ಡಿ.ಕೆ.ಸುರೇಶ್ (Dk suresh) ಆಪ್ತರಾಗಿರುವ ಕೋಣನಕುಂಟೆ ಬ್ಲಾಕ್ನ ಮಾಜಿ ಕಾರ್ಪೊರೇಟರ್ (corporator) ಗಂಗಾಧರ್ ಮನೆ ಮೇಲೆ ನಡೆದ ಐಟಿ (IT raid) ದಾಳಿ ಮುಕ್ತಾಯವಾಗಿದೆ. ಸತತ 12 ಗಂಟೆಗಳ ಕಾಲ ಗಂಗಾಧರ್ ಮನೆಯಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು, ಗಂಗಾಧರ್ ಮನೆಯಲ್ಲಿ 87 ಲಕ್ಷ ಹಣ (87lakhs), ಚಿನ್ನಾಭರಣ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕಾರ್ಪೊರೇಟರ್ ಗಂಗಾಧರ್, ಮೋದಿಯವರು (modi) ಎಷ್ಟು ಕಿರುಕುಳ ನೀಡ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಇನ್ನು ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ (IT department) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ (DK shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅಂತ ಡಿಕೆ ಶಿವಕುಮಾರ್ ಕೆಂಡಕಾರಿದ್ದಾರೆ.. ಬಿಜೆಪಿ, ದಳದವರು (Bjp-Jds) ದುಡ್ಡು ಹಂಚುತ್ತಿಲ್ವಾ? ಎಲ್ಲಾ ಕಡೆ ದುಡ್ಡು ಹಂಚುತ್ತಿದ್ದಾರೆ. ಕೇವಲ ನಮ್ಮನ್ನ ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಮಂಡ್ಯ ಹಾಸನದಲ್ಲಿ (Mandya – Hassan) ವೋಟ್ ಮೇಲೆ ದುಡ್ಡು ಕೊಡುತ್ತಿದ್ದಾರೆ.ಇನ್ಕಮ್ ಟ್ಯಾಕ್ಸ್ನವರು (Inome-tax) ಕಣ್ಣು ಮುಚ್ಚಿಕೊಂಡು ಕುಳಿತ್ತಿದ್ದಾರಾ ಅಂತ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.