಳ ದೂರಿನಲ್ಲಿ ರೇವಣ್ಣ ಎ1 ಆರೋಪಿ ಆಗಿದ್ದು, ಇಂದು ವಿಚಾರಣೆಗೆ ಹಾಜರಾಗ್ತಾರಾ..? ಅಥವಾ ಕಾನೂನು ಹೋರಾಟದ ಮೊರೆ ಹೋಗ್ತಾರಾ..? ಅನ್ನೋದು ಗೊತ್ತಾಗಬೇಕಿದೆ.
ಏಪ್ರಿಲ್ 30 ರಂದು ರೇವಣ್ಣ ಹಾಗು ಪ್ರಜ್ವಲ್ ರೇವಣ್ಣಗೆ SIT ಸಿಬ್ಬಂದಿ ನೊಟೀಸ್ ನೀಡಿದ್ದರು. ಆದರೆ ನಾನು ಹೊರದೇಶದಲ್ಲಿ ಇರುವ ಕಾರಣಕ್ಕೆ ವಿಚಾರಣೆಗೆ ಹಾಜರಾಗಲು ಕನಿಷ್ಟ ಏಳು ದಿನಗಳ ಸಮಯಾವಕಾಶ ಬೇಕು ಎಂದು ಕೋರಿದ್ದರು. ಪ್ರಜ್ವಲ್ ರೇವಣ್ಣ ಮನವಿಗೆ ಎಸ್ಐಟಿ ಸೊಪ್ಪು ಹಾಕಿಲ್ಲ. ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗಲು ನೋಟಿಸ್ನಲ್ಲಿ ತಿಳಿಸಲಾಗಿತ್ತು. ಆದರೆ ರೇವಣ್ಣ, ಪ್ರಜ್ವಲ್ ರೇವಣ್ಣ ಯಾರೊಬ್ಬರೂ ತನಿಖಾಧಿರಿ ಎದುರು ಹಾಜರಾಗಿಲ್ಲ.
