ಅಧಿಕಾರದ ಮದದಿಂದ ಅವರಿಗೆ ಸಾಮಾನ್ಯ ಜನರು ಕಾಣಿಸುತ್ತಿಲ್ಲ. ಅವರಿಗೆ ಕೇವಲ ಹೊಗಳು ಭಟ್ಟರು ಮಾತ್ರ ಕಾಣಿಸುತ್ತಿದ್ದಾರೆ. ಈ ಚುನಾವಣೆ ಫಲಿತಾಂಶ ಹೊರ ಬಂದ ಮೇಲೆ ಅವರಿಗೆ ಸತ್ಯ ದರ್ಶನ ಆಗಲಿದೆ ಅಂತ ಮಾಜಿ ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದ್ರು.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ರಾಣೆಬೆನ್ನೂರಿನಲ್ಲಿ ಹಿಂದುಳಿದ ವರ್ಗಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕದ ರಾಜಕಾರಣ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗುತ್ತಿದೆ. ದೊಡ್ಡ ದೊಡ್ಡ ನಾಯಕರು. ಈ ರಾಜ್ಯವನ್ನು ನಡೆಸುವಂತಹ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಗಳು ರಾಜಕೀಯ ಸಂಪೂರ್ಣ ತಮ್ಮ ಕಪಿಮುಷ್ಠಿಯಲ್ಲಿದೆ ಎಂದು ತಿಳಿದುಕೊಂಡಿದ್ದರು. ಇವತ್ತು ಅವರ ಕಪಿಮುಷ್ಠಿಯಿಂದ ಹೊರ ಬರುವ ಮೂಲಕ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದ್ದೀರಿ ಎಂದು ಹೇಳಿದರು.ಹಾಗೆಯೇಎಲ್ಲರಿಗೂ ಸದೃಢ ಬದುಕು ಕಟ್ಟಿಕೊಡುವುದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರೆಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಧಿಕಾರದ ಮದದಿಂದ ಅವರಿಗೆ ಸಾಮಾನ್ಯ ಜನರು ಕಾಣಿಸುತ್ತಿಲ್ಲ. ಅವರಿಗೆ ಕೇವಲ ಹೊಗಳು ಭಟ್ಟರು ಮಾತ್ರ ಕಾಣಿಸುತ್ತಿದ್ದಾರೆ. ಈ ಚುನಾವಣೆ ಫಲಿತಾಂಶ ಹೊರ ಬಂದ ಮೇಲೆ ಅವರಿಗೆ ಸತ್ಯ ದರ್ಶನ ಆಗಲಿದೆ ಅಂತ ಮಾಜಿ ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದ್ರು.ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ರಾಣೆಬೆನ್ನೂರಿನಲ್ಲಿ ಹಿಂದುಳಿದ ವರ್ಗಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕದ ರಾಜಕಾರಣ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗುತ್ತಿದೆ. ದೊಡ್ಡ ದೊಡ್ಡ ನಾಯಕರು. ಈ ರಾಜ್ಯವನ್ನು ನಡೆಸುವಂತಹ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಗಳು ರಾಜಕೀಯ ಸಂಪೂರ್ಣ ತಮ್ಮ ಕಪಿಮುಷ್ಠಿಯಲ್ಲಿದೆ ಎಂದು ತಿಳಿದುಕೊಂಡಿದ್ದರು. ಇವತ್ತು ಅವರ ಕಪಿಮುಷ್ಠಿಯಿಂದ ಹೊರ ಬರುವ ಮೂಲಕ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದ್ದೀರಿ ಎಂದು ಹೇಳಿದರು.ಹಾಗೆಯೇಎಲ್ಲರಿಗೂ ಸದೃಢ ಬದುಕು ಕಟ್ಟಿಕೊಡುವುದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರೆಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜನರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಸೇರಿ ಈ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ನಾವು ಅವರನ್ನು ನಮ್ಮವರಾಗಿ ಗೌರವ ಪೂರಕವಾಗಿ ನಡೆಸಿಕೊಂಡು ಹೋಗುತ್ತೇವೆ ಎಂದರು.ಬೇರೆ ರಾಜ್ಯಗಳ ಪರಿಸ್ಥಿತಿ ಬೇರೆ ಇದೆ. ಕರ್ನಾಟಕದ ಚಿತ್ರಣ ನೋಡಿದರೆ ಇಲ್ಲಿನ ಜನರು ಬಹಳ ಪಬುದ್ಧರಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ವ್ಯತ್ಯಾಸ ಗೊತ್ತಿದೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಇದ್ದಾಗ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಬೆಂಬಲ ಕೊಡಲಿಲ್ಲ. ಅವರು ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿದಾಗ ರಾಮಕೃಷ್ಣ ಹೆಗಡೆಯವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡಿದ್ದರು. ಅದೇ ರೀತಿ 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದರು. ಆದರೆ, 2014 ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಿದ್ದರು.ಕಳೆದ ಹತ್ತು ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಬಗೆಗಿನ ಅಭಿಪ್ರಾಯ ಸಾಕಷ್ಟು ಬದಲಾಗಿದೆ. ಆಗ ಎಲ್ಲೆಡೆ ಭಯೋತ್ಪಾದನೆ ಚಟುವಟಿಕೆ ಕೇಳಿ ಬರುತ್ತಿತ್ತು. ಮನಮೋಹನ್ ಸಿಂಗ್ ಅವರು ನಮ್ಮ ದೇಶದ ಮೇಲೆ ಬಾಂಬ್ ದಾಳಿಯಾದಾಗ ಪಾಕಿಸ್ತಾನಕ್ಕೆ ನಿಮ್ಮವರು ನಮ್ಮ ದೇಶದ ಮೇಲೆ ದಾಳಿ ಮಾಡಿದ್ದಾರೆ ಎಂದು ಪತ್ರ ಬರೆಯುತ್ತಿದ್ದರು. ಆದರೆ, ಮೋದಿಯವರು ಒಂದು ಸರ್ಜಿಕಲ್ ಸ್ಟೈಕ್ ಮಾಡಿ, ನಿಮ್ಮ ದೇಶದ ಒಳಗೆ ಬಂದು ಹೊಡೆಯುತ್ತೇವೆ ಎನ್ನುವ ಸಂದೇಶ ನೀಡಿದರು.

ಜನರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಸೇರಿ ಈ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ನಾವು ಅವರನ್ನು ನಮ್ಮವರಾಗಿ ಗೌರವ ಪೂರಕವಾಗಿ ನಡೆಸಿಕೊಂಡು ಹೋಗುತ್ತೇವೆ ಎಂದರು.ಬೇರೆ ರಾಜ್ಯಗಳ ಪರಿಸ್ಥಿತಿ ಬೇರೆ ಇದೆ. ಕರ್ನಾಟಕದ ಚಿತ್ರಣ ನೋಡಿದರೆ ಇಲ್ಲಿನ ಜನರು ಬಹಳ ಪಬುದ್ಧರಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ವ್ಯತ್ಯಾಸ ಗೊತ್ತಿದೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಇದ್ದಾಗ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಬೆಂಬಲ ಕೊಡಲಿಲ್ಲ. ಅವರು ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿದಾಗ ರಾಮಕೃಷ್ಣ ಹೆಗಡೆಯವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡಿದ್ದರು. ಅದೇ ರೀತಿ 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದರು. ಆದರೆ, 2014 ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಿದ್ದರು.ಕಳೆದ ಹತ್ತು ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಬಗೆಗಿನ ಅಭಿಪ್ರಾಯ ಸಾಕಷ್ಟು ಬದಲಾಗಿದೆ. ಆಗ ಎಲ್ಲೆಡೆ ಭಯೋತ್ಪಾದನೆ ಚಟುವಟಿಕೆ ಕೇಳಿ ಬರುತ್ತಿತ್ತು. ಮನಮೋಹನ್ ಸಿಂಗ್ ಅವರು ನಮ್ಮ ದೇಶದ ಮೇಲೆ ಬಾಂಬ್ ದಾಳಿಯಾದಾಗ ಪಾಕಿಸ್ತಾನಕ್ಕೆ ನಿಮ್ಮವರು ನಮ್ಮ ದೇಶದ ಮೇಲೆ ದಾಳಿ ಮಾಡಿದ್ದಾರೆ ಎಂದು ಪತ್ರ ಬರೆಯುತ್ತಿದ್ದರು. ಆದರೆ, ಮೋದಿಯವರು ಒಂದು ಸರ್ಜಿಕಲ್ ಸ್ಟೈಕ್ ಮಾಡಿ, ನಿಮ್ಮ ದೇಶದ ಒಳಗೆ ಬಂದು ಹೊಡೆಯುತ್ತೇವೆ ಎನ್ನುವ ಸಂದೇಶ ನೀಡಿದರು.