ಇದಿನಿಂದ ಐಪಿಎಲ್ ೧೭ ನೇ ಸೀಸನ್ (ipl season 17) ಆರಂಭವಾಗಲಿದ್ದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ತಂಡವನ್ನು ಎದುರಿಸಲು ಸಜ್ಜಾಗಿದೆ.

CSK ಮತ್ತು RCB ಪರಸ್ಪರ ಇದುವರೆಗೆ 31 ಪಂದ್ಯಗಳನ್ನು ಆಡಿದೆ, ಅಲ್ಲಿ CSK 20 ಮತ್ತು RCB 10 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿತು. ಇದಲ್ಲದೇ ಎಂಎ ಚಿದಂಬರಂನಲ್ಲಿ ಆಡಿದ 46 ಐಪಿಎಲ್ ಪಂದ್ಯಗಳನ್ನು ಸಿಎಸ್‌ಕೆ ಗೆದ್ದು 18 ಪಂದ್ಯಗಳಲ್ಲಿ ಸೋತಿದೆ. ಈ ಟ್ರ್ಯಾಕ್ ರೆಕಾರ್ಡ್ ಬಹಳ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಟೂರ್ನಮೆಂಟ್ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ, ಮಹೇಂದ್ರ ಸಿಂಗ್ ಧೋನಿ ರುತುರಾಜ್ ಗಾಯಕ್ವಾಡ್ ಅವರಿಗೆ ಸಿಎಸ್ಕೆ ಕ್ಯಾಪ್ಷನ್ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಈ ಘೋಷಣೆಯನ್ನು ಸಿಎಸ್‌ಕೆ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಅಧಿಕೃತಗೊಳಿಸಿದೆ.

2020 ರಲ್ಲಿ CSK ಯೊಂದಿಗೆ ಚೊಚ್ಚಲ ಪ್ರವೇಶ ಮಾಡಿದ ಗಾಯಕ್ವಾಡ್, 52 ಪಂದ್ಯಗಳಲ್ಲಿ ಐದು ಬಾರಿ IPL ಚಾಂಪಿಯನ್‌ಗಳನ್ನು ಪ್ರತಿನಿಧಿಸಿದರು. 2010, 2011, 2018, 2021, ಮತ್ತು 2023ರಲ್ಲಿ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಸೂಪರ್ ಕಿಂಗ್ಸ್ ತಂಡವನ್ನು ಅವರು ಧೋನಿ ಮಾರ್ಗದರ್ಶನದಲ್ಲಿ ಮುನ್ನಡೆಸಲಿದ್ದಾರೆ.













