ನಟಿ ಅಮೂಲ್ಯ ಮಾವ ಮಾಜಿ ಕಾರ್ಪೊರೇಟರ್ ರಾಮಚಂದ್ರ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ ನಡೆದಿದೆ. ಆರ್ ಆರ್ ನಗರದಲ್ಲಿರುವ ನಿವಾಸದ ಮನೆ ಮೇಲೆ ದಾಳಿ ನಡೆದಿದ್ದು, ನಿನ್ನೆ ರಾತ್ರಿ10 ಗಂಟೆ ಸುಮಾರಿಗೆ ದಾಳಿ ನಡೆದಿದೆ. 10 ವಾಹನಗಳಲ್ಲಿ ಬಂದಿದ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡನಾಗಿರುವ ಆರ್. ರಾಮಚಂದ್ರ ಹಾಗು ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ವಿಚಾರಣೆ ಮಾಡಿದ್ದಾರೆ. ಸತತ 4 ಗಂಟೆಗಳ ಕಾಲ ಶೋಧ ಕಾರ್ಯ ಮಾಡಿದ್ದಾರೆ. ಚುನಾವಣಾ ಅಧಿಕಾರಿ, ಅಬಕಾರಿ ಪೊಲೀಸ್, ವಾಣಿಜ್ಯ ತೆರಿಗೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಯಾವುದೇ ಬೆಲೆಬಾಳುವ ವಸ್ತುಗಳು ಅಥವಾ ಹಣ ಪತ್ತೆಯಾಗಿಲ್ಲ. ಮನೆಯ ಫಂಕ್ಷನ್ ಇದ್ದಿದ್ರಿಂದ 31 ಲೀಟರ್ ಲಿಕ್ಕರ್ ಸಂಗ್ರಹ ಮಾಡಲಾಗಿತ್ತು. ಲಿಕ್ಕರ್ ವಶಕ್ಕೆ ಪಡೆದು ಹೊರಟಿದ್ದಾರೆ ಅಬಕಾರಿ ಅಧಿಕಾರಿಗಳು. ಅಧಿಕಾರ ದುರುಪಯೋಗ ಪಡಿಸಿಕೊಂಡು ಮನೆ ಮೇಲೆ ದಾಳಿ ಮಾಡಿಸಿದ್ದಾರೆ. ಕಾಂಗ್ರೆಸ್ನವ್ರು ಈ ಭಾಗದಲ್ಲಿ ಹಣ ಹಂಚಿಕೆ ಮಾಡ್ತಿದ್ರು. ಅದಕ್ಕೆ ನಾವು ಅಡ್ಡಿಪಡಿಸುತ್ತೇವೆ ಅಂತ ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದಿದ್ದಾರೆ.
ಚುನಾವಣಾ ಅಧಿಕಾರಿಗೆ ಪದೇ ಪದೇ ಫೋನ್ ಬರ್ತಾನೆ ಇತ್ತು. ಅವ್ರನ್ನ ಎರಡು ದಿನಕ್ಕಾದ್ರು ಒಳಕ್ಕೆ ಹಾಕಿಸಿ ಅಂತಾ ಹೇಳಿದ್ರು. ಏನೋ ದೊಡ್ಡದಾಗಿ ಸಿಗುತ್ತೆ ಅಂತಾ ಬಂದ್ರು. ಆದರೆ ಏನೂ ಸಿಗಲಿಲ್ಲ. ಮೊಮ್ಮಕ್ಕಳ ಹುಟ್ಟುಹಬ್ಬಕ್ಕಾಗಿ ಲಿಕ್ಕರ್ ತರಿಸಿದ್ದೆ. ಅದು ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಮಾಡಬಾರದು ಅಂತಾ ಸುಮ್ನೇ ಆಗಿದ್ವಿ. ಅದನ್ನ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿದ್ದೇವೆ ಅಂತಾ ಒಂದು ಸಹಿ ಪಡೆದಿದ್ದಾರೆ.