ಇಡೀ ದೇಶದಾದ್ಯಂತ ಲೋಕಸಭಾ ಚುನಾವಣೆಯ ಕಾವು ರಂಗೆರತೊಡಗಿದೆ . ರಾಜ್ಯದಲ್ಲೂ ಕೂಡ ಈಗಾಗಲೇ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಪ್ರಮುಖ ರಾಜಕೀಯ ಪಕ್ಷಗಳು ಬಿಜೆಪಿ – ಜೆಡಿಎಸ್ (BJP – jds) ಮತ್ತು ಕಾಂಗ್ರೆಸ್ (congress) ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ್ದು ಪ್ರಚಾರ ರಂಗು ಪಡೆದುಕೊಂಡಿದೆ . ಈ ಮಧ್ಯೆ ಇದೀಗ ಹೊರಬಿಳ್ತಾ ಇರುವ ಸರ್ವೆ ವರದಿಗಳು ಆಶ್ಚರ್ಯಕ್ಕೆ ದಾರಿ ಮಾಡಿಕೊಟ್ಟಿದೆ.

ಸಾಮಾನ್ಯವಾಗಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಥವಾ ಲೋಕಸಭಾ ಚುನಾವಣೆಯೇ ಆಗಿರಲಿ ವರದಿಗಳು ತುಂಬ ದೊಡ್ಡ ಪಾತ್ರ ನಿರ್ವಹಿಸುತ್ತೆ . ಚುನಾವಣಾ ಪೂರ್ವ – ಚುನಾವಣೋತ್ತರ ಸಮೀಕ್ಷೆಗಳು (Entry poll – Exit poll) ಪ್ರತಿಬಾರಿ ಸರಿಯಾಗದಿದ್ದರೂ ಕೂಡ ಜನರ ಅಭಿಪ್ರಾಯದ ಒಂದು ಮಾದರಿಯನ್ನು ಸಂಗ್ರಹಿಸೋದ್ರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಅದೇ ರೀತಿ ಈಗ ಟೈಮ್ಸ್ ನೌ (Times now ) ನಡೆಸಿರುವ ಸರ್ವೆ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಎಷ್ಟು ಸ್ಥಾನ ಗಳಿಸುತ್ತೆ ಮತ್ತು ಕಾಂಗ್ರೆಸ್ ಎಷ್ಟು ಸ್ಥಾನ ಗಳಿಸಬಹುದು ಎಂಬ ಲೆಕ್ಕಾಚಾರ ಹೊರಬಿದ್ದಿದೆ.

ಟೈಮ್ಸ್ ನೌ ನಡೆಸಿರುವ ಸರ್ವೆ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 21ರಿಂದ 23 ಸ್ಥಾನಗಳು , ಜೆಡಿಎಸ್ ಒಂದರಿಂದ ಎರಡು ಸ್ಥಾನ , ಇನ್ನುಳಿದ ಹಾಗೆ ಕಾಂಗ್ರೆಸ್ ನಾಲ್ಕರಿಂದ ಆರು ಸ್ಥಾನ ಗೆಲ್ಲಬಹುದು ಎನ್ನುವ ವರದಿಯನ್ನು ಹೊರಬಿದ್ದಿದೆ. ಬಿಜೆಪಿ ಎಲ್ಲಾ ೨೮ ಕ್ಷೇತ್ರಗಳನ್ನ ಗೆಲ್ಲುವ ವಿಶ್ವಾಸದಲ್ಲಿದ್ದು , ಕಾಂಗ್ರೆಸ್ 20 + ಅಂತಿದೆ. ಇತ್ತ ಜೆಡಿಎಸ್ ಮೂರಕ್ಕೆ ಮೂರು ಸ್ಥಾನ ಗೆಲ್ಲೋ ಭರವಸೆ ಹೊಂದಿದೆ. ಆದ್ರೆ ಸರ್ವೆ ವರದಿ ಬೇರೆಯದ್ದೇ ಕಥೆ ಹೇಳ್ತಿದೆ.