
ಕರ್ನಾಟಕದಲ್ಲಿ ಮೊದಲ ಹಂತದ ‘ಲೋಕ’ಎಲೆಕ್ಷನ್ ಕೌಂಟ್ಡೌನ್ ಶುರುವಾಗಿದೆ. ಮತದಾನಕ್ಕೆ ಈಗಾಗಲೇ ಸರ್ವ ಸಿದ್ಧತೆ ಮಾಡಲಾಗಿದ್ದು, ಬುಧವಾರ ಬಹಿರಂಗ ಪ್ರಚಾರಕ್ಕೆ ತೆರೆಬೀಳುತ್ತಿದೆ. ಲೋಕಸಭಾ ಚುನಾವಣೆ ಹಿನ್ನಲೆ ಏಪ್ರಿಲ್ 24ರಿಂದ ಬೆಂಗಳೂರಿನ ಸುತ್ತಮುತ್ತಾ ನಿಷೇಧಾಜ್ಞೆ ಹೊರಡಿಸಲಾಗಿದೆ. ಏಪ್ರಿಲ್ 24 ಬುಧವಾರ ಸಂಜೆ 6ರಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ನಿಷೇದಾಜ್ಞೆ ಹೊರಡಿಸಿ ಆದೇಶ ನೀಡಲಾಗಿದೆ. ಇದೇ ವೇಳೆ ಮದ್ಯ ಮಾರಾಟವನ್ನು ಕೂಡ ನಿಷೇಧ ಮಾಡಿದ್ದು ಬುಧವಾರ ಸಂಜೆಯಿಂದಲೇ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ. ಇದೇ ಏಪ್ರಿಲ್ 26 ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು ಎಲ್ಲಾ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಹಾಗೂ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ನಡೆಯಲಿರೋ ಮತದಾನಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಾಡು ಮಾಡಿದ್ದು, ಕೆಎಸ್ಆರ್ಪಿ ತುಕಡಿಗಳನ್ನ ನೇಮಕ ಮಾಡಿದೆ. ಪ್ರತಿ ಬೂತ್ನಲ್ಲಿಯೂ ಸಹ ಪೊಲೀಸರ ನಿಯೋಜನೆ ಮಾಡಿದ್ದು ನಗರದೆಲ್ಲಡೆ ಪೊಲೀಸರ ಹದ್ದಿನ ಕಣ್ಣಿಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕಾ ಕ್ರಮಗಳನ್ನ ತೆಗೆದುಕೊಂಡಿದ್ದು, ಡಿಸಿಪಿಗಳ ಮುಂದಾಳತ್ವದಲ್ಲಿ ಹಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.