ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇರುವಂತೆ, ಸಂಸದ ಡಿಕೆ ಸುರೇಶ್ (Dk suresh) ಆಪ್ತರ ಮನೆ ಮೇಲೆ ಐಟಿ ರೆಡ್ (IT raid) ನಡೆದಿದೆ . ಚುನಾವಣೆ ಇಷ್ಟು ಸನಿಹದಲ್ಲಿರುವಾಗ ಡಿಕೆ ಸುರೇಶ್ ಅವರ ಆಪ್ತರ ನಿವಾಸದ ಮೇಲೆ ದಿಢೀರ್ ಐಟಿ ದಾಳಿ ನಡೆದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಡಿಕೆ ಸುರೇಶ್ ಅವರ ಆಪ್ತರಾಗಿರುವಂತಹ ಗಂಗಾಧರ್ (gangadhar) ಎಂಬ ಕಾಂಗ್ರೆಸ್ ನಾಯಕ (congress leader) ಮತ್ತೋರ್ವ ಮಾಜಿ ಪಾಲಿಕೆಯ ಸದಸ್ಯನ ನಿವಾಸದ ಮೇಲೆ ದಿಡೀರ್ ಐಟಿ ರೆಡ್ ನಡೆದಿದೆ . ಈ ಸಂದರ್ಭದಲ್ಲಿ ಮನೆಯಲ್ಲಿ ನಗದು ಪತ್ತೆಯಾಗಿದ್ದು, ಅಧಿಕೃತವಾಗಿ ಐಟಿ ಅಧಿಕಾರಿಗಳು ಆ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕಿದೆ.

ತಮ್ಮ ನಿವಾಸದ ಮೇಲೆ ಐಟಿ ರೆಡ್ ನಡೆದಿರುವ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ (congress) ಗಂಗಾಧರ್ ಭಾವುಕರಾದರು ಐಟಿ ರೆಡ್ ನೆಪದಲ್ಲಿ ನನಗೆ ಕಿರುಕುಳ ನೀಡಿದ್ದಾರೆ . ಪರೋಕ್ಷವಾಗಿ ನಾನು ಕಾಂಗ್ರೆಸ್ ಗೆ ಕೆಲಸ ಮಾಡಬಾರದು ಎಂಬಂತೆ ಅವರು ನನ್ನೊಂದಿಗೆ ಮಾತನಾಡಿದರು ಎಂದು ಹೇಳಿಕೊಂಡಿದ್ದಾರೆ . ಚುನಾವಣೆಯ ಸಮೀಪದಲ್ಲಿ ನಡೆದಿರುವ ಈ ಐಟಿ ರೈಡ್ ಮತ್ತೆ ರಾಜಕೀಯಕ್ಕೆ ಕೆಸರೆರಚಾಟಕ್ಕೆ ಕಾರಣ ಆಗೋದ್ರಲ್ಲಿ ಅನುಮಾನವಿಲ್ಲ.