ಯಾಕೋ ಏನೋ ವಿ.ಸೋಮಣ್ಣ (V.somanna) ನಸೀಬು ಸ್ವಲ್ಪವೂ ಸರಿಯಿಲ್ಲವೇನೋ ಅನ್ಸತ್ತೆ. ಈ ಹಿಂದೆ ವಿಧಾನಸಭೆಯ ಚುನಾವಣೆಯಲ್ಲಿ ಹೈಕಮ್ಯಾಂಡ್ (B]p Highcommand) ಒತ್ತಾಯದ ಮೇರೆಗೆ ಕ್ಷೇತ್ರ ಬದಲಾವಣೆ ಮಾಡಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋತಿದ್ದ ಸೋಮಣ್ಣ, ಶತ ಪ್ರಯತ್ನ ಮಾಡಿ ತುಮಕೂರಿನ (tumkur) ಲೋಕಸಭಾ ಟಿಕೆಟ್ ಪಡೆದಿದ್ದಾರೆ. ಆದ್ರೆ ಇಲ್ಲೀಯೂ ಕೂಡ ವಾತವರಣ ಸೋಮಣ್ಣ ಗೆಲುವಿಗೆ ಪೂರಕವಾಗಿದ್ದಂತಿಲ್ಲ.

ತುಮಕೂರಿನಲ್ಲಿ ವಿ.ಸೋಮಣ್ಣಗೆ ಒಳೇಟಿನ ಭೀತಿ ಎದುರಾಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಮಾಧುಸ್ವಾಮಿಯನ್ನ (maadhuswamy) ಬಿ.ಎಸ್.ಯಡಿಯೂರಪ್ಪ (BS yediyurappa) ಸಮಾಧಾನ ಪಡಿಸಿದ್ದರಾದ್ರೂ ಒಳಗೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಭೀತಾಗ್ತಿದೆ. ಕಾಂಗ್ರೇಸ್ ಅಭ್ಯರ್ಥಿ ಮುದ್ದಹನುಮೇಗೌಡ (mudda hanume gowda) ಮಾಧುಸ್ವಾಮಿಯವರನ್ನ ಭೇಟಿ ಮಾಡಿದ್ದು, ತುಮಕೂರಿನಲ್ಲಿ ಕಾಂಗ್ರೇಸ್‌ನ ಇಬ್ಬಿಬ್ಬರು ಸಚಿವರಿರೋದು, ಸಾಲದೆಂಬಂತೆ ಮಾಧುಸ್ವಾಮಿ ಅಸಮಾಧಾ ಬೇರೆ. ಇದೆಲ್ಲವೂ ಸೋಮಣ್ಣ ಗೆಲುವನ್ನ ಕ್ಲಿಷ್ಟವಾಗಿಸುತ್ತಿದೆ.

ಹೀಗಾಗಿ ವಿ.ಸೋಮಣ್ಣ ಪರ ಮತಯಾಚನೆ ಮಾಡಲು ಹೆಚ್‌ಡಿ ಕುಮಾರಸ್ವಾಮಿ (HD kumaraswamy) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY vijayendra) ತುಮಕೂರಿಗೆ ಎಂಟ್ರಿ ಕೊಡ್ತಿದ್ದಾರೆ. ಒಕ್ಕಲಿಗ ಮತಗಳನ್ನ ಒಗ್ಗೂಡಿಸಲು ಹೆಚ್‌ಡಿಕೆ, ಲಿಂಗಾಯತ ಮತಗಳನ್ನು ಸೆಳೆಯಲು ಬಿ.ವೈ. ವಿಜಯೇಂದ್ರ ಜಂಟಿ ಪ್ರಚಾರ ಸಭೆ ನಡೆಸಲಿದ್ದಾರೆ. ಇಡೀ ದಿನ ವಿ.ಸೋಮಣ್ಣ ಪರ ಬ್ಯಾಟಿಂಗ್ ನಡೆಸಲಿರುವ ಇಬ್ಬರು ಪ್ರಭಾವಿ ನಾಯಕರು,ತಿಪಟೂರು, ತುರುವೇಕೆರೆ, ಗುಬ್ಬಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಕುಮಾರಸ್ವಾಮಿ ಹಾಗೂ ವಿಜಯೇಂದ್ರಗೆ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್‌ನ ಹಾಲಿ, ಮಾಜಿ ಶಾಸಕರು ಸಾಥ್ ನೀಡಲಿದ್ದಾರೆ.