ಐಪಿಎಲ್ ಟೂರ್ನಿಯಲ್ಲಿ ನಡೆದ 39ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಚೆನ್ನೈ ವಿರುದ್ಧ ಕೊನೆಯವರೆಗೂ ಹೋರಾಡಿ, ಅಚ್ಚರಿ ರೀತಿಯಲ್ಲಿ ಲಾಸ್ಟ್ ಓವರ್ ನಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಚೆನ್ನೈ ಆರ್ ಸಿಬಿಯ ಕಳಪೆ ದಾಖಲೆ ಸರಿಗಟ್ಟಿದೆ.

ಐಪಿಎಲ್ ನಲ್ಲಿ 200ಕ್ಕೂ ಅಧಿಕ ರನ್ ಗಳಿಸಿ ಅತೀ ಹೆಚ್ಚು ಬಾರಿ ಸೋತ ದಾಖಲೆ ಇಲ್ಲಿಯವರೆಗೆ ಆರ್ ಸಿಬಿ ಹೆಸರಿನಲ್ಲಿತ್ತು. ಆರ್ಸಿಬಿ ಒಟ್ಟು 5 ಬಾರಿ 200ಕ್ಕೂ ಅಧಿಕ ರನ್ ಗಳಿಸಿ ಸೋಲು ಕಂಡಿತ್ತು.

ಸದ್ಯ ಈ ದಾಖಲೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ಸರಿಗಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ 210 ರನ್ ಗಳಿಸಿತ್ತು. ಆದರೆ, ಗುರಿ ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು 19.3 ಓವರ್ ಗಳಲ್ಲಿ ಗೆಲುವಿನ ದಡ ಸೇರಿದೆ.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 200ಕ್ಕೂ ಅಧಿಕ ರನ್ ಗಳಿಸಿ 5ನೇ ಬಾರಿ ಸೋಲು ಕಂಡಿದೆ.