ಬಾಗಲಕೋಟೆ: ಕಾರು ನಿಲ್ಲಿಸುವ ವಿಚಾರಕ್ಕೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.

ಜಿಲ್ಲೆಯ ಬಾದಾಮಿಯಲ್ಲಿ ಈ ಘಟನೆ ನಡೆದಿದೆ. ಜ್ಯುವೆಲ್ಲರಿ ಅಂಗಡಿ ಮಾಲೀಕರಾದ ಆನಂದ ರೇವಣಕರ್ ಹಾಗೂ ಪ್ರಶಾಂತ್ ರೇವಣಕರ್ ಹಲ್ಲೆಗೊಳಗಾದ ಸಹೋದರರು. ಅನ್ಯಕೋಮಿನ ಯುವಕರಾದ ನಿಜಾಮ್, ಅಷ್ಪಾಕ್ ಹಲ್ಲೆ ಮಾಡಿದ ದುಷ್ಕರ್ಮಿಗಳು ಎನ್ನಲಾಗಿದೆ. ಹಲ್ಲೆ ನಡೆಸಿರುವ ಅನ್ಯಕೋಮಿನ ಯುವಕರು ನಡು ರಸ್ತೆಯಲ್ಲಿಯೇ ಕಾರು ನಿಲ್ಲಿಸಿದ್ದಾರೆ. ಹೀಗಾಗಿ ಜ್ಯುವೆಲ್ಲರಿ ಮಾಲೀಕರು ಸರಿಯಾಗಿ ಕಾರು ನಿಲ್ಲಿಸುವಂತೆ ಹೇಳಿದ್ದಾರೆ.

ಇದರೊಂದಿಗೆ ಕೋಪಗೊಂಡ ಯುವಕರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತಲೆ ಹಾಗೂ ತುಟಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಹೋದರರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿಗಲು ಜ್ಯುವೆಲ್ಲರಿ ಶಾಫ್ಗೆ ಬಂದು ಆನಂದ್ ರನ್ನು ಕರೆದುಕೊಂಡು ಹೋಗುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.