
ಕರ್ನಾಟಕದಲ್ಲಿ ‘ಬರ’ ಪಾಲಿಟಿಕ್ಸ್ ಜೋರಾಗಿ ವರ್ಕ್ ಆಗ್ತಿದೆ. ಕೇಂದ್ರ ಸರ್ಕಾರ ತುಸು ಪರಿಹಾರವನ್ನು ನೀಡಿದೆ.ಇದೇ ವಿಚಾರ ಕೈ ನಾಯಕರನ್ನ ನಿಗಿನಿಗಿ ಕೆಂಡ ಮಾಡಿದೆ. ಬಿಜೆಪಿ ನಾಯಕರು ಕೇಂದ್ರದ ನಡೆಯನ್ನ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದು , ಕೈ ಪಡೆಗೆ ರೀ ಕೌಂಟರ್ ಕೊಡ್ತಿದ್ದಾರೆ.ರಾಜ್ಯ ಸರ್ಕಾರ ದಿವಾಳಿಯಾಗಿದೆ ಪಾಪರ್ ಆಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಕಿಸಾನ್ ಸಮ್ಮಾನ್, ಭಾಗ್ಯಲಕ್ಷ್ಮಿ ಯೋಜನೆ ಯಾಕೆ ನೀಡ್ತಿಲ್ಲ.

ರಾಜ್ಯದ ಜನ ಕೊಟ್ಟ ತೆರಿಗೆ ಹಣ ಎಲ್ಲೋಯ್ತು. ವಿದ್ಯುತ್ ಬೆಲೆ ಜಾಸ್ತಿ ಆಗಿದೆ. ಹಗಲು ದರೋಡೆ ನಡೆಯುತ್ತಿದೆ. ಎಲ್ಲಾ ಯೋಜನೆ ನಿಲ್ಲಿಸಿ ಬರಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ರಾಜ್ಯದಲ್ಲಿ ತೀವ್ರ ಬರಗಾಲವಿದೆ. ರೈತರ ಕಷ್ಟಕ್ಕೆ ಸ್ಪಂದಿಸಬೇಕಿದ್ದ ಕಾಂಗ್ರೆಸ್ ಸರ್ಕಾರ ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಕೇಂದ್ರ ಸರ್ಕಾರ ತನ್ನ ಪಾಲನ್ನು ರಾಜ್ಯಕ್ಕೆ ಕೊಡಲಿದೆ.ಆದರೆ, ಕಾಂಗ್ರೆಸ್ ಸರ್ಕಾರದವರು ಪರಿಹಾರ ಕೊಟ್ಟಿಲ್ಲ ಎಂದು ಕೇಂದ್ರದ ಮೇಲೆ ದೂಷಣೆ ಮಾಡುತ್ತಿದ್ದಾರೆ. ‘ನಾನು ಸಿಎಂ ಆಗಿದ್ದಾಗ ಮೊದಲು ರೈತರಿಗೆ ಪರಿಹಾರ ಕೊಟ್ಟು ನಂತರ ಕೇಂದ್ರದ ಪರಿಹಾರ ಕೇಳುತ್ತಿದ್ದೇವು. ಆದರೆ, ಇವರು ಪ್ರತಿಯೊಂದಕ್ಕೂ ಕೇಂದ್ರದವರ ಮೇಲೆ ಬೆರಳು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ’ ಎಂದು ಹರಿಹಾಯ್ದರು