ಮಂಡ್ಯದಲ್ಲಿ (mandya ) ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ(HD kumaraswamy ) ಪರವಾಗಿ ಹೆಚ್ಚೆಚ್ಚು ಮತ ಸೆಳೆಯಲು ಬಿಜೆಪಿ-ಜೆಡಿಎಸ್ (BJP-jds) ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಅದುವೆ ಸೆಂಟ್ರಲ್ ಮಿನಿಸ್ಟರ್ (central minister) ಅಸ್ತ್ರ . ಹೌದು ಮಂಡ್ಯದಿಂದ ಕುಮಾರಸ್ವಾಮಿ ಯನ್ನ ಗೆಲ್ಲಿಸಿದ್ರೆ ಖಂಡಿತವಾಗಿ ಅವರು ಕೇಂದ್ರದಲ್ಲಿ ಮಂತ್ರಿಯಾಗ್ತಾರೆ ಎಂದು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದಾರೆ.

ಈಗಾಗಲೇ ಸಂಸದೆ ಸುಮಲತಾ (sumalatha) ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿರುವ ಹೆಚ್.ಡಿ.ಕೆ (HDK), ಇದೀಗ ಮುಂದಿನ ತಂತ್ರಗಾರಿಕೆಯ ಕಡೆ ಗಮನಹರಿಸಿದ್ದರೆ. ಮಂಡ್ಯ ಜನ ಸ್ಟಾರ್ ಚಂದ್ರು(Star chandru ) ರನ್ನ ಗೆಲ್ಲಿಸಿದ್ರೆ ಅವರು ಕೇವಲ ಸಂಸದರಷ್ಟೇ ಆಗ್ತಾರೆ. ಅದೇ ಕುಮಾರಸ್ವಾಮಿ ಯನ್ನ ಗೆಲ್ಲಿಸಿದ್ರೆ ಕೇಂದ್ರದಲ್ಲಿ ಮಂತ್ರಿಯಾಗ್ತಾರೆ. ಮಂಡ್ಯದ ಅಭಿವೃದ್ಧಿಗೆ ಪೂರಕವಾಗಲಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಒಟ್ಟಾಗಿ ಪ್ರಚಾರ ಮಾಡ್ತಿದೆ.

ಈ ತಂತ್ರವನ್ನು ಕಾಂಗ್ರೆಸ್ ಹೇಗೆ ಕೌಂಟರ್ (counter) ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ಎಂದಿನಂತೆ ಈ ಬಾರಿ ಕೂಡ ಮಂಡ್ಯ ಹೈ ವೋಲ್ಟೇಜ್ ಕ್ಷೇತ್ರವಾಗಿದೆ.






