ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಜನರ ಎದುರು ಸಾಕಷ್ಟು ಪ್ರಶ್ನೆನೆಗಳನ್ನು ಇಟ್ಟಿದ್ದಾರೆ. ಇದರಲ್ಲಿ ಸಾಕಷ್ಟು ವಿಚಾರಗಳನ್ನು ದೇಶದ ಜನರು ಚರ್ಚೆ ಮಾಡಬೇಕಿರುವ ವಿಚಾರ ಬಯಲಿಗೆ ಎಳೆದಿದ್ದಾರೆ. ದೇಶದಲ್ಲಿ ಕಳೆದ 10 ವರ್ಷದಿಂದ ಎನ್‌ಡಿಎ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರ ನಡೆಸಲಾಗ್ತಿದೆ. ಆದರೆ ಅಧಿಕಾರಕ್ಕೆ ಬರುವ ಮುನ್ನ ನರೇಂದ್ರ ಮೋದಿ ಏನ್ ಹೇಳಿದ್ದರು..? ಆ ಬಳಿಕ ಅಧಿಕಾರಕ್ಕೆ ಬಂದ ನಂತರ ಏನೆಲ್ಲಾ ಮಾಡಿದರು ಎನ್ನುವುದಷ್ಟನ್ನೇ ಜನರ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಾಧ್ಯಮಗಳು ಕೇಂದ್ರ ಸರ್ಕಾರದ ನಿಯಂತ್ರಣ ಮಾಡುತ್ತಿದೆ. ಹೀಗಾಗಿ ಯಾರೂ ಇದರ ಬಗ್ಗೆ ಮಾತನಾಡ್ತಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಆದಾಗ ಏನು ಹೇಳಿದ್ದರು..? ಕ್ಲೀನ್ ಪಾಲಿಟಿಕ್ಸ್ ಭರವಸೆ ಕೊಟ್ಟಿದ್ದರು. ನಾನೂ ತಿನ್ನಲ್ಲ, ತಿನ್ನುವರನ್ನೂ ಬಿಡಲ್ಲ ಎಂದಿದ್ದರ…
ಚಲುವರಾಯಸ್ವಾಮಿ ಯಾಕೆ ಸಿಎಂ ಆಗಬಾರದು..? ಹೊಸ ದಾಳ.. ಭಾರೀ ಲೆಕ್ಕಾಚಾರ..
ಮಂಡ್ಯದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು ಈ ಮಾತನ್ನು ಹೇಳಿದ್ದಾರೆ. ಮುಂದಿನ ಸಿಎಂ ಎನ್ ಚಲುವರಾಯಸ್ವಾಮಿ ಯಾಕಾಗಬಾರದು..? ಎಂದು ಪ್ರಶ್ನೆ ಮಾಡಿದ್ದಾರೆ. ದೇವೇಗೌಡರ ಕುಟುಂಬದವರು ಮಾತ್ರ ಪಿಎಂ, ಸಿಎಂ, ಎಂಪಿ ಆಗಬೇಕಾ? ಎಂದಿರುವ ಶಿವಣ್ಣ, ನಮ್ಮ ಚಲುವರಾಯಸ್ವಾಮಿ ಸಿಎಂ ಆಗಬಾರದಾ..? ನರೇಂದ್ರ ಮಂತ್ರಿ ಆಗಬಾರದಾ..? ಎಂದಿದ್ದಾರೆ. ಈ ಮಾತು ಹೇಳಿರುವ ದಡದಪುರ ಶಿವಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಎನ್ನುವುದು ಅಚ್ಚರಿಯ ಜೊತೆಗೆ ಬೇರೇನೋ ರಾಜಕೀಯ ಲೆಕ್ಕಾಚಾರ ಕಾಣುವಂತೆ ಮಾಡಿದ್ದಾರೆ.
ಎರಡೂವರೆ ವರ್ಷದ ಬಳಿಕ ಸಿಎಂ ಸ್ಥಾನ ಚೇಂಜ್..!
ಸಿಎಂ ಸಿದ್ದರಾಮಯ್ಯ ಎರಡೂವರೆ ವರ್ಷ ಅಧಿಕಾರ ಮುಗಿಸುತ್ತಿದ್ದಂತೆ ಡಿ.ಕೆ ಶಿವಕುಮಾರ್ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ಇದೀಗ ಮುಖ್ಯಮಂತ್ರಿ ಕುರ್ಚಿಗೆ ಚಲುವರಾಯಸ್ವಾಮಿ ಹೆಸರು ಪ್ರಸ್ತಾಪ ಮಾಡಿರುವ ಹಿಂದೆ ಹಲವು ಉದ್ದೇಶಗಳು ಇವೆ ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ಚರ್ಚೆ ಆಗ್ತಿವೆ. ಕುರುಬ ಸಮಾಜದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯನ ಬಲಗೈ ಬಂಟ ದಡದಪುರ ಶಿವಣ್ಣ ಹೇಳಿಕೆ ಹಿಂದೆ ಯಾರಿದ್ದಾರಾ..? ಸಿಎಂ ಸಿದ್ದರಾಮಯ್ಯ ಕುರ್ಚಿ ಭದ್ರ ಮಾಡುವ ಸಂಕಲ್ಪ ಇದರಲ್ಲಿ ಅಡಗಿದೆಯಾ..? ಈ ಮೂಲಕ ಮುಖ್ಯಮಂತ್ರಿ ಆಗುವ ಡಿ.ಕೆ ಶಿವಕುಮಾರ್ ಕನಸಿಗೆ ತಡೆ ಹಾಕುವ ಪ್ರಯತ್ನ ಮಾಡಿದ್ರಾ..? ಅನ್ನೋದು ಪ್ರಶ್ನೆ ಆಗಿದೆ.

ಒಕ್ಕಲಿಗರಿಗೆ ಸಿಎಂ ಸ್ಥಾನ ಕೊಡಿ, ಆದರೆ ಡಿಕೆಶಿಗೆ ಅಲ್ಲ..!
ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ವೇಳೆಯಲ್ಲೇ ಸಿಎಂ ಸ್ಥಾನ ಪಡೆಯಲು ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಭಾರೀ ಪೈಪೋಟಿ ನಡೆಸಿದ್ದರು. ಆಗ ಒಂದು ತೀರ್ಮಾನಕ್ಕೆ ಬಂದಿರುವ ಹೈಕಮಾಂಡ್ ಎರಡೂವರೆ ವರ್ಷ ಇಬ್ಬರೂ ಸಿಎಂ ಆಗಿ ಎಂದಿದ್ದಾರೆ ಎನ್ನಲಾಗ್ತಿದೆ. ಆ ಸಮಯದಲ್ಲೇ ಸಿದ್ದರಾಮಯ್ಯ ಲಿಂಗಾಯತ ನಾಯಕರಿಂದ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕಿಸಿದ್ದರು. ಆ ಬಳಿಕ ಕುರ್ಚಿ ಕಚ್ಚಾಟ ತಣ್ಣಗಾಗಿತ್ತು. ಇದೀಗ ಒಕ್ಕಲಿಗರನ್ನೇ ಸಿಎಂ ಸ್ಥಾನದ ಆಕಾಂಕ್ಷಿ ಮಾಡುವ ಕಸರತ್ತು ಮಾಡಿದ್ದಾರೆ. ಈ ಮೂಲಕ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್ಗೆ ಪರ್ಯಾಯವಾಗಿ ಚಲುವರಾಸ್ವಾಮಿಯನ್ನು ತೋರಿಸುವುದು, ಕ್ಲೀನ್ ಹ್ಯಾಂಡ್ ಎಂದು ಹೈಕಮಾಂಡ್ಗೆ ಹೇಳುವುದು, ಸಿಎಂ ಸ್ಥಾನವನ್ನು ಒಕ್ಕಲಿಗರಿಗೆ ಕೊಡುವುದಾದರೆ ಚಲುವರಾಯಸ್ವಾಮಿಗೆ ಕೊಡಿ ಎನ್ನುವುದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗ್ತಿದೆ.
ಮಂಡ್ಯದಲ್ಲಿ ಗೆಲ್ಲಲು ಸಿಎಂ ಅಸ್ತ್ರ ಬೇಕಾ..? ವರ್ಕ್ ಆಗುತ್ತಾ..?
ಇನ್ನು ಮಂಡ್ಯ ಲೋಕಸಭಾ ಚುನಾವಣೆ ಗೆಲ್ಲಲು ಬಳಸಿರುವ ಅಸ್ತ್ರ ಎಂದೂ ಮಾತನಾಡಿಕೊಳ್ತಿದ್ದಾರೆ. ಚಲುವರಾಯಸ್ವಾಮಿ ಮುಖ್ಯಮಂತ್ರಿ ಆಗುವ ಸಾಧ್ಯತೆಯಿದೆ ಎನ್ನುವ ಕಾರಣಕ್ಕೆ ಕೈ ಬಲಪಡಿಸುವ ಉದ್ದೇಶದಿಂದ ಜನರು ಬೆಂಬಲಿಸ್ತಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಈ ರೀತಿ ಹೇಳಲಾಗ್ತಿದೆ ಅನ್ನೋ ಮಾತುಗಳೂ ಕೂಡ ಕೇಳಿ ಬರ್ತಿವೆ. ಆದರೂ ಸಿದ್ದರಾಮಯ್ಯ ಆಪ್ತ ಬಳಗದಿಂದ ಬಂದಿರುವ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಸಿದ್ದರಾಮಯ್ಯ ರಾಜಕೀಯ ಪರಿಣಿತ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಮುಂದಿನ ದಿನಗಳಲ್ಲಿ ಯಾವ ಟರ್ನ್ ಕೊಡಲಾಗುತ್ತೆ..? ಮುಂದಿನ ಸಿಎಂ ಯಾರಾಗ್ತಾರೆ..? ಕೊನೆಗೆ ಯಾರಿಗೂ ಬೇಡ ಸಿದ್ದರಾಮಯ್ಯನೇ ಇರಲಿ ಅನ್ನೋ ಹಾಗೆ ಆಗುತ್ತಾ..? ಅನ್ನೋದನ್ನು ಕಾದು ನೋಡಬೇಕು.







