ಬೆಂಗಳೂರು ಉತ್ತರ(Bangalore north) ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನಲೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ(D.V.sadananda gowda ) ಬೇಸರಗೊಂಡಿದ್ದರು ಮತ್ತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು ಕೂಡ. ಈ ಹಿನ್ನಲೆಯಲ್ಲಿ ಪಕ್ಷ ಬಿಡುವ ನಿರ್ಧಾರ ಮಾಡ್ತಾರ ಎಂಬ ಕುತೂಹಲ ಮನೆಮಾಡಿತ್ತು. ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ನನ್ನ ತೀರ್ಮಾನ ಪ್ರಕಟ ಮಾಡ್ತೀನಿ ಅಂತ ಕೂಡ ಹೇಳಿದ್ರು. ಸದಾನಂದಗೌಡರ(sadanandagowda) ಈ ನಡೆ ಕುತೂಹಲಕ್ಕೆ ಕಾರಣವಾಗಿತ್ತು. ಈಶ್ವರಪ್ಪ (Eshwarappa) ಮಾದರಿಯಲ್ಲೇ ಪಕ್ಷಕ್ಕೆ ಸೆಡ್ಡು ಹೊಡಿತಾರ ಎಂಬ ಗುಮಾನಿ ಇತ್ತು . ಆದ್ರೆ ಇದಕ್ಕೆ ಸದಾನಂದಗೌಡ ನೋ ಎಂದಿದ್ದಾರೆ.

ಮಾಜಿ ಸಿಎಂ ಸದಾನಂದಗೌಡರ ಅಸಮಾಧಾನವನ್ನ ಬಂಡವಾಳವಾಗಿಸಿಕೊಳ್ಳೋ ಪ್ಲಾನ್ ಕಾಂಗ್ರೆಸ್ (congress) ನಾಯಕರದ್ದಾಗಿತ್ತು. ಖುದ್ದು ಡಿಕೆಶಿ (DKS) ಗೌಡರಿಗೆ ಕಾಂಗ್ರೆಸ್ ಸೇರಿ ಸ್ಪರ್ಧೆ ಮಾಡುವಂತೆ ಗಾಳ ಹಾಕಿದ್ರು. ಈ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿತ್ತು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಶೋಭಾ ಕರಂದ್ಲಾಜೆ (shoba karandlaje) ವಿರುದ್ಧ ಸಂದಾನಂದ ಗೌಡ ಸಮರಕ್ಕೆ ಇಳಿತಾರ ಎಂಬ ಲೆಕ್ಕಾಚಾರಗಳು ಇದ್ದವು. ಇದೆಲ್ಲವನ್ನೂ ಸದಾನಂದಗೌಡ್ರು ಸುಳ್ಳಾಗಿಸಿದ್ದಾರೆ.

ನನಗೆ ಕಾಂಗ್ರೆಸ್ ನಿಂದ (congress) ಆಫರ್ (offer) ಬಂದಿರೋದು ನಿಜ. ಆದ್ರೆ ನಾನು ಬಿಜೆಪಿ (BJP) ಬಿಟ್ಟು ಹೋಗಲ್ಲ. ಇಲ್ಲೇ ಇದ್ದುಕೊಂಡು ಪಕ್ಷವನ್ನು ಶುದ್ಧೀಕರಣ ಮಾಡುವ ಕೆಲಸ ಮಾಡ್ತೀನಿ ಎಂದು ಸ್ಪಷ್ಟನೆ ಕೊಟ್ಟಿದ್ದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಬಿಗ್ ರಿಲೀಫ್ (Big relief) ಸಿಕ್ಕಂತಾಗಿದೆ. ಇನ್ನಾದ್ರೂ ಕ್ಷೇತ್ರ ಪರ್ಯಟನೆ ಮಾಡಿ ಬಿಜೆಪಿ ಅಭ್ಯರ್ಥಗೆ ಗೌಡ್ರು ಸಾಥ್ ಕೊಡ್ತಾರ ಕಾದು ನೋಡಬೇಕಿದೆ.












